ಮೈಸೂರಿನ ಮೇಯರ್ ಆಗಲೂ ನನಗೆ ಸ್ಪೂರ್ತಿ ನೀಡಿದ್ದು ಮೇಯರ್ ಮುತ್ತಣ್ಣ ಚಿತ್ರ- ಅಯೂಬ್ ಖಾನ್

ಮೈಸೂರು,ಏಪ್ರಿಲ್,24,2024 (www.justkannada.in): ಮೈಸೂರಿನ ಮೇಯರ್ ಆಗಲೂ ನನಗೆ ಸ್ಪೂರ್ತಿ ನೀಡಿದ್ದು ವರ ನಟ ಡಾ. ರಾಜ್ ಕುಮಾರ್ ನಟನೆಯ ಮೇಯರ್ ಮುತ್ತಣ್ಣ ಚಿತ್ರ ಎಂದು ಮಾಜಿ ಮೇಯರ್ ಹಾಗೂ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ   ಅಯೂಬ್ ಖಾನ್ ನುಡಿದರು.

ಕನ್ನಡ ಚಿತ್ರರಂಗದ ವರನಟ ಡಾ. ರಾಜ್ ಕುಮಾರ್ ಅವರ 95ನೇ ಜನ್ಮದಿನೋತ್ಸವ ಅಂಗವಾಗಿ ಮೈಸೂರು ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ಡಾ.ರಾಜ ಕುಮಾರ್ ಅವರ ಪ್ರತಿಮೆಗೆ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ  ಅಯೂಬ್ ಖಾನ್  ಮಾಲಾರ್ಪಣೆ ಮಾಡಿದರು.

ಬಳಿಕ ಅವರು ಮಾತನಾಡಿ,  ಆಡು ಮುಟ್ಟಿದ ಸೊಪ್ಪಿಲ್ಲ ಎನ್ನುವ ಹಾಗೆ ಡಾ. ರಾಜಕುಮಾರ್ ರವರು ಮಾಡದ ಪಾತ್ರವಿಲ್ಲ, ಭಾರತ ಚಿತ್ರರಂಗವೇ ಕರುನಾಡಿನತ್ತ ತಿರುಗಿ ನೋಡುವಂತೆ ಮಾಡಿದ್ದು ಡಾ. ರಾಜಣ್ಣ  ಅವರು, ಮೈಸೂರಿನ ಮೇಯರ್ ಆಗಲೂ ನನಗೆ ಪ್ರೇರೆಪಿಸಿದ್ದೇ ರಾಜಣ್ಣ ಅವರ ಮೇಯರ್ ಮುತ್ತಣ್ಣ ಚಿತ್ರ ಎಂದರು.

ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜೇಶ್. ಜಿ ಗೌಡ, ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್, ನಾಗೇಶ್,  ವರುಣಾ ಮಹದೇವ್, ಕೃಷ್ಣಪ್ಪ, ಲೋಕೇಶ್, ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾಜು, ಶಿವು ಕೆ.ಜಿ ಕೊಪ್ಪಲು, ಸೋಮಣ್ಣ ಸೇರಿ ಇನ್ನಿತರರು ಉಪಸ್ಥಿತರಿದ್ದರು.

Key words: mysore, Actor, Rajkumar, birthday