ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮುಂದುವರೆದ ಆಕ್ರೋಶ: ರಸ್ತೆ ತಡೆದು ದಲಿತ ಸಂಘಟನೆ ಪ್ರತಿಭಟನೆ..

ಮೈಸೂರು,ಅ,5,2019(www.justkannada.in):  ಮಹಿಷಾ ದಸರಾ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದ ಸಂಸದ ಪ್ರತಾಪ್ ಸಿಂಹ ವಿರುದ್ಧ ಮೈಸೂರಿನಲ್ಲಿ ಪ್ರತಿಭಟನೆ ಮುಂದುವರೆದಿದ್ದು, ದಲಿತ ಸಮುದಾಯ ಮುಖಂಡರು ಟಿ. ನರಸಿಪುರದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ರಸ್ತೆ ತಡೆಯಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತ ಉಂಟಾಯಿತು. ಸಂಸದ ಪ್ರತಾಪ್ ಸಿಂಹ ವಿರುದ್ದ ದಲಿತ ಸಂಘಟನೆಗಳು ಚಾಮುಂಡಿ ಬೆಟ್ಟದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದವು. ಪ್ರಗತಿಪರ ಸಂಘಟನಕಾರರು ಚಾಮುಂಡಿಬೆಟ್ಟದಲ್ಲಿರುವ ಮಹಿಷಾ ಪ್ರತಿಮೆಗೆ  ಮಾಲಾರ್ಪಣೆ ಮಾಡಿದರು.

ಯಾವುದೇ ಅನುಮತಿ ತೆಗೆದುಕೊಳ್ಳದೇ ಮಾಲಾರ್ಪಣೆ ಮಾಡಿದ ಹಿನ್ನೆಲೆ ನೂರಕ್ಕೂ ಹೆಚ್ಚು ಮಂದಿ ಪ್ರತಿಭಟನಾಕಾರರನ್ನ ಪೊಲೀಸರು ಅರೆಸ್ಟ್ ಮಾಡಿದರು. ಪ್ರತಿಭಟನಕಾರರನ್ನು ಬಂಧಿಸಿ ಸಿ ಆರ್ ಗ್ರೌಂಡ್ ಗೆ ರವಾನಿಸಿದರು. ಮಾಲಾರ್ಪಣೆಗಾಗಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಂಘಟನಕಾರರು ಆಗಮಿಸಿದ್ದರು.

Key words: Continued -outrage -against MP Pratap simha-Mysore- Dalit community