ಬೆಂ-ಮೈ ಎಕ್ಸ್ ಪ್ರೆಸ್ ವೇನಲ್ಲಿ ಆಟೋ, ಟ್ರ್ಯಾಕ್ಟರ್​​, ಬೈಕ್ ​ಗೆ ಸಂಪೂರ್ಣ ನಿರ್ಬಂಧ: ನಿಯಮ ಮೀರಿದ್ರೆ ಬೀಳುತ್ತೆ ದಂಡ.

ಬೆಂಗಳೂರು,ಆಗಸ್ಟ್,1,2023(www.justkannada.in): ಇಂದಿನಿಂದ  ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​ ವೇನಲ್ಲಿ ಆಟೋ, ಟ್ರ್ಯಾಕ್ಟರ್​​, ಬೈಕ್ ​ಗಳ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.

ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​ ವೇನಲ್ಲಿ ಅಪಘಾತ ತಡೆಯಲು ಹೆದ್ದಾರಿ ಪ್ರಾಧಿಕಾರ, ಪೊಲೀಸ್ ಇಲಾಖೆಯಿಂದ ಈ ಹೊಸ ನಿಯಮ ಜಾರಿಯಾಗಿದೆ.  ಬೆಂ-ಮೈ ಎಕ್ಸ್​​ಪ್ರೆಸ್​ ವೇನಲ್ಲಿ ಇಂದಿನಿಂದ ಆಟೋ, ಟ್ರ್ಯಾಕ್ಟರ್​​, ಬೈಕ್​ಗೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಹೆದ್ದಾರಿ ಮೇಲೆ ಸಂಚಾರಕ್ಕೆ ಅರ್ಹ ಅಲ್ಲದ ವಾಹನಗಳಿಗೂ ನಿರ್ಬಂಧ ಹೇರಲಾಗಿದೆ.

ನಿಯಮ ಮೀರಿ ಎಕ್ಸ್ ಪ್ರೆಸ್ ವೇ ಬಳಸಿದರೆ 500 ರೂ. ದಂಡ ಬೀಳಲಿದೆ. ಬೈಕ್,ಆಟೋ, ಟ್ರ್ಯಾಕ್ಟರ್ ಗಳು ಸರ್ವೀಸ್ ರೋಡ್ ಬಳಸುವಂತೆ ಸೂಚಿಸಲಾಗಿದೆ.  ಬೆಂ-ಮೈ ಎಕ್ಸ್​​ಪ್ರೆಸ್​ ವೇನ 9 ಕಡೆ ಹಾಗೂ ಹೆದ್ದಾರಿಯ ಎಂಟ್ರಿ ಅಂಡ್​​​ ಎಕ್ಸಿಟ್ ಪಾಯಿಂಟ್​ ಗಳಲ್ಲಿ ಚೆಕಿಂಗ್ ಮಾಡಲಾಗುತ್ತಿದೆ. ರಾಮನಗರದ ಹೆಜ್ಜಾಲ ಟೋಲ್ ನಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು ಒಂದೊಂದೇ ವಾಹನಗಳನ್ನ ತಡೆದು ವಾಪಸ್ ಕಳುಹಿಸುತ್ತಿದ್ದಾರೆ ಎನ್ನಲಾಗಿದೆ.

Key words: ban –auto-tractor-bike –bangalore-mysore Expressway- Violation – rules – fine.