ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಟಿಕೆಟ್ ಬಗ್ಗೆ ಅಧ್ಯಕ್ಷರು ಫೈನಲ್ ಮಾಡ್ತಾರೆ-ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್.

ಬೆಂಗಳೂರು,ಏಪ್ರಿಲ್,18,2023(www.justkannada.in):  ಪುಲಕೇಶಿನಗರ ಕ್ಷೇತ್ರದಿಂದ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಟಿಕೆಟ್ ನೀಡುವ ಬಗ್ಗೆ ಹೈಕಮಾಂಡ್ ಫೈನಲ್ ಮಾಡಲಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಡಾಜಿ.ಪರಮೇಶ್ವರ್,  ಅಖಂಡ ಶ್ರೀನಿವಾಸಮೂರ್ತಿಗೆ ಟಿಕೆಟ್ ನೀಡುವ ಬಗ್ಗೆ ಅಧ್ಯಕ್ಷರು ಫೈನಲ್ ಮಾಡುತ್ತಾರೆ.  ರಾಜ್ಯ ಸಮಿತಿಯಲ್ಲಿ ಶ್ರಿನಿವಾಸಮೂರ್ತಿ ಹೆಸರು ಕಳಿಸಿದ್ದವು ಹೈಕಮಾಂಢ್ ಇವತ್ತು ಯಾವ ನಿರ್ಧಾರ ಮಾಡುತ್ತೋ ಗೊತ್ತಿಲ್ಲ. ಪುಲಕೇಶಿನಗರದಿಂದ ನನ್ನ ಬೆಂಬಲಿಗರಿಗೆ ಟಿಕೆಟ್ ಕೊಡಿ ಎಂದು ಕೇಳಿಲ್ಲ. ಟಿಕೆಟ್ ಬಗ್ಗೆ ಹೈಕಮಾಂಡ್  ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೆ ಎಂದು ನುಡಿದರು.

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಚರ್ಚೆಯ ಹಂತದಲ್ಲಿದೆ. ಕೊನೆಯ ಹಂತದ ಚರ್ಚೆ ಮುಗಿದ ತಕ್ಷಣ ಪ್ರಣಾಳಿಕೆ ಬಿಡುಗಡೆ ಕಾಂಗ್ರೆಸ್ ಕೊನೆ ಪಟ್ಟಿ ಬಿಡುಗಡೆ ಬಗ್ಗೆ ಅಧ್ಯಕ್ಷರು ಚರ್ಚಿಸುತ್ತಿದ್ದಾರೆ  ಎಂದು ಪರಮೇಶ್ವರ್ ನುಡಿದರು.

Key words: congress-  ticket – MLA -Akhand Srinivasamurthy-former DCM- Dr.G.Parameshwar.