ಇಂತವರಿಂದ ಪಕ್ಷ ಕಟ್ಟಿ ಬೆಳೆಸಲು ಸಾಧ್ಯವಿಲ್ಲ: ಮೈಸೂರಿನಲ್ಲೆ ಪಕ್ಷದಿಂದ ಉಚ್ಚಾಟಿಸುತ್ತೇನೆ- ಪರೋಕ್ಷ ಆಕ್ರೋಶ ವ್ಯಕ್ತಪಡಿಸಿದ ಹೆಚ್.ಡಿ ಕುಮಾರಸ್ವಾಮಿ…

ಮೈಸೂರು,ಜನವರಿ,5,2021(www.justkannada.in):  ಸಮ್ಮಿಶ್ರ ಸರ್ಕಾರದ ಪತನದ ನಂತರ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡರು ಜೆಡಿಎಸ್ ಸಭೆ ಸಮಾರಂಭಗಳಿಂದ ದೂರ ಉಳಿದಿದ್ದು, ಈ ಮಧ್ಯೆ  ಕಳೆದ ಎರಡು ದಿನದ ಹಿಂದಷ್ಟೇ ಕಾಲ ಕಾಲಕ್ಕೆ ಜೆಡಿಎಸ್ ಪಕ್ಷ ಬದಲಾಗುತ್ತೆ ಎಂದು ಹೇಳಿಕೆ ನೀಡಿದ್ದರು.jk-logo-justkannada-mysore

ಈ ಹೇಳಿಕೆ ಸಂಬಂಧ ಖುದ್ದು ಶಾಸಕ ಜಿ.ಟಿ ದೇವೇಗೌಡರ ವಿರುದ್ದ  ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಗರಂ ಆಗಿದ್ದಾರೆ.  ಬೆಂಗಳೂರಿನಲ್ಲಿ ನಡೆದ ಯುವ ಜೆಡಿಎಸ್, ವಿದ್ಯಾರ್ಥಿ ಜೆಡಿಎಸ್ ಸಭೆಯಲ್ಲಿ‌ ಜಿಟಿ‌ ದೇವೆಗೌಡರ ವಿರುದ್ದ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದು, ಹೇಳಿಕೆ ವಿರುದ್ದ ಸಭೆಯಲ್ಲಿ ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಮೈಸೂರಿಗೆ ಬಂದೇ ಪಕ್ಷದಿಂದ ಕಿತ್ತುಹಾಕುತ್ತೇನೆ ಎಂದಿದ್ದಾರೆ ಎನ್ನಲಾಗಿದೆ.

ಇಂತವರಿಂದ ಪಕ್ಷ ಕಟ್ಟಿ ಬೆಳೆಸಲು ಸಾಧ್ಯವಿಲ್ಲ. ಅಂತವರನ್ನು ಮೈಸೂರಿನಲ್ಲೆ ಪಕ್ಷದಿಂದ ಉಚ್ಚಾಟಿಸುತ್ತೇನೆ ಎಂದು ಹೆಸರು ಹೇಳದೆ ಸಭೆಯಲ್ಲಿ  ಹೆಚ್.ಡಿ ಕುಮಾರಸ್ವಾಮಿ ಪರೋಕ್ಷ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರವಾಗಿ ಮೈಸೂರಿನಲ್ಲಿ ನಡೆಯಲಿರುವ ನಿಷ್ಠಾವಂತ ಕಾರ್ಯಕರ್ತರ ಸಭೆಯಲ್ಲಿ ನಿರ್ಣಾಯ ಕೈಗೊಳ್ಳುವ  ಸಾಧ್ಯತೆ ಇದೆ.

not possible -build – GT devegowda-former cm-  HD Kumaraswamy- expressed- indirect outrage.
ಕೃಪೆ-INTERNET

ಜಿ.ಪಂ ಮತ್ತು ತಾ.ಪಂ‌ ಚುನಾವಣೆಗೂ ಮುನ್ನ ನಿರ್ಧಾವಾಗಲಿದೆಯ ಜಿಟಿಡಿ , ಜೆಡಿಎಸ್ ನಡುವಿನ ಸಂಬಂಧ ..? ಈ ಮೂಲಕ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತ್ತು ಜಿಟಿ ದೇವೇಗೌಡರ ಕೋಲ್ಡ್ ವಾರ್ ತಾರ್ಕಿಕ ಅಂತ್ಯವಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.

Key words:  not possible -build – GT devegowda-former cm-  HD Kumaraswamy- expressed- indirect outrage.