ವಿಶೇಷ ಮತಗಟ್ಟೆಗಳಲ್ಲಿ‌ ವಿಶೇಷ ಉಡುಗೆತೊಟ್ಟು ಮಿಂಚಿದ ಸಿಬ್ಬಂದಿ

mysore, election, special, dress, pink-sarees

ಮೈಸೂರು, ಏ.26, 2024 : ನಂಜನಗೂಡು ತಾಲ್ಲೂಕಿ ವೀಶೇಷ ಮತಗಟ್ಟೆಗಳಲ್ಲಿ ಚುನಾವಣಾ ಸಿಬ್ಬಂದಿಗಳು ವಿಷಯಾಧಾರಿತ ಉಡುಗೆ ತೊಟ್ಟು ಕರ್ತವ್ಯಕ್ಕೆ ಹಾಜರಾಗಿದ್ದು ಎಲ್ಲರ ಗಮನ ಸೆಳೆಯಿತು.

ತಾಂಡವಪುರ, ಹುಲ್ಲಹಳ್ಳಿ ಯತ್ನಿಕ್‌ ಮತಗಟ್ಟೆಯಲ್ಲಿ ಬಿಳಿ‌ಪಂಚೆ , ಬಿಳಿ‌ಶರ್ಟ್ , ಶಲ್ಯ, ಮೈಸೂರು‌ ಪೇಟ ತೊಟ್ಟಿದ್ದು ಸಖಿ ಮತಗಟ್ಟೆಗಳಲ್ಲಿ ಗುಲಾಬಿ ಬಣ್ಣದ ಉಡುಗೆತೊಟ್ಟಿದ್ದರು.

ಬಂಕಹಳ್ಳಿಯ ಹಾಡಿ‌ ಮತಗಟ್ಟೆಗಳಲ್ಲಿ ಪುಕ್ಕದ ಕಿರೀಟ, ನಡುವಿಗೆ ಸೊಪ್ಲಿನಿಂದ ಸುತ್ತಿಕೊಂಡು ಗಮನ ಸೆಳೆದರೆ, ಇತ್ತ ದೇವಿರಮ್ಮನಹಳ್ಳಿ ಪಾಳ್ಯದ ಯುವ ಮತಗಟ್ಟೆಯಲ್ಲಿ ಸಿಬ್ಬಂದಿ     ಗರಿ ಗರಿ ಕೋಟು ಧರಿಸಿ ಹಾಜರಿದ್ದರು.

ಸಿಂಧುವಳ್ಳಿ ಗ್ರಾಮ ಪಂಚಾಯಿತಿಯ ಕುರಹಟ್ಟಿ ಗ್ರಾಮದ ಸಖಿ‌ಮತಗಟ್ಟೆಗೆ  ಸ್ವಸಹಾಯಸ ಸಂಘದ ಮಹಿಳೆಯರು ಪಿಂಕ್ ಸೀರೆ ಧರಿಸಿ ಹಕ್ಕು ಚಲಾಯಿಸಲು ಬಂದಿದ್ದು ಎಲ್ಲರ ಪ್ರಶಂಶೆಗೆ ಪಾತ್ರ ವಾಗಿದೆ.

key words : mysore, election, special, dress, pink-sarees