ಇಂದಿನಿಂದ ನಂದಿನಿ ಹಾಲಿನ ದರ 3ರೂ. ಹೆಚ್ಚಳ.

ಬೆಂಗಳೂರು,ಆಗಸ್ಟ್,1,2023(www.justkannada.in): ಇಂದಿನಿಂದ ಪ್ರತಿ ಲೀಟರ್‌  ನಂದಿನಿ ಹಾಲಿನ ದರ 3 ರೂ. ಹೆಚ್ಚಳವಾಗಿದೆ.

ಕೆಎಂಎಫ್‌ ನಂದಿನಿ ಹಾಲಿನ ದರ ಏರಿಕೆಗೆ ಸರ್ಕಾರಕ್ಕೆ ಪಸ್ತಾವನೆ ಸಲ್ಲಿಸಿತ್ತು. ಹಾಲು ಉತ್ಪಾದಕರ ಬೇಡಿಕೆ ಹಿನ್ನೆಲೆಯಲ್ಲಿ ಹಾಲಿನ ದರ ಏರಿಕೆಗೆ ಸರ್ಕಾರ ಒಪ್ಪಿಗೆ ನೀಡಿದ್ದು ಹೀಗಾಗಿ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಬಿಸಿತಟ್ಟಿದೆ. ಇಂದಿನಿಂದ ಪರಿಷ್ಕೃತ ದರ ಜಾರಿಗೆ ಬಂದಿದೆ.

ಟೋನ್ಡ್‌ ಹಾಲಿನ ಹಿಂದಿನ ದರ 39 ರೂ., ಪರಿಷ್ಕೃತ ದರ 42 ರೂ. ಹೋಮೋಜಿನೈಸ್ಡ್ ಹಾಲಿನ ಹಿಂದಿನ ದರ 40 ರೂ., ಪರಿಷ್ಕೃತ ದರ 43 ರೂ ಆಗಿದೆ. ಹಸುವಿನ ಹಾಲು(ಹಸಿರು ಪೊಟ್ಟಣ) ಹಿಂದಿನ ದರ 43, ಪರಿಷ್ಕೃತ ದರ 46 ರೂ. ಶುಭಂ ಹಾಲಿನ ಹಿಂದಿನ ದರ 45 ರೂಪಾಯಿ, ಪರಿಷ್ಕೃತ ದರ 48 ರೂ ಆಗಿದೆ.

ಹಾಗೆಯೇ ಮೊಸರು ಪ್ರತಿ ಲೀಟರ್​ಗೆ ಹಿಂದಿನ ದರ 47 ರೂ., ಪರಿಷ್ಕೃತ ದರ 50 ರೂ. ಮಜ್ಜಿಗೆ 200ml ಹಿಂದಿನ ದರ 8 ರೂಪಾಯಿ, ಪರಿಷ್ಕೃತ ದರ 9 ರೂ. ಆಗಿದೆ.

-V.Mahesh kumar

Key words: From-today – price – Nandini milk -Rs.3-increase