Sunday, September 13, 2026

BDA Apartments

Home Front Page ಬಾಹ್ಯಾಕಾಶ ಯಾತ್ರೆ ಯಶಸ್ವಿ: ಭಾರತದಿಂದ ಈ ದಿನ ಹೊಸ ಮೈಲಿಗಲ್ಲು- ಸಿಎಂ ಸಿದ್ದರಾಮಯ್ಯ

ಬಾಹ್ಯಾಕಾಶ ಯಾತ್ರೆ ಯಶಸ್ವಿ: ಭಾರತದಿಂದ ಈ ದಿನ ಹೊಸ ಮೈಲಿಗಲ್ಲು- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜುಲೈ,15,2025 (www.justkannada.in): ಬಾಹ್ಯಾಕಾಶಯಾನ ಕೈಗೊಂಡಿದ್ದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಮರಳಿದ್ದು ಈ ಸಾಧನೆಯನ್ನು ಸಿಎಂ ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಯಶಸ್ವಿ ಬಾಹ್ಯಾಕಾಶ ಯಾತ್ರೆಯನ್ನು ಮುಗಿಸಿ, ಸುರಕ್ಷಿತವಾಗಿ ಭೂಮಿಗೆ ಮರಳಿದ ಶುಭಾಂಶು ಶುಕ್ಲಾ ಅವರನ್ನು ದೇಶವಾಸಿಗಳ ಪರವಾಗಿ ಸ್ವಾಗತಿಸುತ್ತೇನೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿನೀಡಿದ ಮೊದಲ ಭಾರತೀಯನೆಂಬ ದಾಖಲೆ ಬರೆದ ಅವರಿಗೆ ಅಭಿನಂದನೆಗಳು.ಬಾಹ್ಯಾಕಾಶ ಯಾತ್ರೆ ಯಶಸ್ವಿ axi

ಇಡೀ ರಾಷ್ಟ್ರ ಈ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಂಡು ಹೆಮ್ಮೆಪಡುತ್ತಿದೆ. ಶುಭಾಂಶು ಶುಕ್ಲಾರವರು ತಮ್ಮ ಪರಿಶ್ರಮ ಮತ್ತು ಧೈರ್ಯದ ಮೂಲಕ ಕೋಟ್ಯಂತರ ಜನರ ಕನಸುಗಳಿಗೆ ರೆಕ್ಕೆಯಾಗಿದ್ದಾರೆ. ಅವರ ಈ ಬಾಹ್ಯಾಕಾಶ ಪಯಣವು ಭವಿಷ್ಯದ ಸಂಶೋಧನೆಗಳ ಹಾದಿಯನ್ನು ಸುಗಮವಾಗಿಸಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತ ಈ ದಿನ ಹೊಸ ಮೈಲಿಗಲ್ಲು ಸಾಧಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.vtu

Key words: Space, new milestone, India, CM, Siddaramaiah