ಮೈಸೂರು ದಸರಾ: 2ನೇ ಹಂತದ ಗಜಪಡೆಗೆ ‘ಪಾರ್ಥಸಾರಥಿ’ ಸೇರ್ಪಡೆ.

 

ಮೈಸೂರು,ಸೆಪ್ಟಂಬರ್,1,2022(www.justkannada.in):  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಮೊದಲ ಹಂತದ ಗಜಪಡೆ ಆಗಮಿಸಿ ಅರಮನೆ ಆವರಣದಲ್ಲಿ ಬೀಡುಬಿಟ್ಟಿವೆ.

ಈ ನಡುವೆ ಸೆಪ್ಟೆಂಬರ್ 7 ರಂದು ಎರಡನೇ ಹಂತದಲ್ಲಿ ಇನ್ನು 5 ಆನೆಗಳು ಅರಮನೆಗೆ ಆಗಮಿಸಲಿದ್ದು ಈ 2ನೇ ಹಂತದ ಗಜಪಡೆಗೆ  ಬಂಡಿಪುರದ ರಾಮಪುರ ಆನೆ ಶಿಬಿರದಿಂದ  ಪಾರ್ಥಸಾರಥಿ ಸೇರ್ಪಡೆಯಾಗಿದ್ದಾನೆ.  ಪಾರ್ಥಸಾರಥಿ ಇದೇ ಮೊದಲ ಬಾರಿ ಜಂಬೂ ಸವಾರಿ ಟೀಮ್ ಸೇರ್ಪಡೆಯಾಗುತ್ತಿದ್ದಾನೆ.

18 ವರ್ಷದ ಸೌಮ್ಯ ಸ್ವಭಾವದ ಪಾರ್ಥಸಾರಥಿಗೆ ಮಾವುತರು ಶಿಬಿರದಲ್ಲೇ ತಯಾರಿ ನೀಡುತ್ತಿದ್ದು, ಎರಡನೇ ಹಂತದಲ್ಲಿ ಗಜಪಡೆಯ ಜೊತೆ ಹೋಗಲು ಪಾರ್ಥಸಾರಥಿ ಸಿದ್ದನಾಗಿದ್ದಾನೆ.  ಬಂಡಿಪುರ ರಾಮಪುರ ಆನೆ ಶಿಬಿರದಿಂದ ಈ ಬಾರಿ ಮೂರು ಆನೆಗಳು ದಸರಾ ಮಹೋತ್ಸವಕ್ಕೆ ಸೇರ್ಪಡೆಯಾಗಿವೆ. ಈಗಾಗಲೇ ಚೈತ್ರ, ಲಕ್ಷ್ಮಿ ಮೊದಲ ಹಂತದಲ್ಲಿ ಹೋಗಿವೆ.  ಇದೀಗ ಆನೆ ಶಿಬಿರದಲ್ಲೇ ಸಕಲ ತಯಾರಿಗಳೊಂದಿಗೆ ಮೈಸೂರಿಗೆ ಪ್ರಯಾಣ ಬೆಳೆಸಲು ಪಾರ್ಥಸಾರಥಿ ಸಿದ್ದವಾಗುತ್ತಿದ್ಧಾನೆ.

Key words: Mysore Dasara-Parthasarathi-gajapade