ಮೈಸೂರು,ಅಕ್ಟೋಬರ್,12,2026 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಅಂಬಾರಿ ಹೊರುವ ಆನೆ ಯಾವುದು ಆಗಬಹುದು ಎಂಬುದಕ್ಕೆ ಹಿರಿಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಹಿಂಟ್ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ದಸರಾ ಅಂಬಾರಿ ಹೊರುವ ಆನೆ ಫೈನಲ್ ಆಗಿಲ್ಲ ಧನಂಜಯ, ಪ್ರಶಾಂತ, ಸುಗ್ರೀವ ಆನೆಗಳಲ್ಲಿ ಒಂದು ಆನೆ ಈ ಬಾರಿ ದಸರೆಯ ಜಂಬೂಸವಾರಿಯ ಅಂಬಾರಿ ಹೊರುವ ಆನೆಯಾಗಲಿದೆ . ಪ್ರಶಾಂತ ಆನೆ ಆಗಬಹುದು ಅಂತ ಹಿಂಟ್ ಕೊಟ್ಟಿದ್ದಾರೆ. ಎಲ್ಲಾ ಆನೆಗಳ ಆರೋಗ್ಯ ಸ್ಥಿರವಾಗಿದೆ. ಈ ಬಾರಿ ದಸರೆಯ ಜಂಬೂಸವಾರಿಗೆ ಸಿದ್ಧ ಎಂದರು.
3ನೇ ಹಂತದ ಕುಶಾಲತೋಪು ತಾಲಿಮು ಯಶಸ್ವಿಯಾಗಿದೆ. ಎಲ್ಲಾ ಆನೆಗಳ ಅರೋಗ್ಯ ಉತ್ತಮವಾಗಿದೆ. ಶ್ರೀರಂಗಪಟ್ಟಣ ದಸರಾದಲ್ಲಿ ಧನಂಜಯ, ಲಕ್ಷ್ಮಿ, ರೂಪ ಆನೆಗಳು ಭಾಗಿಯಾಗುತ್ತವೆ. ಅಂಬಾರಿ ಹೊರುವ ಆನೆಯನ್ನ ಮೂರು ದಿನ ಇರುವಾಗಲೇ ಆಯ್ಕೆ ಮಾಡುತ್ತೇವೆ. ಪ್ರಶಾಂತ, ಸುಗ್ರೀವಾ, ಧನಂಜಯ ಆನೆಗಳಲ್ಲಿ ಒಂದು ಫೈನಲ್ ಆಗಬಹುದು. ಏಕಲವ್ಯ ಕೂಡ ಸಮರ್ಥನಿದ್ದಾನೆ. ಈ ನಾಲ್ಕು ಆನೆಯ ಪೈಕಿ ಏಕಲವ್ಯ ಕಿರಿಯ ಆನೆಯಾಗಿದ್ದಾನೆ. ಆನೆಗಳ ನಡಿಗೆ, ತಾಲೀಮಿನ ಸಮಯ, ಮಾವುತನ ಕಮಾಂಡ್ ಆನೆ ಹೇಗೆ ಸ್ವೀಕರಿಸುತ್ತದೆ ಅನ್ನೋದನ ಗಮನಿಸುತ್ತೇವೆ. ಯಶಸ್ವಿ ಜಂಬುಸವಾರಿಗೆ ನಮ್ಮ ಇಲಾಖೆ ಹಾಗೂ ಆನೆಗಳು ಸನ್ನದ್ದವಾಗಿದೆ ಎಂದು ರವಿಶಂಕರ್ ಮಾಹಿತಿ ನೀಡಿದರು.






