ಸಂಜೆ 5 ಗಂಟೆ ವೇಳೆಗೆ ಶೇ 63.90ರಷ್ಟು ಮತದಾನ: ಮಂಡ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ವೋಟಿಂಗ್: 14 ಕ್ಷೇತ್ರಗಳ ವಿವರ ಹೀಗಿದೆ.

ಬೆಂಗಳೂರು,ಏಪ್ರಿಲ್,26,2024 (www.justkannada.in): ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು  ಮೊದಲ ಹಂತದ ಮತದಾನ ನಡೆಯುತ್ತಿದ್ದು, ಸಂಜೆಯಾಗುತ್ತಲೇ ಮತದಾನ ಬಿರುಸುಗೊಂಡಿದೆ. ಈ ನಡುವೆ ಸಂಜೆ 5 ಗಂಟೆವರೆಗೆ ಶೇಕಡಾ 63.90ರಷ್ಟು ಮತದಾನವಾಗಿದೆ.

ಮಂಡ್ಯ ಕ್ಷೇತ್ರದಲ್ಲಿ ಅತಿಹೆಚ್ಚು ಮತದಾನವಾಗಿದ್ದು,  ಶೇ 74.87ರಷ್ಟು  ವೋಟಿಂಗ್ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಯಾವ್ಯಾವ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಮತದಾನವಾಗಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.

ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ 5 ಗಂಟೆವರೆಗೆ ಶೇ 63.90ರಷ್ಟು ಮತದಾನ

ಬೆಂಗಳೂರು ಸೆಂಟ್ರಲ್ –ಶೇ 48.61ರಷ್ಟು ಮತದಾನ

ಬೆಂಗಳೂರು ಉತ್ತರ – ಶೇ 50.04ರಷ್ಟು ಮತದಾನ

ಬೆಂಗಳೂರು ಗ್ರಾಮಾಂತರ – ಶೇ 61.78ರಷ್ಟು ಮತದಾನ

ಬೆಂಗಳೂರು ದಕ್ಷಿಣ – ಶೇ  49.37ರಷ್ಟು ಮತದಾನ

ಚಾಮರಾಜನಗರ –ಶೇ  69.60ರಷ್ಟು ಮತದಾನ

ಚಿಕ್ಕಬಳ್ಳಾಪುರ – ಶೇ 70.97ರಷ್ಟು ಮತದಾನ

ಚಿತ್ರದುರ್ಗ – ಶೇ 67ರಷ್ಟು ಮತದಾನ

ದಕ್ಷಿಣ ಕನ್ನಡ – ಶೇ  71.83ರಷ್ಟು ಮತದಾನ

ಹಾಸನ – ಶೇ  72.13ರಷ್ಟು ಮತದಾನ

ಕೋಲಾರ –ಶೇ  71.26ರಷ್ಟು ಮತದಾನ

ಮಂಡ್ಯ – ಶೇ  74.87ರಷ್ಟು ಮತದಾನ

ಮೈಸೂರು-ಕೊಡಗು – ಶೇ  65.85ರಷ್ಟು ಮತದಾನ

ತುಮಕೂರು – ಶೇ  72.10ರಷ್ಟು ಮತದಾನ

ಉಡುಪಿ-ಚಿಕ್ಕಮಗಳೂರು –  ಶೇ 72.13ರಷ್ಟು ಮತದಾನ

Key words: Karnataka, Lokasabha, election, voting