ಕಾಂಗ್ರೆಸ್ ಗೆ ಮತ್ತೆ ಹಿಂದಿರುಗುವ ಪ್ರಶ್ನೆಯೇ ಇಲ್ಲ: ಪಕ್ಷದಿಂದ ಬಿಡುಗಡೆಗೊಳಿಸುವಂತೆ ಕೇಳಿದ್ದೇನೆ- ಮಾಜಿ ಸಂಸದ ಮುದ್ಧಹನುಮೇಗೌಡ.

ತುಮಕೂರು,ಸೆಪ್ಟಂಬರ್,1,2022(www.justkannada.in):  ಮಾಜಿ ಸಂಸದ ಮುದ್ಧಹನುಮೇಗೌಡ ಕಾಂಗ್ರೆಸ್ ತೊರೆಯಲು ಮುಂದಾಗಿದ್ದಾರೆ.

ಈ ಕುರಿತು ಮಾತನಾಡಿರುವ ಮಾಜಿ ಸಂಸದ ಮುದ್ಧಹನುಮೇಗೌಡ,ನನ್ನನ್ನು ಕಾಂಗ್ರೆಸ್ ನಿಂದ ಬಿಡುಗಡೆ ಮಾಡುವಂತೆ ಕೇಳಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ಧರಾಮಯ್ಯ ಬಳಿ ಕೇಳಿಕೊಂಡದ್ದೇನೆ. ನಾನು ಮತ್ತೆ ಕಾಂಗ್ರೆಸ್ ಗೆ ಹಿಂದಿಗುವ ಪ್ರಶ್ನೆಯೇ ಇಲ್ಲ. 2023 ರ ಚುನಾವಣೆಯಲ್ಲಿ ಕುಣಿಗಲ್ ನಿಂದ ಸ್ಪರ್ಧಿಸುತ್ತೇನೆ. ಆದರೆ ಯಾವಪಕ್ಷದಿಂದ ಎಂದು ಇನ್ನು ತೀರ್ಮಾನಿಸಿಲ್ಲ ಎಂದು ತಿಳಿಸಿದ್ದಾರೆ.

 

Key words: Congress-left – former MP -Muddhahanumegowda.