Saturday, September 12, 2026

BDA Apartments

Raidon Satish Jarakiholi Politically, motivated BDA JK_Adv BDA Adv
Home Front Page ರಾಜಕೀಯ ಪ್ರೇರಿತ ದಾಳಿ: ಸತೀಶ್ ಜಾರಕಿಹೊಳಿ ಅವರ ಜತೆ ನಿಲ್ಲುವೆ- ಕೆ.ಎನ್‌.ರಾಜಣ್ಣ

ರಾಜಕೀಯ ಪ್ರೇರಿತ ದಾಳಿ: ಸತೀಶ್ ಜಾರಕಿಹೊಳಿ ಅವರ ಜತೆ ನಿಲ್ಲುವೆ- ಕೆ.ಎನ್‌.ರಾಜಣ್ಣ

ತುಮಕೂರು,ಸೆಪ್ಟಂಬರ್,12,2026 (www.justkannada.in):  ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತವಾದುದು.  ಸತೀಶ್ ಅವರು ಸಂಭಾವಿತ ವ್ಯಕ್ತಿ’. ಅವರ ಜೊತೆ ನಿಲ್ಲುವೆ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎನ್ ರಾಜಣ್ಣ, ಸಚಿವ ಸತೀಶ್ ಜಾರಕಿಹೊಳಿ ವ್ಯವಹಾರದಲ್ಲಿ ಶ್ರೇಷ್ಠ ವ್ಯಕ್ತಿ. ಯಾವುದೇ ವಿಚಾರದಲ್ಲಿ ತಪ್ಪು ಮಾಡುವುದಿಲ್ಲ. ಅವರನ್ನು ನಾಲ್ಕು ದಶಕಗಳಿಂದ ನೋಡಿರುವೆ. ನಾನು ಸತೀಶ ಜತೆಗೆ ನಿಲ್ಲುವೆ ಎಂಬ ಭರವಸೆ ಕೊಟ್ಟಿರುವೆ. ಕೇಂದ್ರ ಸರ್ಕಾರ ಎಲ್ಲ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸತೀಶ ಅವರ ಜನಪ್ರಿಯತೆ ಕುಗ್ಗಿಸುವ ಪ್ರಯತ್ನ ಇದು ಎಂದು ಕಿಡಿಕಾರಿದರು.Raidon Satish Jarakiholi Politically sathish-jarkiholi sathish jarkiholi

ಬೇರೆ ಪಕ್ಷಕ್ಕೆ ಹೋಗುವ ವಿಚಾರ ಕುರಿತು ಪ್ರತಿಕ್ರಿಯಿಸಿದ ‘ಕೆ.ಎನ್‌.ರಾಜಣ್ಣ, ‘ನಾನು ಯಾವ ಪಕ್ಷಕ್ಕೂ ಹೋಗುವುದಿಲ್ಲ. ನಾನು ಮತ್ತೇ ಚುನಾವಣೆಗೆ ನಿಲ್ಲವುದೋ, ಬೇಡವೋ ಎಂಬ ಗೊಂದಲದಲ್ಲಿದ್ದೇನೆ. ನಿಲ್ಲಬೇಕು ಎಂಬ ಕಾಲ ಬಂದರೆ ಕಾಂಗ್ರೆಸ್‌ ನಿಂದಲೇ ಸ್ಪರ್ಧಿಸುವೆ. ಎಲ್ಲ ಜಾತಿಯ ನಾಯಕರಿಗೂ ಗೌರವ ಕೊಡುವ ಪಕ್ಷ ಕಾಂಗ್ರೆಸ್‌ ಎಂದರು.motivated jk02_new jk02 new

Key words: ED Raid, Satish Jarakiholi, Politically, motivated ,attack: KN Rajanna

English Summary
Title

ED Raidon on Satish Jarakiholi is Politically, motivated: KN Rajanna

Short Description
The Enforcement Directorate (ED) raids against Karnataka Public Works Department (PWD) Minister Satish Jarkiholi are politically motivated, according to statements and reactions from senior Congress leaders, including former Minister K.N. Rajanna.