ಹುಬ್ಬಳ್ಳಿ, ಅಕ್ಟೋಬರ್,17,2026 (www.justkannada.in): ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ವಿಚಾರದ ಚರ್ಚೆ ಮಾತುಗಳು ಮುಂದುವರೆದಿದ್ದು ಈ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಾರ್ವಜನಿಕ ಜೀವನದಲ್ಲಿರುವವರು ನೈತಿಕತೆ ಕಾಪಾಡಿಕೊಳ್ಳಬೇಕು. ಸ್ಟಿಂಗ್ ಯಾರು ಮಾಡಿದ್ದಾರೆ ಎಂದು ಚರ್ಚೆಯಾಗುತ್ತಿದೆ. ನ್ಯಾಯಾಧೀಶರ ಸಮ್ಮುಖದಲ್ಲಿ ಎಸ್ ಐಟಿ ತನಿಖೆ ಮಾಡಲಿ ಎಂದು ಆಗ್ರಹಿಸಿದರು.
ಕೆಪಿಎಸ್ ಸಿ ಹಗರಣದಲ್ಲಿ ಅನೇಕ ಸಚಿವರು ಸಿಲಕುತ್ತಾರೆ ಈ ತನಿಖೆ ನಡೆದರೆ ಸರ್ಕಾರ ಪತನವಾಗಬಹುದು ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.
Sting Operation, SIT, investigation, Union Minister, Pralhad Joshi






