ಏಪ್ರಿಲ್ 23ಕ್ಕೆ ಕೋಟಿಗೊಬ್ಬ-3 ರಿಲೀಸ್ !

ಬೆಂಗಳೂರು, ಜನವರಿ 05, 2020 (www.justkannada.in): 

ಕಿಚ್ಚ ಸುದೀಪ್  ಅಭಿನಯದ ಕೋಟಿಗೊಬ್ಬ 3 ಸಿನಿಮಾ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ಬಹಿರಂಗ ಪಡಿಸಿದ್ದಾರೆ.

ನಿರ್ಮಾಪಕ ಸೂರಪ್ಪ ಬಾಬು ಏಪ್ರಿಲ್ 23 ಕ್ಕೆ ಕೋಟಿಗೊಬ್ಬ 3 ರಿಲೀಸ್ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ.

ಈ ಮೊದಲು ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾವನ್ನು ಏಪ್ರಿಲ್ 1 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಇದರ ಬೆನ್ನಲ್ಲೆ ಸುದೀಪ್ ಸಿನಿಮಾ ಬಿಡುಗಡೆಗೂ ದಿನಾಂಕ ಫಿಕ್ಸ್ ಆಗಿದೆ.

ದರ್ಶನ್ ಅಭಿನಯದ ರಾಬರ್ಟ್ ಬಿಡುಗಡೆ ದಿನಾಂಕ ಘೋಷಣೆಯಾಗಬೇಕಿದೆ.