Thursday, August 6, 2026

BDA Apartments

Home Election 2024 ಲೋಕಸಭೆ ಚುನಾವಣೆ: ರಾಜ್ಯದಲ್ಲಿ ಶೇ 22.34 ರಷ್ಟು ಮತದಾನ.

ಲೋಕಸಭೆ ಚುನಾವಣೆ: ರಾಜ್ಯದಲ್ಲಿ ಶೇ 22.34 ರಷ್ಟು ಮತದಾನ.

ಬೆಂಗಳೂರು,ಏಪ್ರಿಲ್,26,2024 (www.justkannada.in): ರಾಜ್ಯದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆ ಮತದಾನ ಇಂದು ನಡೆಯುತ್ತಿದ್ದು ಜನರು ತಮ್ಮ ಮತದಾನದ ಹಕ್ಕನ್ನ ಚಲಾಯಿಸುತ್ತಿದ್ದಾರೆ.

ಇಂದು ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದೆ. ಈ ನಡುವೆ ಶೇ 22.34 ರಷ್ಟು ಮತದಾನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶೇ 20ರಷ್ಟು,  ಬೆಂಗಳೂರು ಉತ್ತರ ಕ್ಷೇತ್ರದಲ್ಲಿ  ಶೇ. 20ರಷ್ಟು, ಮಂಡ್ಯದಲ್ಲಿ ಶೇ. 21ರಷ್ಟು,  ಬೆಂಗಳೂರು ಗ್ರಾಮಾಂತರದಲ್ಲಿ ಶೇ. 20ರಷ್ಟು,  ಚಿತ್ರದುರ್ಗದಲ್ಲಿ  ಶೇ. 22ರಷ್ಟು,  ಕೋಲಾರದಲ್ಲಿ ಶೇ. 21ಷ್ಟು, ತುಮಕೂರಿನಲ್ಲಿ ಶೇ. 23ರಷ್ಟು,  ಹಾಸನದಲ್ಲಿ ಶೇ. 22 ರಷ್ಟು, ಚಾಮರಾಜನಗರದಲ್ಲಿ ಶೇ. 23ರಷ್ಟು  ಮೈಸೂರು ಜಿಲ್ಲೆಯಲ್ಲಿ  ಶೇ. 25ರಷ್ಟು,  ಉಡುಪಿ ಚಿಕ್ಕಮಗಳೂರಿನಲ್ಲಿ ಶೇ. 29 ರಷ್ಟು ಮತದಾನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Lok Sabha Elections, 22.34 percent,voting