Tuesday, September 29, 2026

BDA Apartments

ಮತದಾನ ಮಾಡಿ ಬಂದ ಬಳಿಕ ಬಿದ್ದು ಕೈಮುರಿದುಕೊಂಡ ವೃದ್ದೆ: ಆಸ್ಪತ್ರೆಗೆ ದಾಖಲು BD...
Home Election 2024 ಮತದಾನ ಮಾಡಿ ಬಂದ ಬಳಿಕ ಬಿದ್ದು ಕೈಮುರಿದುಕೊಂಡ ವೃದ್ದೆ: ಆಸ್ಪತ್ರೆಗೆ ದಾಖಲು.

ಮತದಾನ ಮಾಡಿ ಬಂದ ಬಳಿಕ ಬಿದ್ದು ಕೈಮುರಿದುಕೊಂಡ ವೃದ್ದೆ: ಆಸ್ಪತ್ರೆಗೆ ದಾಖಲು.

ಮೈಸೂರು,ಏಪ್ರಿಲ್,26,2024 (www.justkannada.in):  ಮತದಾನ ಮಾಡಿ ಹೊರ ಬಂದ ವೇಳೆ ವೃದ್ದೆಯೊಬ್ಬರು ಹಸುಗಳ ಕಾದಾಟದಿಂದ ಹೆದರಿ ಬಿದ್ದು ಕೈಮುರಿದುಕೊಂಡು  ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದ ಕೆ.ಆರ್ ಕ್ಷೇತ್ರದ ಕುವೆಂಪುನಗರ ಎಂ.ಬ್ಲಾಕ್ ಗೋಕುಲ್ ಶಾಲೆಯ ಬೂತ್ ಬಳಿ ಈ ಘಟನೆ ನಡೆದಿದೆ. 76 ವರ್ಷದ ಜಯಮ್ಮ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವುದು.  ಇಂದು ಲೋಕಸಭೆ ಚುನಾವಣೆ ಹಿನ್ನೆಲೆ ಬೆಳಿಗ್ಗೆ 7.30ರ ವೇಳೆಗೆ  ಜಯಮ್ಮ ಅವರು ಗೋಕುಲ್ ಶಾಲೆಯ ಬೂತ್ ಗೆ ತೆರಳಿ ಮತದಾನ ಮಾಡಿದ್ದಾರೆ.ಮತದಾನ ಮಾಡಿ ಬಂದ ಬಳಿಕ ಬಿದ್ದು ಕೈಮುರಿದುಕೊಂಡ ವೃದ್ದೆ fracture

ಬಳಿಕ ಹೊರ ಬಂದಿದ್ದು ಈ ವೇಳೆ ಅಲ್ಲೆ ಪಕ್ಕದಲ್ಲಿ ಎರಡು ಹಸುಗಳು ಕಾದಾಡುತ್ತಿದ್ದಾಗ ಹೆದರಿದ  ಜಯಮ್ಮ ಅವರು ಕೆಳಕ್ಕೆ ಬಿದ್ದಿದ್ದು ಈ ಸಮಯದಲ್ಲಿ ಜಯಮ್ಮ ಅವರ ಕೈಮುರಿದಿದೆ. ತಕ್ಷಣವೇ ಅವರನ್ನ ನಗರದ ಗೋಪಾಲಗೌಡ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಧ್ಯೆ  ಜಯಮ್ಮ ಅವರಿಗೆ ಕೈ ಆಪರೇಷನ್ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

Key words: woman, voting, After, admitted, hospital