ಕೃಷಿ, ಬಡವರು, ಮಹಿಳೆಯರಿಗೆ ನೆರವಾಗುವಂತೆ ಬಜೆಟ್ ಮಂಡನೆ- ಸಪ್ತ ಮಾತೃಕೆ ದೇವಿರಮ್ಮನ ರಾಜಗೋಪುರ ಉದ್ಘಾಟಿಸಿ  ಸಿಎಂ ಬಿಎಸ್  ವೈ ಹೇಳಿಕೆ…

ಮೈಸೂರು,ಜ,27,2020(www.justkannada.in): ಕೃಷಿ, ಬಡವರು, ಮಹಿಳೆಯರಿಗೆ ನೆರವಾಗುವಂತೆ ಬಜೆಟ್ ಮಂಡನೆ ಮಾಡಲಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

ಮೈಸೂರು ಜಿಲ್ಲೆ ಕೆಆರ್,ನಗರ ತಾಲೂಕಿನ ದೇವಿತಂದ್ರೆ ಗ್ರಾಮದಲ್ಲಿರುವ ಸಪ್ತ ಮಾತೃಕೆ ದೇವಿರಮ್ಮನ ರಾಜಗೋಪುರವನ್ನ ಸಿಎಂ ಯಡಿಯೂರಪ್ಪ ಉದ್ಘಾಟಿಸಿದರು.  ಸಿಎಂ,ಯಡಿಯೂರಪ್ಪಗೆ ಡಿಸಿಎಂ, ಅಶ್ವಥ್ ನಾರಾಯಣ, ಸಚಿವ ವಿ,ಸೋಮಣ್ಣ, ಮಾಜಿ ಸಚಿವರಾದ ಸಿಎಚ್,ವಿಜಯ ಶಂಕರ್, ಸಾರಾ,ಮಹೇಶ್, ಶಾಸಕ ರೇಣುಕಾಚಾರ್ಯ ಸಾಥ್ ನೀಡಿದರು. ಬಾಳೆ ಹೊನ್ನೂರು ಪೀಠದ ರಂಭಾಪುರಿ ಶ್ರೀಗಳ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಮಠಾಧೀಶರುಗಳು ಭಾಗಿಯಾದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಕೊಡಗಿನಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಾಗುವುದು. ನಮ್ಮ ಜೊತೆ ಸಚಿವರಾದ ಸೋಮಣ್ಣ, ಅಶ್ವಥ್ ನಾರಾಯಣ್ ಬಂದಿದ್ದಾರೆ. ದಾವೋಸ್‌ಗೆ ಹೋಗಿ ಬಂದ ಮೇಲೆ  40 ಕ್ಕೂ ಹೆಚ್ಚು ಜನ ಕೈಗಾರಿಕೋದ್ಯಮಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಕರ್ನಾಟಕದಲ್ಲಿ ಇನ್ವೆಸ್ಟ್ ಮಾಡಲು ವಿನಂತಿಸಿದ್ದೇನೆ. ಎಸ್‌ಎಂ.ಕೃಷ್ಣ ಅವರ ನಂತರ 16 ವರ್ಷಗಳ ನಂತರ ನಾವು ಹೋಗಿದ್ದು ತುಂಬಾ ಉಪಯುಕ್ತವಾಯ್ತು, ಬಹಳ ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆ ಅಭಿವೃದ್ಧಿ ಮಾಡಲು ಭರವಸೆ ನೀಡಿದ್ದಾರೆ.. ಕೃಷಿಕರಿಗೆ ಸಂಬಂಧಿಸಿದಂತೆ, ನಿರುದ್ಯೋಗ ಸಮಸ್ಯೆ ಬಗೆಹರಿಸಲು ಸಂಬಂಧಿಸಿದಂತೆ ಅನುಕೂಲ ಆಗಲಿದೆ ಎಂದು ತಿಳಿಸಿದರು.

ದಾವೋಸ್ ಗೆ ಭೇಟಿ ನೀಡಿ ಬಂದಿದ್ದೇನೆ. ಈ ವಿದೇಶ ಭೇಟಿ ಹೆಚ್ಚಿನ ಲಾಭವಾಗಲಿದೆ. ಈಗಾಗಲೇ ಉದ್ಯಮಿಗಳನ್ನ ಭೇಟಿ ಮಾಡಿ ಮಾತನಾಡಿದ್ದೇವೆ. ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದೆ ಬಂದಿದ್ದಾರೆ. ಇದ್ರಿಂದ ಉದ್ಯೋಗಾವಕಾಶ ಸಿಗಲಿದೆ. ಕೈಗಾರಿಕೋಧ್ಯಮ ಅಭಿವೃದ್ಧಿಯಿಂದ ರಾಜ್ಯದ ಅಭಿವೃದ್ಧಿಯಾಗಲಿದೆ. ಮುಂದಿನ ತಿಂಗಳ ೫ನೇ ತಾರೀಖು ಬಜೆಟ್ ಮಂಡನೆ ಮಾಡಲಿದ್ದೇನೆ. ಈ ಬಜೆಟ್ ನಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತೆ. ಬಡವರ, ಮಹಿಳೆಯರಿಗೆ ನೆರವಾಗುವಂತೆ ಬಜೆಟ್ ಇರುತ್ತೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದರು.

Key words: mysore- k.r nagar-cm bs yeddyurappa- Deviramma – Rajagopura- inauguration- cm bs yeddyurappa