Monday, August 3, 2026

BDA Apartments

Home Front Page ಆರ್ ಎಸ್ ಎಸ್ ಭಯೋತ್ಪಾದಕ ಸಂಸ್ಥೆ: ಅದನ್ನ ಬ್ಯಾನ್ ಮಾಡಬೇಕು – ಅಂಬೇಡ್ಕರ್ ಮರಿ ಮೊಮ್ಮಗ...

ಆರ್ ಎಸ್ ಎಸ್ ಭಯೋತ್ಪಾದಕ ಸಂಸ್ಥೆ: ಅದನ್ನ ಬ್ಯಾನ್ ಮಾಡಬೇಕು – ಅಂಬೇಡ್ಕರ್ ಮರಿ ಮೊಮ್ಮಗ ರಾಜರತ್ನ ಅಂಬೇಡ್ಕರ್ ಆಗ್ರಹ…….

ಬೀದರ್,ಜ,27,2020(www.justkannada.in): ನಮ್ಮ ದೇಶದಲ್ಲಿ ಆರ್ ಎಸ್ ಎಸ್ ಎಂಬುದು ಭಯೋತ್ಪಾದಕ ಸಂಸ್ಥೆ. ಅದನ್ನ ಬ್ಯಾನ್ ಮಾಡಬೇಕು ಎಂದು ಅಂಬೇಡ್ಕರ್ ಮರಿ ಮೊಮ್ಮಗ ರಾಜರತ್ನ ಅಂಬೇಡ್ಕರ್ ಆಗ್ರಹಿಸಿದರು.

ಬೀದರ್ ನಲ್ಲಿ ಸರ್ವಜನರ ಸಂವಿಧಾನ ರಕ್ಷಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ರಾಜರತ್ನ ಅಂಬೇಡ್ಕರ್, ಅಂಬೇಡ್ಕರ್ ರ ಸಂವಿಧಾನ ತೆಗೆಯಲು ಬಿಜೆಪಿ ಆರ್.ಎಸ್. ಎಸ್ ಪ್ರಯತ್ನಿಸುತ್ತಿವೆ.  ಈಗಾಗಲೇ ಆರ್ ಎಸ್ ಎಸ್, ಬಿಜೆಪಿಯ ಸಂವಿಧಾನ ತಯಾರಾಗಿದೆ. ನಾವು ಮೋದಿ ಅಮಿತ್ ಶಾ ರನ್ನ ತೆಗೆಯೋದ್ರಿಂದ ನಮ್ಮ ಸಮಸ್ಯೆ ಪರಿಹಾರವಾಗಲ್ಲ. ಇತ್ತೀಚೆಗೆ ಮಾಧ್ಯಮಗಳು ಅಮಿತ್ ಶಾ ಅವರನ್ನ ಹೈಲೆಟ್ ಮಾಡಿವೆ. ಆದ್ದರಿಂದ ಅಮಿತ್ ಶಾ ಮೋದಿ ಗಿಂತ ಮೇಲಿದ್ದಾರೆ. ನಾವು ಇವರ ವಿರುದ್ಧ ಹೋರಾಟ ಮಾಡಿದ್ರೆ ಪ್ರಯೋಜನವಿಲ್ಲ. ಇಂತಹವರನ್ನ ರೆಡಿ ಮಾಡುತ್ತಿರುವ ಆರ್ ಎಸ್ ಕಂಪನಿ ಮೊದಲು ಬಂದ್ ಮಾಡಬೇಕು. ಇತ್ತೀಚಿಗೆ ನಾನು ಪಾಕಿಸ್ತಾನಕ್ಕೆ ಹೋಗಿದ್ದೆ‌. ಅಲ್ಲಿ ನಾನು ಹೇಳಿದ್ದು. ನಮ್ಮ ದೇಶದಲ್ಲಿ ಆರ್ ಎಸ್ ಎಸ್ ಎಂಬ ಭಯೋತ್ಪಾದಕ ಸಂಸ್ಥೆ. ಅದನ್ನ ಬ್ಯಾನ್ ಮಾಡಬೇಕು. ಇದರ ಬಗ್ಗೆ ನನ್ನ ಹತ್ತಿರ ಪುರಾವೆಗಳಿವೆ ಎಂದು ತಿಳಿಸಿದರು.

ಪ್ರಧಾನಿ ಪಕ್ಕದಲ್ಲಿ ಕೂರುವ ಸಾಧ್ವಿ ಒಬ್ಬರು ಇಂಟರ್ ವ್ಯೂವ್ ನಲ್ಲಿ ಹೇಳ್ತಾರೆ. ಯುದ್ದದಲ್ಲಿ ಮದ್ದುಗುಂಡುಗಳು ಕಾಲಿಯಾದಾಗ ಅವರಿಗೆ ಆರ್ ಎಸ್ ಎಸ್ ನಿಂದ ಮದ್ದು ಗುಂಡು ನೀಡುವ ಶಕ್ತಿ ಇದೆ. ಆರ್ ಎಸ್ ಎಸ್ ಇಷ್ಟೊಂದು ಮದ್ದು ಗುಂಡುಗಳು ಎಲ್ಲಿಂದ ಬಂದ್ವು..? ಎಂದು ರಾಜರತ್ನ ಅಂಬೇಡ್ಕರ್  ಪ್ರಶ್ನಿಸಿದರು. ಹಾಗೆಯೇ ಆರ್ ಎಎಸ್ ಸಂಘಟನೆಯನ್ನ ವಿಶ್ವದಲ್ಲೆ ಬ್ಯಾನ್ ಆಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಇವಿ ಎಮ್ ದೋಷದ ಬಗ್ಗೆ ವಿರುದ್ದ ರಾಷ್ಟ್ರಪತಿ ಬಳಿ  ನಾನು ಏನು ಮನವಿ ಮಾಡಿಲ್ಲ. ಆರ್ ಎಸ್ ಎಸ್ ವೇದಿಕೆಯಲ್ಲೆ ಅವರು ಅವರ ಕಾಲು ಬೀಳ್ತಾರೆ. ಆಗ ಅವರಿಂದ ಏನು ಆಗಲ್ಲ ಅಂತ ಗೊತ್ತಾಯ್ತು ಎಂದರು.

Key words: RSS -Terrorist-  Ban- Ambedkar- grandson – Rajaratna – Ambedkar