ವಿಜಯೇಂದ್ರ ಹಸ್ತಕ್ಷೇಪ ಬಿಎಸ್‌ವೈ ಪದತ್ಯಾಗಕ್ಕೆ ಕಾರಣ: ಮಾಜಿ ಸಚಿವ ವಿಶ್ವನಾಥ್

ಮೈಸೂರು, ಜೂನ್ 06, 2021 (www.justkannada.in): ವಿಜಯೇಂದ್ರ ಹಸ್ತಕ್ಷೇಪ ಬಿಎಸ್‌ವೈ ಪದತ್ಯಾಗಕ್ಕೆ ಕಾರಣ ಎಂದು ಮಾಜಿ ಸಚಿವ ವಿಶ್ವನಾಥ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಎಲ್ಲರನ್ನ ಪ್ರೀತಿಸುವ, ಒಟ್ಟಿಗೆ ಕೊಂಡೊಯ್ಯುವ ಸಾಮಾನ್ಯ ಜ್ಞಾನ ಇರುವವರೇ ಸಾಕು ರಾಜ್ಯವನ್ನ ಮುನ್ನಡೆಸಲು. ಕೈ, ಬಾಯಿ ಶುದ್ದಿ ಇರುವವರು ಬುದ್ದಿವಂತರು ಸಾಕು. ಒಂದೊಂದು ನಾಯಕತ್ವ ಕುಟುಂಬಗಳಿಂದಲೇ ಹೋಗಿದ್ದಾವೆ ಎಂದು ಎಚ್ವಿ ಹೇಳಿದ್ದಾರೆ.

ಇದು ವಯಸ್ಸಿನ ಕಾರಣಕ್ಕೆ ಬದಲಾವಣೆ. ಬಿಜೆಪಿ ವಯಸ್ಸಿನ ಲಕ್ಷ್ಮಣ‌ರೇಖೆ ವಿಧಿಸಿಕೊಂಡಿದೆ. ಇದು ಅಡ್ವಾನಿ, ಜೋಷಿ ಎಲ್ಲರಿಗೂ ಅನ್ವಯ ಆಗಿದೆ. ಆದರೆ ಬಿಎಸ್‌ವೈಗೆ ವಿಶೇಷವಾಗಿ ಆಧ್ಯತೆ ಕೊಟ್ಟಿತ್ತು. ಸಿಎಂ ಪಕ್ಷವನ್ನ ಬಲಪಡಿಸುವ , ಎಲ್ಲರನ್ನ ಗಟ್ಟಿಗಳಿಕೊಳ್ಳಲು ಈ ನಿರ್ಧಾರಕ್ಕೆ ಬಂದಿದ್ದಾರೆ. ಬಿಎಸ್‌ವೈ ಅದಕ್ಷ, ಅಪ್ರಮಾಣಿಕ ಎಂದು ಹೇಳುತ್ತಿದ್ರು. ಬಿಎಸ್‌ವೈ ಮೇಲಿನ ವಿಶ್ಚಾಸಕ್ಕೆ‌ ನಾವೆಲ್ಲಾ ಬಿಜೆಪಿಗೆ ಹೋದ್ವಿ. ಬಿಎಸ್‌ವೈ ವಯಸ್ಸಿನ ಆಧಾರದ ಮೇಲೆ ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.

ಹೈಕಮಾಂಡ್ ಸೂಚನೆಯನ್ನ ಪಾಲಿಸುವುದು ನಾಯಕರ ಕರ್ತವ್ಯ. ರಾಜೀನಾಮೆ ಕೊಟ್ರು , ತಗೊಂಡ್ರು ಎನ್ನುವುದಕ್ಕಿಂತ ಹೈಕಮಾಂಡ್ ತೀರ್ಮಾನ‌ ಮುಖ್ಯ ಎಂದಿದ್ದಾರೆ.CD,now,state,Will,release,more,CDs,MLC,H.VISHWANATH 

ಸರ್ಕಾರ ಅತ್ಯಂತ ನಾಜೂಕಾಗಿ ಸಮಸ್ಯೆ ಬಗೆಹರಿಸಿದೆ…

ಡಿಸಿ ಹಾಗೂ ಪಾಲಿಕೆ ಆಯುಕ್ತೆ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಚ್ವಿ, ಸರ್ಕಾರ ಅತ್ಯಂತ ನಾಜೂಕಾಗಿ ಸಮಸ್ಯೆ ಬಗೆಹರಿಸಿದೆ. ಇಬ್ಬರು ಅಧಿಕಾರಿಗಳು ವರ್ಗಾವಣೆ ಆಗಿದ್ದಾರೆ.

ಆದರೆ ಇಬ್ಬರೂ ಹೊರಗೆ ಹೋಗುವಂತೆ ಮಾಡಿದವರು ನಾವುಗಳು. ಅಂದರೆ ಜನಪ್ರತಿನಿಗಳು ಉಂಟುಮಾಡಿದ ಗೊಂದಲಗಳಿಂದಾಗಿ ಅಧಿಕಾರಿಗಳು ಹೊರಗೆ ಹೋಗುವಂತಾಯಿತು. ವಿಶ್ವನಾಥ್ ಹೇಳಿದ್ದಾರೆ.