Friday, November 6, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ಅಮೃತಾನಂದಮಯಿ ಮಾತೆಯಿಂದ ನ್ಯಾಯ, ನೀತಿ, ಧರ್ಮದ ಉಳಿವು: ಸಿಎಂ ಡಿ.ಕೆ ಶಿವಕುಮಾರ್ 

ಅಮೃತಾನಂದಮಯಿ ಮಾತೆಯಿಂದ ನ್ಯಾಯ, ನೀತಿ, ಧರ್ಮದ ಉಳಿವು: ಸಿಎಂ ಡಿ.ಕೆ ಶಿವಕುಮಾರ್ 

ಅಮೃತಾನಂದಮಯಿ ಮಾತೆಯಿಂದ ನ್ಯಾಯ, ನೀತಿ, ಧರ್ಮದ ಉಳಿವು: ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು, ನವೆಂಬರ್,6,2026 (www.justkannada.in): ‘ದೇಶದಲ್ಲಿ ನ್ಯಾಯ, ನೀತಿ, ಧರ್ಮ, ಸೇವಾಮನೋಭಾವ ಉಳಿದಿರುವುದು ಮಾತಾ ಅಮೃತಾನಂದಮಯಿ ಅವರಂಥ ಮಹಾತಾಯಿ ಹಾಗೂ ಧರ್ಮಗುರುಗಳಿಂದ’ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಬೆಂಗಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ಆಯೋಜಿಸಲಾಗಿದ್ದ ಬ್ರಹ್ಮಸ್ಥಾನಂ ದೇವಾಲಯ ಉತ್ಸವವನ್ನು ಸಿಎಂ ಡಿಕೆ ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡಿದರು.

ಅಂದು ವಿವೇಕಾನಂದರು, ಇಂದು ಅಮೃತಾನಂದಮಯಿ

‘ಸ್ವಾಮಿ ವಿವೇಕಾನಂದರು ತಮಿಳುನಾಡಿನ ಕನ್ಯಾಕುಮಾರಿಗೆ ಹೋಗಿ ಲೋಕದ ಒಳಿತಿಗೆ ಧ್ಯಾನ ಮಾಡಿದರು. ತಾಯಿ ಮಾತಾ ಅಮೃತಾನಂದಮಯಿ ಅವರು ಮನುಕುಲದ, ಕರ್ನಾಟಕದ ಜನರ ಶ್ರೇಯೋಭಿವೃದ್ಧಿಗಾಗಿ ದೇವರ ನಾಡು ಕೇರಳದಿಂದ ತಾಯಿ ದೇವಿ ಸ್ವರೂಪದಲ್ಲಿ ಇಲ್ಲಿಗೆ ಆಗಮಿಸಿ ದರ್ಶನ ಭಾಗ್ಯ ಕೊಟ್ಟಿದ್ದಾರೆ. ಸಮಸ್ತ ಕನ್ನಡಿಗರ ಪರವಾಗಿ ಅವರಿಗೆ ತುಂಬು ಹೃದಯದ ಸ್ವಾಗತ ಹಾಗೂ ಧನ್ಯವಾದಗಳು” ಎಂದರು.ಅಮೃತಾನಂದಮಯಿ ಮಾತೆಯಿಂದ ನ್ಯಾಯ, ನೀತಿ, ಧರ್ಮದ ಉಳಿವು: ಸಿಎಂ ಡಿ.ಕೆ ಶಿವಕುಮಾರ್

“ತಾಯಿಯ ಮಡಿಲಿನಿಂದಲೇ ನಮಗೆ ತ್ಯಾಗದ ಅರ್ಥ ತಿಳಿಯುತ್ತಾ ಹೋಗುತ್ತದೆ. ತಪ್ಪು ಮಾಡಿದಾಗ ತಾಯಿ ತಿದ್ದುತ್ತಾಳೆ. ಸೋತಾಗ ಧೈರ್ಯ ತುಂಬುತ್ತಾಳೆ. ಇಂಥ ತಾಯಿಯ ಆಶೀರ್ವಾದ ನಮಗೆ ಬೇಕು. ಮಾತ ಅಮೃತಾನಂದಮಯಿ ಅವರ ತಪ್ಪಸ್ಸಿನಿಂದಲೇ ನಮ್ಮ ಅಜ್ಞಾನ ನಿರ್ಮೂಲನೆಯಾಗುತ್ತದೆ” ಎಂದು ಬಣ್ಣಿಸಿದರು.

“ಅಮ್ಮನ ನೆನಪು ಪ್ರೀತಿಯ ಮೂಲ. ಗುರುವಿನ ನೆನಪು ಜ್ಞಾನದ ಮೂಲ. ದೇವರ ನೆನಪು ಭಕ್ತಿಯ ಮೂಲ. ಈ ಮೂರು ಮನುಷ್ಯತ್ವದ ಮೂಲ. ಮನುಷ್ಯತ್ವ ಮೋಕ್ಷಕ್ಕೆ ಮೂಲ. ಧರ್ಮ ಯಾವುದಾದರು ತತ್ವ ಒಂದೇ. ನಾಮ ನೂರಾದರು ದೈವ ಒಂದೇ. ಪೂಜೆ ಯಾವುದಾದರು ಭಕ್ತಿ ಒಂದೇ.  ಕರ್ಮ ಹಲವಾದರೂ ನಿಷ್ಠೆ ಒಂದು. ದೇವನೊಬ್ಬ ನಾಮ ಹಲವು” ಎಂದರು.

“ನಮ್ಮ ದೇಶದ ಶಕ್ತಿ ಅಧ್ಯಾತ್ಮ. ದೇಶದ ಆಸ್ತಿ ಸಂಸ್ಕೃತಿ. ದೇವರನ್ನು ನೋಡಲು ದೇವಸ್ಥಾನಕ್ಕೆ ಹೋಗಬೇಕು ಅಂತಿಲ್ಲ. ಇಂಥ ಪುಣ್ಯಸ್ಥಳಗಳಿಗೆ ಬಂದರೆ ಸಾಕು.  ಭಕ್ತಿ ಇಲ್ಲದ ಜ್ಞಾನ ಕುರುಡು. ನೆಮ್ಮದಿ ಶಾಂತಿಗಾಗಿ ದೇವಸ್ಥಾನಕ್ಕೆ ಹೋಗುತ್ತೇವೆ. ಅವೆಲ್ಲವನ್ನೂ ಕರುಣಿಸಲು ತಾಯಿ ಮಾತಾ ಅಮೃತಾನಂದ ಮಯಿ ದೇವಿ ಸ್ವರೂಪದಲ್ಲಿ ಇಲ್ಲಿಗೆ ಆಗಮಿಸಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದ ವಿಶ್ವಕ್ಕೆ ಶಾಂತಿ ಎಂದು ನಮ್ಮ ಗುರುಗಳು ಹೇಳುತ್ತಿದ್ದರು. ಅದನ್ನು ಅಮೃತಾನಂದಮಯಿ ತಾಯಿ ಮಾಡುತ್ತಿದ್ದಾರೆ. ಎಲ್ಲದರ ಮೂಲಕ ಭಕ್ತಿ, ಪ್ರೀತಿ, ಕರುಣೆ. ಭಕ್ತಿ ಎನ್ನುವುದು ಅಂತರಂಗದ ನಂದಾದೀಪ. ಅದನ್ನು ಸದಾ ಬೆಳಗುವಂತೆ ಕಾಪಾಡಿಕೊಳ್ಳಬೇಕು. ಈ ಕಾರ್ಯಮವನ್ನು ಅಮ್ಮ ಮಾಡುತ್ತಿದ್ದಾರೆ” ಎಂದು ಭಕ್ತಿಯ ಮಹತ್ವ ವಿವರಿಸಿದರು.Preservation jk02_new jk02 new

25 ವರ್ಷಗಳ ಹಿಂದೆ ಅಮ್ಮನ ಭೇಟಿ

“ಮಾತಾ ಅಮೃತಾನಂದಮಯಿ ಅಮ್ಮ ಲೋಕಕ್ಕೆ ಅಪಾರ ಸೇವೆ ಮಾಡುವ ಮೂಲಕ ಸೇವಾಧರ್ಮವನ್ನು ಉಳಿಸುತ್ತಿದ್ದಾರೆ. ಈ ತಾಯಿ ಪ್ರೀತಿ, ಮಾನವೀಯತೆ, ಸೇವೆಯ ಸಂಕೇತ. 25 ವರ್ಷದ ಹಿಂದೆ ನಾನು ದೇವೇಗೌಡರ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಆಗ ಅಮ್ಮನನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೆ. ಅಮೃತಾನಂದಮಯಿ ಅವರು ಜನರ ಸೇವೆಗಾಗಿ, ಶಾಂತಿ, ಮಾನವೀಯತೆ ನೆಲೆಸಲು ಇಡೀ ಬದುಕನ್ನು ಮೀಸಲಿಟ್ಟಿರುವ ಮಹಾತಾಯಿ” ಎಂದು ಹೇಳಿದರು.

 

English Summary
Title

D.K. Shivakumar Seeks Blessings from Mata Amritanandamayi

Short Description
Karnataka Chief Minister D.K. Shivakumar attended the Brahmasthanam Festival at the Mata Amritanandamayi Math in Bengaluru. Seeking blessings from Mata Amritanandamayi (Amma), the CM stated that justice, morality, righteousness, and service are preserved in India due to spiritual leaders like her. Comparing her global impact to Swami Vivekananda, he praised her contributions to society alongside dignitaries like MLA S.T. Somashekar.
Keywords
Preservation, justice, morality, righteousness Amritanandamayi Ma, CM, D.K. Shivakumar