Sunday, September 6, 2026

BDA Apartments

Home Crime ಮರಕ್ಕೆ ಕಾರು ಡಿಕ್ಕಿ: ಮೂವರಿಗೆ ಗಂಭೀರ ಗಾಯ.

ಮರಕ್ಕೆ ಕಾರು ಡಿಕ್ಕಿ: ಮೂವರಿಗೆ ಗಂಭೀರ ಗಾಯ.

ಮೈಸೂರು,ಏಪ್ರಿಲ್,27,2024 (www.justkannada.in):  ಚಲಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ  ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಬಣ್ಣಾರಿ ಅಮ್ಮನ್ ಶುಗರ್ ಪ್ಯಾಕ್ಟರಿ ರಸ್ತೆಯಲ್ಲಿ ನಡೆದಿದೆ.

ನಿನ್ನೆ ತಡ ರಾತ್ರಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಜ್ಞಾನೇಶ್, ಪ್ರಕಾಶ್ ಗೋಪಿನಾಥ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಡಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ.

ಗಂಭೀರ ಗಾಯಗೊಂಡವರು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ನೌಕರರು ಎಂದು ತಿಳಿದು ಬಂದಿದೆ. ಅಪಘಾತವಾಗಿರುವ ಕಾರು ತಮಿಳುನಾಡು ಮೂಲದ ಟಯೊಟಾ ಅಲ್ಟ್ರೋಜ್ ಕಾರು  ಎನ್ನಲಾಗಿದೆ.  ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಮರಕ್ಕೆ ಕಾರು ಡಿಕ್ಕಿ ಹೊಡೆದಿದ್ದು ಡಿಕ್ಕಿ ರಭಸಕ್ಕೆ ಒಳಗಿದ್ದ  ಪ್ರಯಾಣಿಕರು ಬದುಕುಳಿದಿರುವುದು ಅಚ್ಚರಿ ಮೂಡಿಸಿದೆ. ಏರ್ ಬ್ಯಾಗ್ ಓಪನ್ ಆಗಿ  ಮೂವರ ಜೀವ ಉಳಿದಿದೆ.  ಬಿಳಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Car, Accident, seriously injured