ದಸರಾ ಗಜಪಡೆ ಅಂತಿಮ ಹಂತದ ತಾಲೀಮು: ಜಂಬೂ ಸವಾರಿಗೆ ಅರ್ಜುನ ಆ್ಯಂಡ್ ಟೀಂ ರೆಡಿ

ಮೈಸೂರು, ಅಕ್ಟೋಬರ್, 06, 2019 (www.justkannada.in): ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಎರಡು ದಿನಗಳು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.

ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿಂದು ಜಂಬೂ ಸವಾರಿ ಮೆರವಣಿಗೆ ರಿಹರ್ಸಲ್ ನಡೆಯುತ್ತಿದೆ. ಚಾಮುಂಡೇಶ್ವರಿ ದೇವಿ ಉತ್ಸವ ಮೂರ್ತಿಗೆ ಗಣ್ಯರು ಪುಷ್ಪಾರ್ಚನೆ ಮಾಡಲಿರುವ ಹಿನ್ನೆಲೆ ಅಂಬಾರಿ ಆನೆ ಅರ್ಜುನ ಸೇರಿದಂತೆ ಇತರ ಆನೆಗಳು ಯಾವ ರೀತಿ ಸಾಗಬೇಕೆಂಬುದರ ಬಗ್ಗೆ ಇಂದು ಸಹ ತಾಲೀಮು ನಡೆಯಿತು.

ಈ ಬಾರಿಯೂ ಮೆರವಣಿಗೆಯನ್ನು ಮುನ್ನಡೆಸಲಿರುವ ಹಿರಿಯ ಅನುಭವಿ ಬಲರಾಮ ಮೆರವಣಿಗೆ ರಿಹರ್ಸಲ್ ನಲ್ಲಿ ನಿಶಾನೆ ಆನೆಯಾಗಿ ಎಲ್ಲರಿಗಿಂತ ಮುಂಚೂಣಿಯಲ್ಲಿ ಸಾಗಿದೆ. ನೌಪತ್ತು ಆನೆಯಾಗಿ ಬಲರಾಮನನ್ನು ಹಿಂಬಾಲಿಸುತ್ತ ಅಭಿಮನ್ಯು.ಬಳಿಕ ಸಾಲಾನೆಗಳಾಗಿ ಇತರ ಆನೆಗಳು ಸಾಗಿದವು.