ಯುವದಸರಾ ವೇದಿಕೆಯಲ್ಲೇ ಲವ್ ಪ್ರಪೋಸ್ ವಿಚಾರ: ಚಂದನ್ ಶೆಟ್ಟಿ, ನಿವೇದಿತಾ ವಿರುದ್ದ ಮೈಸೂರಿನಲ್ಲಿ ಮೂರು ದೂರು ದಾಖಲು….

ಮೈಸೂರು,ಅ,5,2019(www.justkannada.in):  ಮೈಸೂರು ದಸರಾ ಯುವದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಲವ್ ಪ್ರಪೋಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರ್ಯಾಪರ್ ಸ್ಟಾರ್ ಚಂದನ್ ಶೆಟ್ಟಿ  ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಮೇಲೆ ಮೈಸೂರಿನಲ್ಲಿ ಮೂರು ದೂರುಗಳು ದಾಖಲಾಗಿವೆ.

ಲಕ್ಷೀಪುರಂ ಪೊಲೀಸ್ ಠಾಣೆಯಲ್ಲಿ ಚಂದನ್ ಮೇಲೆ ಮೂರು ಕೇಸ್ ದಾಖಲಾಗಿದೆ. ಸರ್ಕಾರಿ ವೇದಿಕೆ ದುರ್ಬಳಕೆ, ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆ, ನಿವೇದಿತಾರಿಂದ ಅತಿಕ್ರಮ ಪ್ರವೇಶ, ಸಂಚು ರೂಪಿಸಿ ಪ್ರಚಾರ ಪಡೆದ ಆರೋಪಗಳ ಮೇಲೆ ದೂರು ದಾಖಲಾಗಿದೆ.

ಮೈಸೂರು ಯೂತ್ ಕಾಂಗ್ರೆಸ್, ಕರ್ನಾಟಕ ಪ್ರಜಾಪಾರ್ಟಿ ಮತ್ತು ಸಾಮಾಜಿಕ ಹೋರಾಟಗಾರ ಗಂಗರಾಜುರಿಂದ  ಕೇಸ್ ದಾಖಲು ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೋಸಿನ್ ಖಾನ್,  ಇದು ಮೈಸೂರಿಗರು ತಲೆ ತಗ್ಗಿಸುವ ಕೃತ್ಯ. ಸುಮಾರು ೪೦೦ ವರ್ಷಗಳ ಇತಿಹಾಸವನ್ನು ಕೆಡಸುವ ಕೆಲಸವಾಗಿದೆ. ತಮ್ಮ ವೈಯುಕ್ತಿಕ ಕೆಲಸ ಕಾರ್ಯಕ್ಕೆ ಸರ್ಕಾರಿ ಕಾರ್ಯಕ್ರಮ ಬಳಸಿಕೊಂಡದ್ದು ತಪ್ಪು. ಆಹ್ವಾನ ಇಲ್ಲದಿದ್ದರೂ ನಿವೇದಿತಾ ಅವರನ್ನ ವೇದಿಕೆ ಮೇಲೆ ಬಿಡಲಾಗಿದೆ. ಇದು ಭದ್ರತಾ ಲೋಪಕ್ಕೆ ಇಡಿದ ಕೈಗನ್ನಡಿ. ಸರ್ಕಾರಿ ಕಾರ್ಯಕ್ರಮವನ್ನ ತಪ್ಪಾಗಿ ಬಳಸಿಕೊಂಡಿದ್ದಕ್ಕೆ ಚಂದನ್ ಶೆಟ್ಟಿಗೆ ಮೇಲೆ ಕಾನೂನು ಕ್ರಮ ಕೈಗೊಳ್ಳಲು ದೂರು ದಾಖಲು ಮಾಡಿದ್ದೇವೆ ಎಂದರು.

Key words: yuvadasara-stage- Engagement-  complaints –Mysore- against- Chandan Shetty –Nivedita gowda