Sunday, September 6, 2026

BDA Apartments

Home Front Page ಕೇಂದ್ರದಿಂದ ರಾಜ್ಯಕ್ಕೆ ಬರಪರಿಹಾರ ಬಿಡುಗಡೆ: ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ಏನು..?

ಕೇಂದ್ರದಿಂದ ರಾಜ್ಯಕ್ಕೆ ಬರಪರಿಹಾರ ಬಿಡುಗಡೆ: ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ಏನು..?

ಕಲಬುರುಗಿ,ಏಪ್ರಿಲ್, 27,2024 (www.justkannada.in):  ಕರ್ನಾಟಕಕ್ಕೆ ಕೇಂದ್ರ ಸರ್ಕಾರ 3,454 ಕೋಟಿ ರೂ ಬರಪರಿಹಾರ ಬಿಡುಗಡೆ ಮಾಡಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ನಮಗೆ ಬಹಳ ಕಡಿಮೆ ಪರಿಹಾರ ಕೊಟ್ಟಿದೆ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ,  ಕೇಂದ್ರ ಸರ್ಕಾರ  ನಮಗೆ ಬಹಳ ಕಡಿಮೆ ಪರಿಹಾರ ಕೊಟ್ಟಿದೆ. ನಾವು 18,174 ಕೋಟಿ  ರೂ. ಬರ ಪರಿಹಾರ ಕೇಳಿದ್ದವು. ಆದರೆ ಅವರು 3, 454 ಕೋಟಿ ರೂ. ಕೊಟ್ಟಿದ್ದಾರೆ ಎಂದರು.

ಸೆಪ್ಟಂಬರ್ ನಲ್ಲೇ ನಾವು  ಕೇಂದ್ರ ಸರ್ಕಾರಕ್ಕೆ ಪರಿಹಾರ ಕೇಳಿದ್ದವು.  ಆದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬರ ಪರಿಹಾರ ಹಣ ಕೇಳಿಲ್ಲ  ಗ್ಯಾರಂಟಿಗಳಿಗೆ ಹಣ ಕೇಳಿದ್ದಾರೆ ಎಂದರು.  ನಾವು ಗ್ಯಾರಂಟಿಗಳಿಗೆ  ಹಣ ಕೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಡಿಸೆಂಬರ್  20ರಂದು ಸ್ವತಃ ನಾವೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನ ಭೇಟಿ ಮಾಡಿದ್ದವು. ಆ ವೇಳೆ ಸಭೆ ಮಾಡುತ್ತೇನೆ ಅಂದರು. ಆದರೆ ಯಾವುದೆ ಸಭೆ ಮಾಡಲಿಲ್ಲ. ನಾಳೆ ರಾಜ್ಯಕ್ಕೆ ಮೋದಿ ಬರುತ್ತಿದ್ದಾರೆ ಈಗ ರಾಜ್ಯಕ್ಕೆ ಬರಪರಿಹಾರ ಘೋಷಣೆ ಮಾಡಿದ್ದಾರೆ ಎಂದರು.

Key words: drought relief, center, CM Siddaramaiah