Monday, October 12, 2026

Dasara Wishes

Happy Dasara
Home Front Page ಮೈಸೂರಿನ ‘ಶೂ ವರ್ಲ್ಡ್’ನಲ್ಲಿ ವಿಶೇಷ ರಿಯಾಯಿತಿ ಮಾರಾಟ ಮೇಳ

ಮೈಸೂರಿನ ‘ಶೂ ವರ್ಲ್ಡ್’ನಲ್ಲಿ ವಿಶೇಷ ರಿಯಾಯಿತಿ ಮಾರಾಟ ಮೇಳ

ಮೈಸೂರು, ಏಪ್ರಿಲ್ 18, 2023 (www.justkannada.in): ನಗರದ ಪಾದರಕ್ಷೆಗಳ ಮಾರಾಟ ಸಂಸ್ಥೆ ‘ಶೂ ವರ್ಲ್ಡ್’ ವಿಶೇಷ ರಿಯಾಯಿತಿ ಮಾರಾಟ ಮೇಳ ಆಯೋಜಿಸಿದೆ.

ಕಳೆದ 25 ವರ್ಷಗಳಿಂದ ಮೈಸೂರಿನಲ್ಲಿ ಕಾರ್ಯನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿರುವ ‘ಶೂ ವರ್ಲ್ಡ್’ ನಲ್ಲಿ ಬಗೆಬಗೆಯ ಪಾದರಕ್ಷೆಗಳು ಲಭ್ಯವಿವೆ. ಇನ್ನು ವಿಶೇಷ, ವಿಭಿನ್ನವಾದ ಪಾದರಕ್ಷೆಗಳನ್ನು ಖರೀದಿಸುವ ತಾಣಗಳಲ್ಲಿ ಒಂದು ಎಂಬ  ಹೆಗ್ಗಳಿಕೆಯನ್ನು ‘ಶೂ ವರ್ಲ್ಡ್’ ಹೊಂದಿದೆ.

‘ಶೂ ವರ್ಲ್ಡ್’ನಲ್ಲಿ ಸ್ತ್ರೀ ಮತ್ತು ಪುರುಷರ ಗುಣಮಟ್ಟದ, ಉತ್ತಮ ದರ್ಜೆಯ ಚಪ್ಪಲಿ, ಶೂ ಇತರೆ ಎಲ್ಲ ಇನ್ ಹೌಸ್ ಬ್ರಾಂಡ್ ಪಾದರಕ್ಷೆಗಳ ಖರೀದಿಯ ಮೇಲೆ 2+1 ಆಫರ್ (2 ಜೊತೆ ಪಾದರಕ್ಷೆ ಖರೀದಿಸಿದರೆ 1 ಜೊತೆ ಉಚಿತ ನೀಡಲಾಗುತ್ತಿದೆ.)  ಮಹಿಳೆಯರು, ಮರುಷರು ಹಾಗೂ ಮಕ್ಕಳ ಗುಣಮಟ್ಟದ ಪಾದರಕ್ಷೆಗಳನ್ನು ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಲಾಗುವುದು, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ 99 ರೂ.ರಿಂದ 9,999ರೂ. ವರೆಗಿನ ಪ್ರಖ್ಯಾತ ಕಂಪೆನಿಗಳ ಪಾದರಕ್ಷೆಗಳು ಲಭ್ಯವಿವೆ.

ಶೂ ವರ್ಲ್ಡ್‌ನಲ್ಲಿ ಸ್ಥಳೀಯ, ಭಾರತೀಯ ಹಾಗೂ ಬಹುರಾಷ್ಟ್ರೀಯ ಕಂಪೆನಿಗಳ ಶೂಗಳು ಲಭ್ಯವಿವೆ. ಸಂಸ್ಥೆಯು ಶಾಲಾ-ಕಾಲೇಜು, ಆಸ್ಪತ್ರೆ, ಸ್ವಚ್ಛತಾ ಕಾರ್ಮಿಕರು ಹಾಗೂ ಕೈಗಾರಿಕಾ ಸಂಸ್ಥೆಗಳ ಸಿಬ್ಬಂದಿಗೆ ಅನುಕೂಲವಾಗುವಂಥ ಗುಣಮಟ್ಟದ ಫುಟ್‌ವೇರ್‌ಗಳನ್ನು ಸಗಟು ದರದಲ್ಲಿ ಒದಗಿಸುತ್ತಿದೆ.

ರಂಜಾನ್ ಹಬ್ಬದ ಪ್ರಯುಕ್ತ ರಾಮಸ್ವಾಮಿ ವೃತ್ತದ ಪ್ರೆಸ್ಟೀಜ್ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿರುವ ಮಳಿಗೆ ಹಾಗೂ ಶಿವರಾಂಪೇಟೆಯ ಮನಾರ್ಸ್ ಮಾರ್ಕೆಟ್ ಮುಂಭಾಗ ಇರುವ ನೂತನ ಮಾರಾಟ ಮಳಿಗೆಗಳಲ್ಲಿ ಭಾರೀ ರಿಯಾಯಿತಿ ಮಾರಾಟ ಮೇಳ ಆಯೋಜಿಸಿದೆ.

ವೈದ್ಯರು ಸಲಹೆ ನೀಡುವ ಮೆಡಿಕಲ್ ಫುಟ್ ವೇ‌ರ್’ಗಳೂ ಇಲ್ಲಿ ಲಭ್ಯವಿವೆ. ಈ ಆಕರ್ಷಕ ರಿಯಾಯಿತಿ ಮಾರಾಟ ಮೇಳ ಏ.23ರವರೆಗೆ ಚಾಲ್ತಿಯಲ್ಲಿರುತ್ತದೆ. ಗ್ರಾಹಕರು ರಿಯಾಯಿತಿ ಮಾರಾಟದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಂಸ್ಥೆ ತಿಳಿಸಿದೆ.