ಹಲಾಲ್, ಜಟ್ಕಾ ಕಟ್ ವಿವಾದದ ನಡುವೆ ಸರ್ಕಾರ ಮಹತ್ವದ ಆದೇಶ: ಪ್ರಾಣಿವಧೆಗೂ ಮುನ್ನ ಸ್ಟನ್ನಿಂಗ್ ಕಡ್ಡಾಯ.

ಬೆಂಗಳೂರು,ಏಪ್ರಿಲ್,1,2022(www.justkannada.in): ರಾಜ್ಯದಲ್ಲಿ ಹಲಾಲ್, ಜಟ್ಕಾ ಕಟ್ ವಿವಾದದ ನಡುವೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಪ್ರಾಣಿವಧೆಗೂ ಮುನ್ನ ಸ್ಟನ್ನಿಂಗ್ ಕಡ್ಡಾಯ ಎಂದು ತಿಳಿಸಿದೆ.

ಈ ಕುರಿತು ಆದೇಶ ಹೊರಡಿಸಿರುವ ಪಶುಸಂಗೋಪನೆ ಇಲಾಖೆ, ಪ್ರಾಣಿಗಳನ್ನು ಆಹಾರಕ್ಕಾಗಿ ವಧೆ ಮಾಡುವಾಗ ಅವುಗಳಿಗೆ ಹಿಂಸೆ ನೀಡಬಾರದು. ಹಿಂಸೆ ನೀಡದೆ ಪ್ರಾಣಿಗಳನ್ನು ವಧೆ ಮಾಡಬೇಕೆಂದು ಆದೇಶ ಹೊರಡಿಸಲಾಗಿದೆ. ಬೆಂಗಳೂರಿನಲ್ಲಿ ಇನ್ನು ಮುಂದೆ ಪ್ರಾಣಿ ವಧೆಗೆ ಸ್ಟನ್ನಿಂಗ್ ( ಪ್ರಾಣಿವಧೆಗೂ ಮುನ್ನ ಪ್ರಜ್ಞೆ ತಪ್ಪಿಸುವ ವಿಧಾನ) ಕಡ್ಡಾಯ ಎಂದು ಸರ್ಕಾರದ ಆದೇಶ ಹೇಳಿದೆ.covid-dead-body-cancels-license-order-state-government

ಹಿಂಸೆ ನೀಡದೆ ಪ್ರಾಣಿ ವಧೆ ಮಾಡಬೇಕು ಪ್ರಾಣಿಗಳಿಗೆ ಹಿಂಸೆ ನೀಡಿದರೇ ದಂಡ ವಿಧಿಸುವ ಎಚ್ಚರಿಕೆ ನೀಡಿದೆ.  50 ಸಾವಿರದಿಂದ 1 ಲಕ್ಷದವರೆಗೆ ದಂಡ ವಿಧಿಸುವುದಾಗಿ ಸರ್ಕಾರ ಹೇಳಿದೆ.

Key words: government – significant- order – Halal -Jatka -controversy.