Wednesday, July 29, 2026

BDA Apartments

Home Election 2024 ಮತ ಕೇಂದ್ರಗಳಲ್ಲಿ ಸರ್ಕಾರದ ಐದು ಗ್ಯಾರಂಟಿ ಮುಂದಿಟ್ಟು ಮತ ಸೆಳೆಯುವ ಪ್ರಯತ್ನ ಯಶಸ್ವಿ- ಹೆಚ್. ಎ....

ಮತ ಕೇಂದ್ರಗಳಲ್ಲಿ ಸರ್ಕಾರದ ಐದು ಗ್ಯಾರಂಟಿ ಮುಂದಿಟ್ಟು ಮತ ಸೆಳೆಯುವ ಪ್ರಯತ್ನ ಯಶಸ್ವಿ- ಹೆಚ್. ಎ. ವೆಂಕಟೇಶ್.

ಮೈಸೂರು,ಏಪ್ರಿಲ್,26,2024 (www.justkannada.in):   ಕಾಂಗ್ರೆಸ್ ಸರ್ಕಾರದ ಐದು ಗ್ಯಾರೆಂಟಿಗಳು ಜನರ ಜೀವನವನ್ನು ಉತ್ತಮಗೊಳಿಸಿದ ಬಗ್ಗೆ ಮತದಾರರ ಗಮನಕ್ಕೆ ತಂದು ಮತಗಟ್ಟೆಗಳಲ್ಲಿ ಮತಬೇಟೆಗೆ ಕಾಂಗ್ರೆಸ್ ಕಾರ್ಯಕರ್ತರ ಶ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ ಎಂದು ಕೆಪಿಸಿಸಿ ವಕ್ತಾರ ಹೆಚ್. ಎ. ವೆಂಕಟೇಶ್ ತಿಳಿಸಿದ್ದಾರೆ.

ಕೆಆರ್ ಕ್ಷೇತ್ರದ  ವಿವಿಧ ಮತ ಕೇಂದ್ರಗಳ ಮುಂದೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಜೊತೆಯಲ್ಲಿ ಮತದಾನದ ಬಗ್ಗೆ ಸಮಾಲೋಚನೆ ಮಾಡಿ ಅಲ್ಲಿನ ಮತದಾರರಿಗೆ ಮತಯಾಚನೆ  ಮಾಡಿ ಪಕ್ಷದ ಐದು ಗ್ಯಾರಂಟಿಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮೈಸೂರು ನಗರ ಕಾಂಗ್ರೆಸ್ ಕಾರ್ಯದರ್ಶಿ ಡೈರಿ ವೆಂಕಟೇಶ್, ಕಾರ್ಮಿಕ ವಿಭಾಗದ ಅಧ್ಯಕ್ಷರಾದ ವಿನಯ್, ಪಕ್ಷದ ಮುಖಂಡರಾದ ರವಿಶಂಕರ್,ಹಾಗೂ ಅ ಭಾಗದ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Key words: Lokasabha election, votes, congress H. A.Venkatesh