ಯಡಿಯೂರಪ್ಪ ಹೇಳಿಕೆಗೆ ಸ್ವಾಗತ ಎಂದ ಎಚ್.ವಿಶ್ವನಾಥ್

ಮೈಸೂರು, ಜೂನ್ 06, 2021 (www.justkannada.in): ಹೈ ಕಮಾಂಡ್ ಸೂಚಿಸಿದ್ರೆ ರಾಜಿನಾಮೆ ನೀಡ್ತಿನಿ-ಸಿಎಂ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್.ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ದೆಹಲಿ ಹೇಳಿದಂತೆ ಕೇಳೋದು ಮೊದಲಿಂದಲೂ ಇರುವ ಪರಿಪಾಠ. ಪರ್ಯಾಯ ನಾಯಕರನ್ನು ಮಾಡ್ತಾರೆ ಎಂದಿರುವುದು ಸ್ವಾಗತ ಅರ್ಹ ಮಾತು. ನನಗೆ ಪರ್ಯಾಯ ನಾಯಕ ಇದ್ದಾರೆ ಎಂದು ಹೇಳಿರುವದು ದೊಡ್ಡ ಮಾತು ಎಂದಿದ್ದಾರೆ.

ರಾಜ್ಯದಲ್ಲಿ ಜನ, ರಾಜಕೀಯ ನಾಯಕರು ಬಹಳ ವಿಶ್ವಾಸ ಇಟ್ಟುಕೊಂಡು ಬಂದಿದ್ದಾರೆ. ಯಡಿಯೂರಪ್ಪ ಈಗಿನ ಪರಿಸ್ಥಿತಿಯಲ್ಲಿ ರಾಜ್ಯದ ಹಿತಕ್ಕಾಗಿ ದೆಹಲಿ ನಾಯಕರ ಮಾತು ಕೇಳಿ ಕೆಳಗಿಳಿಯುತ್ತೇನೆ ಎನ್ನುವುದು ಸ್ವಾಗತ ಮಾಡುವೆ. ಈ ಬೆಳವಣಿಗೆ ಬಹಳ ದಿನದಿಂದ ನಡೆಯುತ್ತಿತ್ತು ಎಂದು ತಿಳಿಸಿದ್ದಾರೆ.

ಆರ್ ಎಸ್ ಎಸ್ ಕೂಡ ಅವರ ಮನವೊಲಿಸಿದೆ. ನಾಡಿನ ಹಿತದಿಂದ ಯಡಿಯೂರಪ್ಪ ರಾಜೀನಾಮೆ ಕೊಡುತ್ತೇನೆ ಎಂದಿರುವುದು ನಾಡಿನ ಜನ ಸ್ವಾಗತ ಮಾಡ್ತಾರೆ. ಯಾರೋ ಮಾತನಾಡಿದ್ರು ಅಂತ ಅವರು ರಾಜೀನಾಮೆ ಕೊಡುತ್ತಿಲ್ಲ. ಅವರಿಗೆ ವಯಸ್ಸಿನ ಕಾರಣ, ಆರೋಗ್ಯದ ಇದೆ. ಬಿಜೆಪಿಯಲ್ಲಿ ವಯಸ್ಸಿನ ಲಕ್ಷ್ಮಣ ರೇಖೆ ಇದೆ. ಯಡಿಯೂರಪ್ಪ ಅವರಿಗೆ ಒಂದು ಎಕ್ಸಂಷನ್ ಕೊಟ್ಟಿದ್ರು.

ಬಿಎಸ್ವೈ ಬಹಳ ಕಷ್ಟಪಟ್ಟು ಪಕ್ಷ ಕಟ್ಟಿದ್ದರು. ಸೈನಿಕ ದೆಹಲಿಗೆ ಹೋಗಿ ಬಂದ್ರು ಅಂತ ಅವರು ರಾಜೀನಾಮೆ ಕೊಡುತ್ತಿಲ್ಲಎಂದು ಮೈಸೂರಿನಲ್ಲಿ ಎಂಎಲ್ಸಿ ವಿಶ್ವನಾಥ್ ಹೇಳಿದ್ದಾರೆ.Chamarajanagar -Oxygen –Disaster-MLC- H. Vishwanath