ಹಲಾಲ್ ನಿಷೇಧಿಸುವ ಬಗ್ಗೆ ಚಿಂತನೆ  ನಡೆದಿದೆ- ಸಚಿವೆ ಶಶಿಕಲಾ ಜೊಲ್ಲೆ.

ಚಿಕ್ಕೋಡಿ, ಏಪ್ರಿಲ್,1,2022(www.justkannada.in):  ಹಲಾಲ್ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹಿಂದೂ ಸಂಘಟನೆಗಳ ಪರ ಬ್ಯಾಟ್ ಬೀಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವೆ ಶಶಿಕಲಾ ಜೊಲ್ಲೆ, ಹಲಾಲ್ ಕಟ್ ನಿಷೇಧಕ್ಕೆ ಕೆಲ ಸಂಘಟನೆಗಳಿಂದ ಒತ್ತಾಯ ಕೇಳಿ ಬಂದಿದೆ.   ಹಿಂದೂ ಸಂಘಟನೆಗಳು ಮಾಡುತ್ತಿರುವುದು ಸರಿ ಇದೆ. ಹಲಾಲ್ ನಿಷೇಧದ ಬಗ್ಗೆ ಚಿಂತನೆ ನಡೆದಿದೆ.  ಝಟ್ಕಾ ಕಟ್ ರಾಜ್ಯಾದ್ಯಂತ ಜಾರಿಯಾಗಬೇಕು ಎಂದು ತಿಳಿಸಿದರು.

Key words: thought –banning- halal-Minister -Shashikala Jolle