Friday, November 6, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ಮೈಸೂರಿನಲ್ಲಿ ಇ-ಖಾತಾ ವಿಶೇಷ ಅಭಿಯಾನ: 415 ಅರ್ಜಿಗಳ ಸ್ವೀಕೃತಿ

ಮೈಸೂರಿನಲ್ಲಿ ಇ-ಖಾತಾ ವಿಶೇಷ ಅಭಿಯಾನ: 415 ಅರ್ಜಿಗಳ ಸ್ವೀಕೃತಿ

ಮೈಸೂರಿನಲ್ಲಿ ಇ-ಖಾತಾ ವಿಶೇಷ ಅಭಿಯಾನ: 415 ಅರ್ಜಿಗಳ ಸ್ವೀಕೃತಿ

ಮೈಸೂರು,ನವೆಂಬರ್,6,2026 (www.justkannada.in): ಮೈಸೂರು ಮಹಾನಗರ ಪಾಲಿಕೆಯ ಪ್ರಜಾಸೇವಾ ಇ-ಖಾತಾ ವಿಶೇಷ ಅಭಿಯಾನದಡಿ ಇಂದು 4, 5 ಮತ್ತು 6ನೇ ವಲಯಗಳಿಂದ ಒಟ್ಟು 415 ಅರ್ಜಿಗಳನ್ನು ಸ್ವೀಕರಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ ಅವರು,  ವಲಯ 4ರಲ್ಲಿ175 ಅರ್ಜಿಗಳು, ವಲಯ 5ರಲ್ಲಿ 133, ವಲಯ 6ರಲ್ಲಿ107 ಅರ್ಜಿಗಳು ಒಟ್ಟು 415ಗಳನ್ನ ಸ್ವೀಕರಿಸಲಾಗಿದೆ.  ಅರ್ಹ ಫಲಾನುಭವಿಗಳಿಗೆ ದಿನಾಂಕ 18-11-2026 ರಂದು ಬೆಳಿಗ್ಗೆ 10 ಗಂಟೆಗೆ ಇ-ಖಾತಾಗಳನ್ನು ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ಮಣಿಪಾಲ್ ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ತಪಾಸಣೆ:

ಈ ಅಭಿಯಾನದಲ್ಲಿ ಮಣಿಪಾಲ್ ಆಸ್ಪತ್ರೆ, ಮೈಸೂರು ವತಿಯಿಂದ ವಿಶೇಷ ಸಹಭಾಗಿತ್ವದೊಂದಿಗೆ  ಇ-ಖಾತಾ ಪಡೆಯಲು ಆಗಮಿಸಿದ ಸಾರ್ವಜನಿಕರು ಮತ್ತು ಹಿರಿಯ ನಾಗರಿಕರು ಉಚಿತ ಆರೋಗ್ಯ ತಪಾಸಣೆ ಪಡೆದುಕೊಂಡರು. ಅಲ್ಲದೆ, ಸಾರ್ವಜನಿಕರಿಗೆ ಕಾಫಿ, ಟೀ ಮತ್ತು ಬಿಸ್ಕತ್ ಡ್ರೈ ಫ್ರೂಟ್ಸ್ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.ಮೈಸೂರಿನಲ್ಲಿ ಇ-ಖಾತಾ ವಿಶೇಷ ಅಭಿಯಾನ: 415 ಅರ್ಜಿಗಳ ಸ್ವೀಕೃತಿ

ನಾಳೆ ದಿನಾಂಕ 07-11-2026 ರಂದು ಬೆಳಿಗ್ಗೆ 10ಗಂಟೆಯಿಂದ  7, 8 ಮತ್ತು 9ನೇ ವಲಯಗಳ ಇ-ಖಾತಾ ವಿಶೇಷ ಅಭಿಯಾನ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ನಡೆಯಲಿದ್ದು, ಸಂಬಂಧಪಟ್ಟ ವಲಯಗಳ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ. ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸದೆ, ಇ-ಖಾತಾ ಸೇವೆಗಾಗಿ ಮಹಾನಗರ ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನೇರವಾಗಿ ಸಂಪರ್ಕಿಸುವಂತೆ ತಿಳಿಸಲಾಗಿದೆ ಎಂದು ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ ತಿಳಿಸಿದ್ದಾರೆ.Special E-Khata Campaign jk02_new jk02 new

 

English Summary
Title

Special E-Khata Campaign in Mysuru: 415 Applications Received

Short Description
Under the Mysuru City Corporation’s special 'Praja Seva E-Khata' campaign, a total of 415 applications were received today from Zones 4, 5, and 6. Providing details on this, Mysuru City Corporation Commissioner M.K. Savitha stated that 175 applications were received from Zone 4, 133 from Zone 5, and 107 from Zone 6, totaling 415 applications. She further informed that the E-Khatas will be issued to the eligible beneficiaries on November 18, 2026, at 10:00 AM.
Keywords
Special E-Khata Campaign, Mysuru, 415 Applications, Received