ಹಳೇ ಮೈಸೂರು ಪ್ರಾಂತ್ಯದಲ್ಲಿ ದಾಖಲೆಯ ಮತದಾನ:  ಅಭ್ಯರ್ಥಿಗಳ ಭವಿಷ್ಯ ಮತಪಟ್ಟಿಗೆಯಲ್ಲಿ ಭದ್ರ.

ಮೈಸೂರು,ಏಪ್ರಿಲ್,27,2024 (www.justkannada.): ನಿನ್ನೆ ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದ್ದು ಬಿರು ಬಿಸಿಲ ನಡುವೆಯೂ ಮತದಾರರು ಮತಗಟ್ಟೆಗೆ ಬಂದು ಉತ್ಸುಕತೆಯಿಂದ ಮತಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ದಾಖಲೆ ಮತದಾನವಾಗಿದೆ.

ಅದರಲ್ಲೂ ಹಳೆ ಮೈಸೂರು ಪ್ರಾಂತ್ಯದ ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಮಂಡ್ಯದಲ್ಲಿ ದಾಖಲೆ ಪ್ರಮಾಣದಲ್ಲಿ ಮತದಾನ ನಡೆದಿದೆ.  ಮೈಸೂರು ಜಿಲ್ಲೆ  ಶೇ 70.45ರಷ್ಟು ಮತದಾನ, ಚಾಮರಾಜನಗರ ಜಿಲ್ಲೆ  ಶೇ 76.59ರಷ್ಟು ಮತದಾನ  ಮತ್ತು ಮಂಡ್ಯದಲ್ಲಿ  ಶೇ 81.48 ರಷ್ಟು ದಾಖಲೆಯ ಮತದಾನ ನಡೆದಿದೆ.

ಇನ್ನು ಅಲ್ಲಲ್ಲಿ ಸಣ್ಣಪುಟ್ಟ ಗಲಾಟೆ ಹೊರತುಪಡಿಸಿ ಬಹುತೇಕ ಶಾಂತಿಯುತ ಮತದಾನವಾಗಿದೆ. ನಿನ್ನೆ ಮುಂಜಾನೆ ಬಿರುಸಿನ ಮತದಾನ ನಡೆದರೆ ಮಧ್ಯಾಹ್ನ ಬಿಸಿಲಿನಿಂದ ಮಂದಗತಿಯಾಗಿ ನಡೆದು ಸಂಜೆಯಾಗುತ್ತಿದ್ದಂತೆ ಮತ್ತೆ ವೋಟಿಂಗ್ ಬಿರುಸುಗೊಂಡಿತು.  ಈ ಮೂಲಕ ದೇಶದ ದೊಡ್ಡ ಪ್ರಜಾಪ್ರಭುತ್ವ ಹಬ್ಬದಲ್ಲಿ ಮತದಾರ ಪ್ರಭುಗಳು ಉತ್ಸುಕತೆಯಿಂದ ತೊಡಗಿದ್ದರು.

ಈ ಮಧ್ಯೆ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದ ಇಂಡಿಗನತ್ತ ಗ್ರಾಮದಲ್ಲಿ ಮತದಾನ ಬಹಿಷ್ಕಾರ ಹಾಕಲಾಗಿತ್ತು, ಈ ಗ್ರಾಮದಲ್ಲಿ ಗಲಭೆ ಹೊರತುಪಡಿಸಿ ಉಳಿದೆಲ್ಲ ಕಡೆ ಶಾಂತಿಯುತವಾಗಿ ಮತದಾನ ನಡೆದಿದೆ. ಮೈಸೂರು ಕೊಡುಗು ಲೋಕಸಭಾ ಕ್ಷೇತ್ರದ 18 ಅಭ್ಯರ್ಥಿಗಳ ಭವಿಷ್ಯ ಮತಗಟ್ಟೆಯಲ್ಲಿ ಭದ್ರವಾಗಿದೆ.  ನಗರದ ಪಡುವಾರಳ್ಳಿಯ ಮಹಾರಾಣಿ ವಾಣಿಜ್ಯ ಕಾಲೇಜಿನಲ್ಲಿ ಬಿಗಿ ಭದ್ರತೆಯೊಂದಿಗೆ ಮತ ಪೆಟ್ಟಿಗೆಗಳನ್ನ ಇಡಲಾಗಿದೆ.

Key words: Lokasabha- election-Record –voting-Mysore