ಮಾದರಿ ಹೆಣ್ಣು : ಲಂಡನ್‌ ಟು ಮಂಡ್ಯ,  ಒಂದು ಓಟಿನ ಖರ್ಚು ಒಂದುವರೆ ಲಕ್ಷ ರೂ.!

Sonika, an IT consultant in London, originally hails from the village of Kalenahalli in Mandya. He had moved to London for work two years ag

 

ಮಂಡ್ಯ, ಏ.26, 2024 : (www.justkannada.in news ) ಮತದಾನದ ಹಬ್ಬ ಇಂದು ಕರ್ನಾಟಕದ ೧೪ ಕ್ಷೇತ್ರಗಳಲ್ಲಿ ನಡೆಯುತ್ತಿದೆ. ಮತದಾನ ಮಾಡುವಂತೆ ಜನರಲ್ಲಿ ಪ್ರೇರೆಪಣೆ ನೀಡುವ ನಿಟ್ಟಿನಲ್ಲಿ  ಚುನಾವಣಾ ಆಯೋಗ ಹಲವಾರು ಕ್ರಮಗಳನ್ನು ಜರುಗಿಸಿದೆ.

ಈ ಪ್ರಯತ್ನ ಫಲ ನೀಡಿದೆ. ದೂರದ ಲಂಡನ್ ನಿಂದ ಬಂದು ಓಟ್ ಮಾಡಿದ ಮಂಡ್ಯ ಯುವತಿಯೇ ಇದಕ್ಕೆ ಸಾಕ್ಷಿ.

ಲಂಡನ್ ನಲ್ಲಿ ಐಟಿ ಕನ್ಸಲ್ಟೆಂಟ್ ಆಗಿರುವ ಯುವತಿ ಸೋನಿಕಾ ಮೂಲತಃ ಮಂಡ್ಯದ ಕಾಳೇನಹಳ್ಳಿಯ ಗ್ರಾಮದವರು. ಎರಡು ವರ್ಷದ ಹಿಂದೆ ಉದ್ಯೋಗದ ನಿಮ್ಮಿತ್ತ ಲಂಡನ್ ಗೆ ತೆರಳಿದ್ದರು.

ಲಂಡನ್ ನಲ್ಲಿ ಐಟಿ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಸೋನಿಕಾ.  ವಾರದ ಹಿಂದೆ ಪ್ಲಾನ್ ಮಾಡಿ ವಿಶೇಷ ವಿಮಾನದಲ್ಲಿ ಆಗಮನ. ಇದಕ್ಕಾಗಿ ಒಂದೂವರೆ ಲಕ್ಷ ಖರ್ಚು ಮಾಡಿ ಬಂದು ಹಕ್ಕು ಚಲಾಯಿಸಿರುವ ಸೋನಿಕಾ.

ನನ್ನ ಹಕ್ಕು ಚಲಾಯಿಸಲೇ ಬೇಕು ಎಂಬ ಸದುದ್ದೇಶದಿಂದ ಸಮಯ, ಹಣ ಯಾವುದನ್ನು ಲೆಕ್ಕಿಸದೆ ಜವಾಬ್ದಾರಿ ನಿರ್ವಹಿಸುವ ಸಲುವಾಗಿ ದೂರದ ಲಂಡನ್‌ ನಿಂದ ಮಂಡ್ಯಕ್ಕೆ ಬಂದು ಮತ ಹಾಕಿದ್ದು ಶ್ಲಾಘನೀಯ. ಸೋನಿಕಾ ಅವರ ಈ ನೆಡೆ ನಿಜಕ್ಕೂ ಇತರರಿಗೆ ಮಾದರಿ.

ಊರಲ್ಲೇ ಇದ್ದರು, ಮನೆಯಲ್ಲೇ ಕಾಲ ಕಳೆಯುತ್ತಿದ್ದರು ಓಟ್‌ ಮಾಡಲು ಬಾರದೆ ನಿರ್ಲಕ್ಷ್ಯ ತೋರುವ ಮಂದಿಗೆ ಸೋನಿಯಾ ನಿಜಕ್ಕೂ ಆದರ್ಶ.

key words : Sonika, an IT consultant in London

summary : 

Model female: London to Mandya, the cost of one vote is one and a half lakh rupees!

Sonika, an IT consultant in London, originally hails from the village of Kalenahalli in Mandya. He had moved to London for work two years ago.

Sonika was working as an IT consultant in London. Plan weeks in advance and arrive on a special flight. Sonika has spent one and a half lakhs for this and has claimed it.