ಮೈಸೂರು ದಸರೆಗಿಲ್ಲ ಉಗ್ರರ ಆತಂಕ, ಜನರನ್ನು ಭಯಭೀತಿಗೊಳಿಸಲು ಕಿಡಿಗೇಡಿಗಳ ಷಡ್ಯಂತ್ರ: ಸಚಿವ ವಿ.ಸೋಮಣ್ಣ ಸ್ಪಷ್ಟನೆ

ಮೈಸೂರು, ಅಕ್ಟೋಬರ್, 06, 2019 (www.justkannada.in): ದಸರಾ ಮಹೋತ್ಸವಕ್ಕೆ ಯಾವುದೇ ಉಗ್ರರ ಆತಂಕ ಇಲ್ಲ ಎಂದು ಉಸ್ತುವಾರಿ ಸಚಿವ ವಿ. ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.

ಮೈಸೂರು ದಸರಾ ಜಂಬೂ ಸವಾರಿ ವೇಳೆ ಸ್ಪೋಟಕ್ಕೆ ಸಂಚು ರೂಪಿಸಿದ್ದ ನಾಲ್ವರು ಉಗ್ರರನ್ನು ಬಂಧಿಸಲಾಗಿದೆ ಎಂಬ ಸುದ್ದಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಜನರನ್ನು ಭಯಭೀತಿಗೊಳಿಸಲು ಇಂತಹ ಷಡ್ಯಂತ್ರಗಳು ನಡೆಯುತ್ತವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸರ್ಕಾರ ನೋಡಿಕೊಳ್ಳುತ್ತೆ. ತಾಯಿ ಚಾಮುಂಡೇಶ್ವರಿ ಸುಮ್ಮನೆ ಕುಳಿತಿಲ್ಲ, ಅವಳ ರಕ್ಷಣೆ ನಮಗಿದೆ ಎಂದು ಹೇಳಿದರು.

ನಗರ ಪೊಲೀಸರಿಗೆ ಎಲ್ಲಾ ಬೆಳವಣಿಗೆಗಳ ಮಾಹಿತಿ ಇದೆ, ಹೆಚ್ಚಿನ ಭಧ್ರತೆ ಅವಶ್ಯಕತೆ ಇಲ್ಲ, ಗುಪ್ತಚರ ಇಲಾಖೆ ತನ್ನ ಕೆಲಸ ಮಾಡ್ತಿದೆ. ಅಧಿಕಾರಿಗಳು ಅವರ ಕೆಲಸ ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು.