Trending Now: || ನ್ಯೂಸ್ ನೋಡುವ ಹೊಸ ವಿಧಾನ….ಲಾಗ್ ಆನ್ ಟು ಜಸ್ಟ್ ಕನ್ನಡ ಡಾಟ್ ಇನ್………// ಆ ಕ್ಷಣದ ಸುದ್ಧಿಯನ್ನೇ ಆ ಕ್ಷಣವೇ ಓದಿರಿ….||


 • AIISH ವತಿಯಿಂದ ‘ಹಿಂದಿ ಸಪ್ತಾಹ ಕಾರ್ಯಕ್ರಮ

  Sep 17, 2014 10:36

  AIISH ವತಿಯಿಂದ ‘ಹಿಂದಿ ಸಪ್ತಾಹ ಕಾರ್ಯಕ್ರಮ

  ಮೈಸೂರು: ಸಾಧ್ಯವಾದಷ್ಟು ಹಿಂದಿ ಭಾಷೆಯ ಬಳಕೆಯನ್ನು ಹೆಚ್ಚಿಸಲು ಮೈಸೂರಿನ ಅಖಿಲಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ‘ಹಿಂದಿ ಸಪ್ತಾಹ 2014’ನ್ನು ಹಮ್ಮಿಕೊಂಡಿದೆ. ಸೋಮವಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ AIISH ನ ನಿರ್ದೇಶಕಿ ಡಾ.ಎಸ್.ಆರ್ ಸಾವಿತ್ರಿ “ಬಳಕೆಯ ದೃಷ್ಟಿಯಿಂದ ಹಿಂದಿ ವಿಶಾಲ ಭಾಷೆಯಾಗಿದೆ. ಆದ್ದರಿಂದ ಹಿಂದಿ ಭಾಷೆಯನ್ನು ಕೇಂದ್ರ ಸರ್ಕಾರ ಅಧಿಕೃತ ಭಾಷೆಯನ್ನಾಗಿ ಘೋಷಿಸಿದೆ. ವಿವಿಧ ಭಾಷೆಗಳನ್ನಾಡುವ, ಅನೇಕ ಸಂಸ್ಕೃತಿಯ ಜನರಿದ್ದಾರೆ. ದಿನ ನಿತ್ಯದ ಕೆಲಸಗಳಲ್ಲಿ ಹಿಂದಿ ಭಾಷೆ ಬಳಕೆಯಿಂದ ಏಕತೆಯ […]

   
 • ಎವರ್ ಗ್ರೀನ್ ಹೀರೋ ಅನಂತ್ ಆದ್ರು ಸಿಂಗರ್

  Sep 17, 2014 10:26

  ಎವರ್ ಗ್ರೀನ್ ಹೀರೋ ಅನಂತ್ ಆದ್ರು ಸಿಂಗರ್

  ಕನ್ನಡದ ಎವರ್ ಗ್ರೀನ್ ಹೀರೋ ಅನಂತ್ ನಾಗ್ ಈಗ ಸಿಂಗರ್ ಆಗಿದ್ದಾರೆ! ಹೌದು. ಕ್ರಿಷ್ ಜೋಷಿ ನಿರ್ದೇಶನದ ಚಿತ್ರದಲ್ಲಿ ಹಾಡುವ ಮೂಲಕ ಎಲ್ಲರನ್ನು ಚಕಿತಗೊಳಿಸಿದ್ದಾರೆ ಅನಂತ್. ಕನ್ನಡ ಚಿತ್ರಕ್ಕಾಗಿ ಶಾಯರಿಗಳಿಗೆ ತಮ್ಮ ಧ್ವನಿಯನ್ನು ನೀಡುವ ಮೂಲಕ ಚಲನಚಿತ್ರ ಗಾಯಕರಾಗಿದ್ದಾರೆ. ಈ ಮೂಲಕ ಚಿತ್ರರಂಗ ಪ್ರವೇಶಿಸಿದಂದಿನಿಂದ ತಮ್ಮ ಅಭಿನಯದಿಂದ ಎಲ್ಲರ ಮನಸೂರೆಗೊಂಡಿದ್ದ ಅನಂತ್‌ನಾಗ್ ಮೊದಲ ಬಾರಿಗೆ ಕಂಠಧಾನ ಮಾಡಿದ್ದಾರೆ. ತಮ್ಮ 66ರ ಹರೆಯದಲ್ಲಿ ತಾವು ಸೊಗಸಾಗಿ ಹಾಡಬಲ್ಲರು ಎಂಬುದನ್ನು ನಿರೂಪಿಸಿದ್ದಾರೆ. ಯೋಗ್‌ರಾಜ್ ಭಟ್ ನಿರ್ದೇಶನದ ಚಿತ್ರದಲ್ಲಿ […]

   
 • ಹಸಿರು ಕಾನನದ ನಡುವೆ ಇಂದಿನಿಂದ ‘ಯುವ ಸಂಭ್ರಮ’!

  Sep 17, 2014 10:10

  ಹಸಿರು ಕಾನನದ ನಡುವೆ ಇಂದಿನಿಂದ ‘ಯುವ ಸಂಭ್ರಮ’!

  ಮೈಸೂರು: ಯುವ ದಸರಾಗೂ ಮುನ್ನ ಆರಂಭವಾಗುವ ಯುವ ಸಂಭ್ರಮಕ್ಕೆ ಇಂದು ಸಂಭ್ರಮದ ಚಾಲನೆಗೆ ಸಿಗಲಿದೆ. ಯುವ ದಸರಾ ಉಪ ಸಮಿತಿ ವತಿಯಿಂದ ಆಯೋಜಿಸಿರುವ ಸಂಭ್ರಮಕ್ಕೆ ಹಸಿರು ಕಾನನದ ನಡುವೆ ಇರುವ ಮಾನಸ ಗಂಗೋತ್ರಿ ಬಯಲು ರಂಗ ಮಂದಿರ ಸಜ್ಜಾಗಿದೆ. ಸಂಭ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ 120ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ತಯಾರಿ ನಡೆಸಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವೇದಿಕೆ ಮೇಲೆ ಧಮಾಕ ಮಾಡಲು ಯುವ ಸಮೂಹ ರೆಡಿಯಾಗಿದೆ. ಇನ್ನು ಇಂದು […]

   
 • ‘ಚಾಮ ಚೆಲುವೆ’ಗೆ ಕೊನೆಗೂ ಮುಕ್ತಿ…!

  Sep 17, 2014 9:50

  ‘ಚಾಮ ಚೆಲುವೆ’ಗೆ ಕೊನೆಗೂ ಮುಕ್ತಿ…!

  ಮೈಸೂರು: ನಟ ಮಂಡ್ಯ ರಮೇಶ್ ನಿರ್ದೇಶದನ ಚಾಮಚೆಲುವೆ ನಾಟಕಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಕೋರ್ಟ್ ಮೆಟ್ಟಿಲೇರಿದ್ದ ‘ಚಾಮಚೆಲುವೆ’ ಕೃತಿ ಚೌರ್ಯ ವಿವಾದ ರಾಜೀ ಸಂದಾನದ ಮೂಲಕ ಕೊನೆಗೊಂಡಿದೆ. ಜಾನಪದ ತಜ್ಞ ಪಿ.ಕೆ.ರಾಜಶೇಕರ್ ಚಾಮಚೆಲುವೆ ನನ್ನ ಕೃತಿಯೊಂದರ ನಕಲು.  ಲೇಖಕರು ಇದನ್ನು ಕದ್ದಿದ್ದಾರೆ ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಚಾಮಚೆಲುವೆ ನಾಟಕ ಪ್ರದರ್ಶನಕ್ಕೆ ತಡೆಯೊಡ್ಡಿತ್ತು. ಪ್ರಕರಣದ ವಿಚಾರಣೆಗೆ ನಡೆಸಿದ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಪ್ರಕರಣವನ್ನು ಮಾತುಕತೆ ಮೂಲಕ ಇತ್ಯರ್ಥ ಪಡಿಸಿಕೊಂಡರೆ […]

   
 • ಸಕ್ಸೆಸ್ ಆಯಿತು ಆಪರೇಷನ್; ಹೊಟ್ಟೆಯಲ್ಲೇ ಉಳಿಯಿತು ಬ್ಯಾಂಡೇಜ್

  Sep 17, 2014 9:48

  ಸಕ್ಸೆಸ್ ಆಯಿತು ಆಪರೇಷನ್; ಹೊಟ್ಟೆಯಲ್ಲೇ ಉಳಿಯಿತು ಬ್ಯಾಂಡೇಜ್

  ಕುಂದಾಪುರ (ಉಡುಪಿ ಜಿಲ್ಲೆ): ಹೆರಿಗೆಯಾಗಿ ಮೂರು ತಿಂಗಳ ಬಳಿಕ ರಕ್ತಸ್ರಾವದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಗರ್ಭಕೋಶದಲ್ಲಿದ್ದ ಬಟ್ಟೆಯ ಚೂರನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಬೆಂಗಳೂರಲ್ಲಿ ಹೊಟೆಲೊಂದನ್ನು ನಡೆಸುತ್ತಿರುವ ಅರುಣಕುಮಾರ್ ಶೆಟ್ಟಿ ಅವರ ಪತ್ನಿ ಸುಲೋಚನಾ ಶೆಟ್ಟಿ (31) ಎಂಬುವರೇ ಚಿಕಿತ್ಸೆಗೆ ಒಳಗಾದ ಮಹಿಳೆಯಾಗಿದ್ದಾರೆ. ಸುಲೋಚನಾ ಅವರಿಗೆ ಜೂನ್ 25 ರಂದು ಸಿಸೇರಿಯನ್ ಮೂಲಕ ಹೆಣ್ಣು ಮಗು ಹುಟ್ಟಿತ್ತು. ಆಸ್ಪತ್ರೆಯಿಂದ ಮನೆಗೆ ತೆರಳಿದ ಬಳಿಕವೂ ಅವರಿಗೆ ತೀವ್ರ ರಕ್ತಸ್ರಾವವಾಗುತ್ತಿತ್ತು. ಈ […]

   
 • ಇಂದು ಮೋದಿ ತವರಿಗೆ ಚೀನಾ ಅಧ್ಯಕ್ಷ

  Sep 17, 2014 9:37

  ಇಂದು ಮೋದಿ ತವರಿಗೆ ಚೀನಾ ಅಧ್ಯಕ್ಷ

  ಅಹಮದಾಬಾದ್: ಚೀನಾ ಆಧ್ಯಕ್ಷ ಜಿನ್‌ಪಿಂಗ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಇಂದು ಆಗಮಿಸುತ್ತಿದ್ದಾರೆ.  ಇನ್ನು ಸ್ವತಃ ಮೋದಿ ಅವರೇ ಚೀನಾ ಅಧ್ಯಕ್ಷರನ್ನು ಸ್ವಾಗತಿಸಲು ತಯಾರಿ ನಡೆಸಿದ್ದಾರೆ. ಈ ನಡುವೆ ಮತ್ತೊಂದು ವೈಶಿಷ್ಟ್ಯತೆ ಎಂದರೆ ಗುಜರಾತ್‌ನಿಂದ ಭಾರತ ಪ್ರವಾಸ ಆರಂಭಿಸುತ್ತಿರುವ ಮೊದಲ ವಿಶ್ವ ನಾಯಕ ಜಿನ್ ಪಿಂಗ್. ಸಾಮಾನ್ಯವಾಗಿ ವಿದೇಶಿ ಗಣ್ಯರು ದಿಲ್ಲಿಯಿಂದ ಪ್ರವಾಸ ಆರಂಭಿಸುತ್ತಾರೆ. ಜಿನ್‌ಪಿಂಗ್ ಅವರು ಪತ್ನಿ ಪೆಂಗ್ ಲಿಯುವಾನ್ ಹಾಗೂ ಉನ್ನತ ಮಟ್ಟದ ನಿಯೋಗದೊಂದಿಗೆ ಕೊಲೊಂಬೊದಿಂದ ನೇರವಾಗಿ ಅಹಮದಾಬಾದ್‌ನಲ್ಲಿ […]

   
 • ಕೆಎಂಎಫ್ ಅಧ್ಯಕ್ಷರಾಗಿ ಕಾಂಗ್ರೆಸ್ ನ ಪಿ.ನಾಗರಾಜ್ ಆಯ್ಜೆ ಖಚಿತ…!

  Sep 17, 2014 6:19

  ಕೆಎಂಎಫ್ ಅಧ್ಯಕ್ಷರಾಗಿ ಕಾಂಗ್ರೆಸ್ ನ ಪಿ.ನಾಗರಾಜ್ ಆಯ್ಜೆ ಖಚಿತ…!

  ಬೆಂಗಳೂರು, ಸೆ.17 : ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಬೆಂಗಳೂರು ಒಕ್ಕೂಟ ನಿರ್ದೇಶಕ ಪಿ.ನಾಗರಾಜ್ ಅವಿರೋಧ ಆಯ್ಕೆ ಖಚಿತಗೊಂಡಿದೆ. ಜಿ.ಸೋಮಶೇಖರ ರೆಡ್ಡಿ ಅಧಿಕಾರ ಅವಧಿ ಪೂರ್ಣಗೊಂಡ ನಂತರ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದೆ. ಕೆಎಂಎಫ್ನ ಒಟ್ಟು 13 ಒಕ್ಕೂಟಗಳ ಪೈಕಿ 11ರಲ್ಲಿ ಕಾಂಗ್ರೆಸ್ ನಿರ್ದೇಶಕರು ಇರುವುದರಿಂದ ಕೆಎಂಎಫ್ ಅಧಿಕಾರ ಸುಲಭವಾಗಿ ಕಾಂಗ್ರೆಸ್ ಪಾಲಾಗಲಿದೆ. ಕೆಎಂಎಫ್ನ ಅಧ್ಯಕ್ಷ ಸ್ಥಾನಕ್ಕೆ 17 ಮಂದಿಗೆ ಮತದಾನದ ಅವಕಾಶಬಿದ್ದು, ಈ ಪೈಕಿ […]

   
 • ಅರಮನೆ ಮುಂದೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ದಸರಾ ಅಲ್ಲ, ಅದು ಸರಕಾರದ ನಾಡಹಬ್ಬ : ರಾಣಿ ಪ್ರಮೋದಾದೇವಿ

  Sep 17, 2014 6:09

  ಅರಮನೆ ಮುಂದೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ದಸರಾ ಅಲ್ಲ, ಅದು ಸರಕಾರದ ನಾಡಹಬ್ಬ : ರಾಣಿ ಪ್ರಮೋದಾದೇವಿ

  ಮೈಸೂರು, ಸೆ.17 : ಅರಮನೆ ಮುಂದೆ 10 ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ದಸರಾ ಅಲ್ಲ.ಅದು ರಾಜ್ಯ ಸರಕಾರ ನಡೆಸುವ ನಾಡಹಬ್ಬಮಾತ್ರ . ದಸರಾ ಎಂದರೇ ರಾಜಮನೆತನದವರ ಧಾರ್ಮಿಕಾಚರಣೆ. ಪೂಜ-ವಿಧಿವಿಧಾನಗಳೊಂದಿಗೆ ನಡೆಸುವ ರಾಜಮನೆತನದ ಹಬ್ಬ. ಇದನ್ನು ಸರಕಾರ ಮಾಡಲಾಗದು ಎಂದು ರಾಣಿ ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಿದ್ದಾರೆ. ಬೇಸಿಗೆ ಹಾಗೂ ಮಳೆಗಾಲ ಕಳೆದ ನಂತರ ನಡೆಯುವ ಈ ಸಂಪ್ರಾದಾಯಿಕ ಹಬ್ಬ ದೇವರಿಗೆ ಕೃತಜ್ಞತೆ ಸಲ್ಲಿಸುವ ಕ್ರಮವಾಗಿದೆ. ಪ್ರಜೆಗಳ ಪರವಾಗಿ ದೇವತೆಗಳಿಗೆ […]

   
 • just ಮೈಸೂರು…….

  Sep 16, 2014 23:18

  just ಮೈಸೂರು…….

          * ಅಹವಾಲು ಸ್ವೀಕರಿಸಿದ ಸಂಸದ ಸಿಂಹ : ನಗರದ ಮೈಸೂರು-ಹುಣಸೂರು ರಸ್ತೆಯಲ್ಲಿರುವ ಜಲದರ್ಶಿನಿ ಅತಿಥಿಗೃಹದ ಸಂಸದ ಪ್ರತಾಪ ಸಿಂಹ ಅವರು ತಮ್ಮ ಕಚೇರಿಯಲ್ಲಿ ಮಂಗಳವಾರ ನಡೆಸಿದ ಜನಸ್ಪಂದನ ಸಭೆಗೆ ಸಾರ್ವಜನಿಕರಿಂದ ನೂರಾರು ಮನವಿ, ದೂರುಗಳ ಮಹಾಪೂರವೇ ಹರಿದುಬಂದವು. ಕೆ.ಜಿ.ಕೊಪ್ಪಲಿನ ರೈಲ್ವೆ ಕೆಳಸೇತುವೆಯ ಸಮೀಪದಲ್ಲಿ ರೆಲ್ವೆ ಹಳಿಯಿಂದ ಸುಮಾರು 40 ಅಡಿ ಅಂತರದಲ್ಲಿ ಕಳೆದ ಹತ್ತು ವರ್ಷಗಳಿಂದ ಪೆಟ್ಟಿಗೆ ಟೀ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದೇನೆ. […]

   
 • ದಸರ ಆಚರಣೆ ಬಗ್ಗೆ ಮಹಾರಾಣಿ ಸಲಹೆಗೆ ಮನ್ನಣೆ ನೀಡಿ : ಸಂಸದ ಸಿಂಹ ಆಗ್ರಹ

  Sep 16, 2014 23:11

  ದಸರ ಆಚರಣೆ ಬಗ್ಗೆ ಮಹಾರಾಣಿ ಸಲಹೆಗೆ ಮನ್ನಣೆ ನೀಡಿ : ಸಂಸದ ಸಿಂಹ ಆಗ್ರಹ

  ಮೈಸೂರು, ಸೆ. 16 : ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಸಂಬಂದಿಸಿದಂತೆ ರಾಣಿ ಪ್ರಮೋದಾ ದೇವಿ ಅವರ ಹೇಳಿಕೆಯನ್ನು ರಾಜ್ಯ ಸರಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟರು. ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗಾರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಸಿದ ಅವರು, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ತೀರಿಕೊಂಡು ಇನ್ನೂ ಒಂದು ವರ್ಷ ಕಳೆದಿಲ್ಲ. ಸೂತಕದ ವಾತಾವರವಿರುವ ಈ ಸಂದರ್ಭದಲ್ಲಿ ರಾಣಿ ಅವರ ಅಭಿಪ್ರಾಯವನ್ನು ಸರಕಾರ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು […]

   
 • ಅರಮನೆ ಪ್ರವೇಶ ಸಮಯ ಬದಲು

  Sep 16, 2014 23:05

  ಅರಮನೆ ಪ್ರವೇಶ ಸಮಯ ಬದಲು

  ಮೈಸೂರು,ಸೆ.16. ದಸರಾ ಮಹೋತ್ಸವದ ಅಂಗವಾಗಿ ಅರಮನೆಯ ಅಂಬಾವಿಲಾಸ್ ನಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಯುವುದರಿಂದ ಅರಮನೆ ಪ್ರವೇಶ ಸಮಯವನ್ನು ಸೆಪ್ಟೆಂಬರ್ 18 ರಂದು ಮಧ್ಯಾಹ್ನ 1 ಗಂಟೆಯಿಂದ 5-30 ಗಂಟೆಯವರೆಗೆ ಸೀಮಿತಗೊಳಿಸಲಾಗಿದೆ. ಅರಮನೆ ಒಳಭಾಗದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯುವುದರಿಂದ ಸೆಪ್ಟೆಂಬರ್ 25 ರಂದು ಮಧ್ಯಾಹ್ನ 1-30 ಗಂಟೆಯಿಂದ 5 ಗಂಟೆಯವರೆಗೆ, ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 2 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ, ಅಕ್ಟೋಬರ್ […]

   
 • ದಸರಾಗೆ ವಿಘ್ನ : ಮಾರಮ್ಮಂಗೂ ಬೋರಾಗೋಯ್ತಾ…?

  Sep 16, 2014 22:54

  ದಸರಾಗೆ ವಿಘ್ನ : ಮಾರಮ್ಮಂಗೂ ಬೋರಾಗೋಯ್ತಾ…?

  ಮೈಸೂರು, ಸೆ.16 : ಈ ಬಾರಿಯ ನಾಡಹಬ್ಬ ದಸರಾಗೆ ಆರಂಭದಲ್ಲೇ ವಿಘ್ನ ಎದುರಾಗಿದೆಯೇ ಎಂಬ ಪ್ರಶ್ನೆ ಇದೀಗ ಎಲ್ಲರ ಮನಸ್ಸಿನಲ್ಲಿ ಆತಂಕ ಉಂಟುಮಾಡಿದೆ.  ಮೈಸೂರು ನಗರದಲ್ಲಿ ಮಂಗಳವಾರ ನಡೆದ ಘಟನೆಗಳು ನಿಜಕ್ಕೂ ಅಮಂಗಳಕರವಾದವುಗಳು. ಈ ಹಿನ್ನೆಲೆಯಲ್ಲಿ ನಗರದ ಜನತೆಯಲ್ಲಿ ಇಂಥದ್ದೊಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ. ರಾಜ ವಂಶಸ್ಥ ಶ್ರೀಕಂಠ ದತ್ತ ನರಸಿಂಹ ರಾಜ ಒಡೆಯರ್ ಅವರು ನಿಧನರಾದ ಬಳಿಕ ನಡೆದ ಭಾರೀ ಬೆಳವಣಿಗೆಯಿಂದ ಇಂತಹದ್ದೊಂದು ಪ್ರಶ್ನೆ ಎದುರಾಗದೇ ಇರದು. ಬೆಳಿಗ್ಗೆ ಮೈಸೂರಿಗೆ […]

   
 • ನಗರದ ಕೋಟೆ ಮಾರಮ್ಮ ದೇವಾಲಯದ ಮೇಲೆ ಉರುಳಿಬಿದ್ದ ಅರಳಿಮರ ; ವೃದ್ದೆ ಸಾವು, ಐವರು ಗಂಭೀರಗಾಯ…

  Sep 16, 2014 18:08

  ನಗರದ ಕೋಟೆ ಮಾರಮ್ಮ ದೇವಾಲಯದ ಮೇಲೆ ಉರುಳಿಬಿದ್ದ ಅರಳಿಮರ ; ವೃದ್ದೆ ಸಾವು, ಐವರು ಗಂಭೀರಗಾಯ…

  ಮೈಸೂರು: ಸಾಂಸ್ಕೃತಿಕ ನಗರಿಯ ಅರಮನೆ ಆವರಣದಲ್ಲಿರುವ ಕೋಟೆ ಮಾರಮ್ಮ ದೇವಾಲಯದ ಮೇಲೆ ಅರಳಿಮರ ಉರುಳಿದ ಪರಿಣಾಮ ವೃದ್ದಯೊಬ್ಬರು ಮೃತರಾಗಿದ್ದು, ಐವರು ಗಂಭೀರ ಗಾಯವಾಗಿ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ಮೃತ ವೃದ್ದೆಯನ್ನು ಸುಶೀಲಮ್ಮ(68) ಎಂದು ಗುರುತಿಸಲಾಗಿದೆ. ಗಾಯಗೊಂಡ ಐವರನ್ನು  ಸಿದ್ದರಾಜು, ಮಂಜುಳಾ ( 65), ರವಿಚಂದ್ರ( 9), ಕನಕ(38) ಮತ್ತು ಶೈಲಜಾ(35) ಎಂದು ತಿಳಿ ದುಬಂದಿದೆ. ಗಾಯಗೊಂಡ ಐವರನ್ನೂ ಕೆ.ಆರ್.ಮೊಹಲ್ಲಾದ ಸುಣ್ಣದಕೇರಿ ನಿವಾಸಿಗಳು ಎಂದು ಹೇಳಲಾಗಿದೆ. ಅಲ್ಲದೇ, ಗಾಯಾಳುಗಳನ್ನು ಚಿಕಿತ್ಸೆಗಾಗಿ […]

   
 • ನಮ್ಮ ಶಾಲೆಯ ಮಕ್ಕಳು ಸಾರಾಯಿ ಕುಡಿದೇ ಹುಟ್ಟಿದ್ದಾರೆ!

  Sep 16, 2014 17:34

  ನಮ್ಮ ಶಾಲೆಯ ಮಕ್ಕಳು ಸಾರಾಯಿ ಕುಡಿದೇ ಹುಟ್ಟಿದ್ದಾರೆ!

  ಝಾರ್ಕಂಡದ ಗಢವಾ ಜಿಲ್ಲೆಯ ಶಾಲೆಯ ಮಕ್ಕಳಿಗೆ ಸಾರಾಯಿ ಕುಡಿಸಿ ಅಶ್ಲೀಲ ಚಿತ್ರ ತೋರಿಸುತ್ತಾರೆ ಎಂದು ತಿಳಿದುಬಂದಿದೆ! ಈ ಶಾಲೆಯ ಮಕ್ಕಳಿಗೆ ಊಟ ಕೊಡುತ್ತಿಲ್ಲ ಎಂಬ ಅಪವಾದ ಶಿಕ್ಷಕರ ಮೇಲಿದ್ದರೆ, ಶಿಕ್ಷಕರನ್ನು ಕಟ್ಟಿಹಾಕುತ್ತಾರೆಂಬ ಅಪವಾದ ಮಕ್ಕಳ ಮೇಲಿತ್ತು! ಈ ಘಟನೆಗಳನ್ನು ಪರಿಶೀಲಿಸುವುದಕ್ಕಾಗಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿ (ಪಿಯುಸಿಎಲ್) ಯ ಒಂದು ಗುಂಪನ್ನು ಆಯೋಜಿಸಲಾಗಿತ್ತು. ಈ ಗುಂಪು ಸ್ಥಳ ಪರೀಕ್ಷಣೆ ಮಾಡಿದಾಗ ಅವರಿಗೆ ಕಂಡದ್ದು ಮಕ್ಕಳಿಗೆ ಸಾರಾಯಿ ಕುಡಿಸಿ ಅಶ್ಲೀಲ […]

   
 • ಜಗತ್ತಿನ ಮೊದಲ ಸ್ಮಾರ್ಟ್ ಫೋನ್

  Sep 16, 2014 16:45

  ಜಗತ್ತಿನ ಮೊದಲ ಸ್ಮಾರ್ಟ್ ಫೋನ್

  ಇಂದಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಗಳ ಸಂಖ್ಯೆ ಹೆಚ್ಚುತ್ತಿದೆ. ಯಾರ ಬಳಿ ನೋಡಿದರೂ ಹಲವಾರು ರೀತಿಯ ಅಪ್ಲಿಕೇಷನ್ ಗಳು ಇರುವ ಮೊಬೈಲ್ ಕಾಣುತ್ತದೆ. ಎಲ್ಲ ಮೊಬೈಲ್ ಗಳೂ ಸ್ಮಾರ್ಟ್ ಪೋನಿನ ರೂಪ ಪಡೆದಿದೆ. ಆದರೆ ಮೊಟ್ಟ ಮೊದಲ ಸ್ಮಾರ್ಟ್ ಫೋನ್ ಯಾವುದು ಅದು ಹೇಗಿತ್ತೆಂಬುದನ್ನು ತಿಳಿದವರು ಕಡಿಮೆ. ಜಗತ್ತಿನ ಮೊಟ್ಟಮೊದಲ ಸ್ಮಾರ್ಟ್ ಫೋನ್ ಒಂದು ಬಾಕ್ಸ್ ನಂತೆ ಇತ್ತು. ಅದರ ಹೆಸರು ಐಬಿಎಮ್ ಸಿಮೋನ್. ಇದನ್ನು ಮೊದಲ ಬಾರಿಗೆ 1994 […]

   
 • ನಟ ಕಮಲ್ ಹಾಸನ್ ಆರೋಗ್ಯ ಏರು-ಪೇರು ; ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲು…

  Sep 16, 2014 14:28

  ನಟ ಕಮಲ್ ಹಾಸನ್ ಆರೋಗ್ಯ ಏರು-ಪೇರು ; ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲು…

  ಚೆನ್ನೈ: ಬಹುಭಾಷಾ ನಟ ಕಮಲಹಾಸನ್ ಆರೋಗ್ಯದಲ್ಲಿ ಏರು-ಪೇರಾಗಿ ಮಂಗಳವಾರ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿರುವ ಕಮಲ ಹಾಸನ್ ಅವರಿಗೆ ಆಹಾರದಲ್ಲಿ ವ್ಯಾತ್ಯಾಸ ಉಂಟಾಗಿ ಹೊಟ್ಟೆನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ. ಕಮಲಹಾಸನ್ ಅವರ ಆರೋಗ್ಯದ ವಿಚಾರದಲ್ಲಿ ಅಭಿಮಾನಿಗಳು ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಹೇಳಿಕೊಳ್ಳುವಂತಹ ಅಪಾಯವಿಲ್ಲದ ಕಮಲ ಹಾಸನ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇಂದು ಸಂಜೆ ಅಥವಾ ನಾಳೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ . By […]

   
 • ಅಪಘಾತ ತಪ್ಪಿಸಲು KSRTC ಬಸ್ ಚಾಲಕನ ಯತ್ನ ; ನಿಯಂತ್ರಣ ತಪ್ಪಿ ದಳವಾಯಿ ಕೆರೆಗೆ ಬಿದ್ದ ಬಸ್ ; 25 ಪ್ರಯಾಣಿಕರು ಸುರಕ್ಷಿತ…

  Sep 16, 2014 14:10

  ಅಪಘಾತ ತಪ್ಪಿಸಲು KSRTC ಬಸ್ ಚಾಲಕನ ಯತ್ನ ; ನಿಯಂತ್ರಣ ತಪ್ಪಿ ದಳವಾಯಿ ಕೆರೆಗೆ ಬಿದ್ದ ಬಸ್ ; 25 ಪ್ರಯಾಣಿಕರು ಸುರಕ್ಷಿತ…

  ಮೈಸೂರು: ವೇಗವಾಗಿ ಬರುತ್ತಿದ್ದ ಟಿಪ್ಪರ್ ವಾಹನಕ್ಕೆ ಡಿಕ್ಕಿಹೊಡೆಯುವುದನ್ನು ತಪ್ಪಿಸಲು ಯತ್ನಿಸಿದ ಕೆಎಸ್ಆರ್ಟಿಸಿ ಬಸ್ಸೊಂ ದು ಚಾಲಕನ ನಿಯಂತ್ರಣ ತಪ್ಪಿ ದಳವಾಯಿ ಕೆರೆಗೆ ಉರುಳಿಬಿದ್ದ ಘಟ ನೆ ಮಂಗಳವಾರ ನಡೆದಿದೆ. ಚಾಮರಾಜನಗರದಿಂದ ಮೈಸೂರಿನ ಕಡೆ ಬರುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಭಾಗಶಃ ಕೆರೆಗೆ ಉರುಳಿದರೂ ಪ್ರಯಾಣಿಸುತ್ತಿದ್ದ 25 ಮಂದಿ ಯೂ ಅದೃಷ್ಠವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೈಸೂರು-ನಂಜನಗೂಡು ಹೆದ್ದಾರಿಯಲ್ಲಿ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿಗೆ ಎದುರಾಗಿ ಟಿಪ್ಪರ್ ವೊಂದು ವೇಗವಾಗಿ ಬರುತ್ತಿ […]

   
 • ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದು ಮೋದಿ; ಬಿಜೆಪಿಯಲ್ಲ ; ಇದು ಗುಜರಾತ್ ಮತದಾರನ ತೀರ್ಪು…

  Sep 16, 2014 13:12

  ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದು ಮೋದಿ; ಬಿಜೆಪಿಯಲ್ಲ ; ಇದು ಗುಜರಾತ್ ಮತದಾರನ ತೀರ್ಪು…

  ಗುಜರಾತ್: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಮಾಡುವ ಬಿಜೆಪಿ ಕನಸು ಭಗ್ನವಾಗಿದೆ. ಯೆಸ್, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗುಜರಾತ್ ನಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಈ ಹಿನ್ನೆಲೆಯಲ್ಲಿ ವಿಧಾನಸಭಾ ಉಪ-ಚುನಾವಣೆಯಲ್ಲೂ ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಎಲ್ಲರ ನಿರೀಕ್ಷೆ ಹುಸಿಯಾಗಿದ್ದು, ಬಿಜೆಪಿ 6 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಕಂಡಿದ್ದರೆ, ಕಾಂಗ್ರೆಸ್ 3 ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿ ದೆ. ದಾಂಕಾರ, ಮಣಿನಗರ, ಲಮೇಡ್ಕಾ, […]

   
 • ಭಾರ ಹೊತ್ತು ಹೆಜ್ಜೆ ಹಾಕಿದ ಗಜಪಡೆ!

  Sep 16, 2014 12:41

  ಭಾರ ಹೊತ್ತು ಹೆಜ್ಜೆ ಹಾಕಿದ ಗಜಪಡೆ!

  ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ ಆರಂಭಕ್ಕೆ ಕೆಲವೇ ಕೆಲ ದಿನಗಳು ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಗಜಪಡೆಗಳ ತಾಲೀಮು ಭರದಿಂದ ಸಾಗುತ್ತಿದೆ.  ಮಂಗಳವಾರ ನಡೆದ ತಾಲೀಮಿನಲ್ಲಿ ಆನೆಗಳಿಗೆ ಭಾರ ಹೊರಿಸಿ ತಾಲೀಮು ನಡೆಸಲಾಯಿತು. ದಸರಾ ಮಹೋತ್ಸವ ಅಂದ್ರೆ ಆಕರ್ಷಕ ಗಜಪಡೆಗಳ ಜಂಬೂಸವಾರಿಯೇ ಪ್ರಮುಖ ಆಕರ್ಷಣೆ. ಅಂಬಾರಿ ಆನೆ ಬಲರಾಮನ ಜತೆ ಇತರೆ ಆನೆಗಳು ಸಾಗುವುದನ್ನು ನೋಡುವುದೇ ಚೆಂದ. ಈ ಮೆರವಣಿಗೆಯಲ್ಲಿ ಭಾಗವಹಿಸುವ ಗಜಪಡೆಗಳ ತಾಲೀಮು […]

   
 • ದಸರಾ ‘ಕ್ರೀಡಾ’ ಉತ್ಸವದಲ್ಲಿ ‘ತೋಳ್ಬಲ ಪರೀಕ್ಷೆ!’

  Sep 16, 2014 12:26

  ದಸರಾ ‘ಕ್ರೀಡಾ’ ಉತ್ಸವದಲ್ಲಿ ‘ತೋಳ್ಬಲ ಪರೀಕ್ಷೆ!’

  ಮೈಸೂರು: ಇದೇ ಮೊದಲ ಬಾರಿಗೆ ದಸರಾ ಕ್ರೀಡಾ ಕೂಟಕ್ಕೆ ಹೊಸದೊಂದು ಸ್ಪರ್ಧೆ ಸೇರ್ಪಡೆಯಾಗಿದೆ. ಅದೇ ‘ತೋಳ್ಬಲ ಪರೀಕ್ಷೆ’! ದಸರಾ ಕ್ರೀಡಾಕೂಟ ಉಪಸಮಿತಿ ಮೊದಲ ಬಾರಿಗೆ ಆಟೋಟ ಪಟ್ಟಿಯಲ್ಲಿ ಪಂಜಾ ಕುಸ್ತಿಯನ್ನು ಸೇರಿಸಿದೆ. ನಿಜದಲ್ಲಿ ಇದು ಮುಷ್ಟಿ ಮಣಿಸುವ ಕ್ರೀಡೆ. ಮೊಣಗಂಟು ಆಧಾರವಾಗಿಟ್ಟುಕೊಂಡು ಪರಸ್ಪರ ಕೈ ಹಿಡಿದು ಎದುರಾಳಿಯನ್ನು ಮಣಿಸುವ ಕ್ರೀಡೆ. ಇದಕ್ಕೆ ಮೈಸೂರು ಜಿಲ್ಲಾ ಪಂಜಾ ಕುಸ್ತಿ ಸಂಸ್ಥೆ ಕೂಡ ಸಾಥ್ ನೀಡಲಿದೆ. ಸೆಪ್ಟೆಂಬರ್ 26ರಂದು ಈ ಕ್ರೀಡೆಗೆ ದಿನಾಂಕ ನಗದಿಯಾಗಿದ್ದು, […]

   
 • ಕೆಎಂಎಫ್ ಅಧ್ಯಕ್ಷ ಸ್ಥಾನ ; ಎಂ.ಪಿ.ರವೀಂದ್ರ ನೇಮಕಕ್ಕೆ ‘ಕೈ’ ಪಾಳೆಯದಲ್ಲೇ ಅಪಸ್ವರ…

  Sep 16, 2014 12:17

  ಕೆಎಂಎಫ್ ಅಧ್ಯಕ್ಷ ಸ್ಥಾನ ; ಎಂ.ಪಿ.ರವೀಂದ್ರ ನೇಮಕಕ್ಕೆ ‘ಕೈ’ ಪಾಳೆಯದಲ್ಲೇ ಅಪಸ್ವರ…

  ಬೆಂಗಳೂರು: ಹರಪ್ಪನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ರವೀಂದ್ರ ಅವರನ್ನು ಕೆಎಂಎಫ್ ಅಧ್ಯರಾಗಿ ನೇಮಕ ಮಾಡಲು ಕಾಂಗ್ರೆಸ್ ನಲ್ಲೇ ಅಪಸ್ವರ ಎದ್ದಿದೆ. ಕಳೆದ 20 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ತೆಕ್ಕೆ ಬಿದ್ದಿರುವ ಕೆಎಂಎಫ್ ಅಧ್ಯಕ್ಷಗಾದಿಗೆ ಕಾಂಗ್ರೆಸ್ ನಲ್ಲೇ ಭಿನ್ನರಾಗ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂ.ಪಿ.ರವೀಂದ್ರ ಅವರನ್ನು ಕೆಎಂಎಫ್ ದಾಗಿಗೆ ಕೂರಿಸಲು ಯತ್ನಿ ಸುತ್ತಿದ್ದರೆ, ಪವರ್ ಮಿನಿಸ್ಟರ್ ಡಿ. ಕೆ.ಶಿವಕುಮಾರ್ ಅವರು ಚುನಾವಣಾ ಪೂರ್ವದಲ್ಲಿ ರಾಮನಗರ ಕೆಎಂಎಫ್ ಜಿಲ್ಲಾ […]

   
 • ದಸರೆಯಲ್ಲಿ ಸವಿಯಬಹುದು ‘ಬಿದಿರು ಬಿರಿಯಾನಿ’…!

  Sep 16, 2014 12:09

  ದಸರೆಯಲ್ಲಿ ಸವಿಯಬಹುದು ‘ಬಿದಿರು ಬಿರಿಯಾನಿ’…!

  ಮೈಸೂರು: ನಾಡ ಹಬ್ಬ ದಸರಾ ಉತ್ಸವ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಇದಕ್ಕಾಗಿ ಕಾರ್ಯಕ್ರಮ ಪಟ್ಟಿಗಳು ಕೂಡ ಒಂದೋದಾಗಿ ತಯಾರಾಗುತ್ತಿ. ಈ ನಡುವೆ ಭೋಜನ ಪ್ರಿಯರಿಗೆ ಸಿಹಿ ಸುದ್ದಿಯೊಂದಿಗೆ! ಹೌದು. ದಸರಾ ಆಹಾರ ಮೇಳದಲ್ಲಿ ಬಂಬೂ ಬಿರಿಯಾನಿ ಸವಿಯಬಹುದು! ಇಷ್ಟೇ ಅಲ್ಲ  ಬುಡಕಟ್ಟು ಹಾಗೂ ಆದಿವಾಸಿ ಆಹಾರ ಪದ್ಧತಿಗಳ ಭೂರಿ  ಭೋಜನ ಆಹಾರ ಪ್ರಿಯರ ಬಾಯನ್ನು ತಣಿಸಲಿವೆ. ದಸರಾ ಆಹಾರ ಮೇಳವನ್ನು ವಿಶಿಷ್ಠವಾಗಿ ಆಚರಿಸಬೇಕೆಂಬ ಉದ್ದೇಶದಿಂದ ಆಹಾರ ಮೇಳ ಉಪ ಸಮಿತಿ […]

   
 • ಮಳೆನೂ ನಿಲ್ತು, ಪ್ರವಾಹನೂ ನಿಲ್ತು ; ಆದ್ರೆ…

  Sep 16, 2014 11:48

  ಮಳೆನೂ ನಿಲ್ತು, ಪ್ರವಾಹನೂ ನಿಲ್ತು ; ಆದ್ರೆ…

  ಜಮ್ಮು-ಕಾಶ್ಮೀರ: ‘ಮಳೆ ನಿಂತ್ರೂ ಮರದ ಮೇಲಿನ ಹನಿ ನಿಲ್ಲಲಿಲ್ಲ ಅಂತರಲ್ಲಾ ಹಾಗೆ’ ಕಣಿವೆ ರಾಜ್ಯದಲ್ಲಿ ಮಳೆನೂ ನಿಲ್ತು. ಪ್ರವಾಹನೂ ನಿಲ್ತು. ಆದರೆ ಜಲಪ್ರಳಯದಲ್ಲಿ ಸಿಲುಕಿರುವವರೂ ಸೇರಿದಂತೆ ಅಲ್ಲಿನ ನಿವಾಸಿಗಳ ಮನದಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ. ಬಾರಿ ಸವಾಲಿನ ನಡುವೆಯೂ ಭಾರತೀಯ ಸೇನೆ ಮತ್ತು ಎನ್ಡಿಆರ್ಎಫ್ ಸೇನಾ ಪಡೆ ಜಲಪ್ರಳಯದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯದಲ್ಲಿ ನಿ ರಂತ ಶ್ರಮಿಸುತ್ತಿವೆ. ಈ ನಡುವೆ ಪ್ರವಾಹದಲ್ಲಿ ಸಿಲುಕಿ ಸಾವನ್ನಪ್ಪಿರುವ ಪ್ರಾಣಿಗಳ ದೇಹ […]

   
 • ಹಾವಿಗೆ ಹಾವೇ ಆಹಾರ…!

  Sep 16, 2014 11:09

  ಹಾವಿಗೆ ಹಾವೇ ಆಹಾರ…!

  ಶಿವಮೊಗ್ಗ: ಬಲವಂತರು ಬಲಹೀನರನ್ನು ಹುರಿದು ಮುಕ್ತಾರೆ, ಬಡಿದು ಬಾಯ್ಗೆ ಹಾಕೋತಾರೆ ಅನ್ನೋದು ಗಾದೆಮಾತು. ಆದರೆ ಸಮಬಲರ ಸ್ಥಿತಿ ಹೇಗಿರುತ್ತೇ ಅನ್ನೋದು ತರ್ಕಕ್ಕೆ ನಿಲುಕದ ವಿಷಯ. ಕೊಳಕು ಮಂಡಲ ಹಾವು ಮತ್ತು ನಾಗರಹಾವು ಒಂದು ರೀತಿಯಲ್ಲಿ ಸಮಬಲವಿರುವ ಸರಿಸೃಪಗಳು. ನಾಗರ ಹಾವು ಕಚ್ಚಿದರೆ ವಿಷ. ಆದರೆ ಕೊಳಕುಮಂಡಲ ಹಾವು ಮೂಸಿದರೆ ವಿಷ. ನಾಗರಹಾವು ಕಚ್ಚಿದರೆ ದೇಹಹೊಕ್ಕುವ ವಿಷ ಕೆಲ ಗಂಟೆಗಳಲ್ಲೇ ಸಾಯುತ್ತಾನೆ. ಹಾಗೆಯೇ ಕೊಳಕು ಮಂಡಲಹಾವು ಸೋಕಿದರೆ ನಿಧಾನವಾಗಿ ವಿಷವೇರಿ ಮನುಷ್ಯನ […]

   
 • ‘ಮಂಗಳ’ ಯಾನಕ್ಕೆ ಮಂಗಳಕರ ಸೂಚನೆ!

  Sep 16, 2014 10:38

  ‘ಮಂಗಳ’ ಯಾನಕ್ಕೆ ಮಂಗಳಕರ ಸೂಚನೆ!

  ಬೆಂಗಳೂರು: ಭಾರತದ ಮೊಟ್ಟ ಮೊದಲ ಮಂಗಳಯಾನ ಯಶಸ್ವಿಯಾಗುವ ಲಕ್ಷಣಗಳು ಘೋಚರಿಸುತ್ತಿವೆ. ಮಂಗಳ ಕಕ್ಷೆಗಾಮಿ ನಿಶ್ಚಿತವಾಗಿ ಯಶಸ್ವಿಯಾಗುತ್ತದೆ ಎಂದು ಇಸ್ರೊದ ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಮಂಗಳ ಕಕ್ಷೆಗಾಮಿ (ಮಾರ್ಸ್ ಆರ್ಬಿಟರ್) ಅಥವಾ ವ್ಯೋಮನೌಕೆ ಸೆ.24ರಂದು ಮಂಗಳ ಕಕ್ಷೆ ಸೇರುತ್ತಿದ್ದು, ಇದು ಯಶಸ್ವಿಯಾಗಬೇಕಾದರೆ ಕಳೆದ 300 ದಿನಗಳಿಂದ ನೌಕೆಯಲ್ಲಿ ಬಳಕೆಯಾಗದೆ ಉಳಿದಿರುವ ಲಿಕ್ವಿಡ್ ಎಂಜಿನ್‌ಅನ್ನು ಮೊದಲೇ ಎಚ್ಚರಗೊಳಿಸಬೇಕಿತ್ತು. ಈ ಕಾರ್ಯ ಸೋಮವಾರ ಯಶಸ್ವಿಯಾಗಿ ಮುಗಿದಿದೆ. 4 ಸೆಕೆಂಡ್‌ಗಳ ಕಾಲ ಎಂಜಿನ್‌ಅನ್ನು ಉದ್ದೀಪನಗೊಳಿಸಲಾಗಿದ್ದು, ಸೆ.24ರಂದು ಇದು ಸಕಾಲಕ್ಕೆ ಹೊತ್ತಿಕೊಳ್ಳುವಂತೆ […]

   
 
 
 
 
 

Recent Posts