ಯುವಕರನ್ನೂ ನಾಚಿಸುವಂತೆ ಸಿಎಂ ಬಿಎಸ್ ವೈ ಕೆಲಸ ಮಾಡುತ್ತಿದ್ದಾರೆ – ಸಚಿವ ಸೋಮಣ್ಣ ಗುಣಗಾನ…..

ಮೈಸೂರು,ಜ,27,2020(www.justkannada.in): ಬಿ.ಎಸ್ ಯಡಿಯೂರಪ್ಪ ಸಿಎಂ ಆದರೆ ರಾಜ್ಯದಲ್ಲಿ ವರುಣನ ಕೃಪೆ ಇರುತ್ತದೆ. ಕೆ.ಆರ್. ಎಸ್‌ನಲ್ಲಿ ಅತಿ ಹೆಚ್ಚು ದಿನ 123 ಅಡಿ ನೀರು ಇದ್ದಿದ್ದರೆ ಅದು ಯಡಿಯೂರಪ್ಪ ಕಾಲದಲ್ಲಿ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಕೆ.ಆರ್ ನಗರದ ದೇವಿತಂದ್ರೆ ಗ್ರಾಮದ ಸಪ್ತಮಾತೃಕೆ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ವಿ.ಸೋಮಣ್ಣ, ಯಡಿಯೂರಪ್ಪ ಇನ್ನೂ ಮೂರುವರೆ ವರ್ಷ ರಾಜ್ಯದ ಸಿಎಂ ಆಗಿ ಇರಬೇಕು. ಇದಕ್ಕಾಗಿ ನಾವು ದೇವರಿಗೆ ಪ್ರಾರ್ಥನೆ ಮಾಡೋಣ ಎಂದರು.

ಯಡಿಯೂರಪ್ಪ ಸಿಎಂ ಆದರೆ ವರುಣನ ಕೃಪೆ ಇರುತ್ತದೆ. ಕೆ.ಆರ್. ಎಸ್‌ನಲ್ಲಿ ಅತಿ ಹೆಚ್ಚು ದಿನ 123 ಅಡಿ ನೀರು ಇದ್ದಿದ್ದರೆ ಅದು ಯಡಿಯೂರಪ್ಪ ಕಾಲದಲ್ಲಿ. ಯಡಿಯೂರಪ್ಪ ಬೆಳಿಗ್ಗೆ 6 ರಾತ್ರಿ11ರವರೆಗೆ ಕೆಲಸ ಮಾಡುತ್ತಿದ್ದಾರೆ. ಯುವಕರನ್ನೂ ನಾಚಿಸುವಂತೆ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಸೋಮಣ್ಣ ಗುಣಗಾನ ಮಾಡಿದರು.

Key words: CM BS yeddyurappa-working – young people- mysore-Minister -Somanna