Tuesday, September 22, 2026

BDA Apartments

ಕೆಎಸ್ ಒಯುನಲ್ಲಿ ಏ.7 ರಂದು ಉದ್ಯೋಗ ಮೇಳ BDA JK_Adv BDA Adv
Home Front Page ಕೆಎಸ್ ಒಯುನಲ್ಲಿ ಏ.7 ರಂದು ಉದ್ಯೋಗ ಮೇಳ.

ಕೆಎಸ್ ಒಯುನಲ್ಲಿ ಏ.7 ರಂದು ಉದ್ಯೋಗ ಮೇಳ.

ಮೈಸೂರು,ಏಪ್ರಿಲ್,2,2022(www.justkannada.in):  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಏಪ್ರಿಲ್ 7ರಂದು ಬೃಹತ್ ಉದ್ಯೋಗ ಮೇಳವನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿದೆ ಎಂದು ಮುಕ್ತ ವಿವಿ ಕುಲಪತಿ ಎಸ್.ವಿದ್ಯಾಶಂಕರ್ ತಿಳಿಸಿದರು.

ವಿವಿ ಆಡಳಿತ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಉದ್ಯೋಗ ಮೇಳದಲ್ಲಿ 80ಕ್ಕೂ ಹೆಚ್ಚು ಕಂಪೆನಿಗಳು ಪಾಲ್ಗೊಳ್ಳುತ್ತಿದ್ದು, ತಾಂತ್ರಿಕ ಮತ್ತು  ತಾಂತ್ರಿಕೇತರ ವಿದ್ಯಾರ್ಥಿಗಳು ನಿರುದ್ಯೋಗಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು  ಹೇಳಿದರು.

ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ಅಶ್ವಿನ್‌ಗೌಡ ಮಾತನಾಡಿ, ಉದ್ಯೋಗ ಮೇಳವು ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಇದರಲ್ಲಿ ಆಯ್ಕೆಯಾಗದವರಿಗೆ ತಮ್ಮ ಇಚ್ಛೆಯ ಅನುಸಾರವಾಗಿ ತರಬೇತಿ ನೀಡಿ ಉದ್ಯೋಗವನ್ನು ದೊರಕಿಸಿಕೊಡಲಾಗುವುದು. – ಹಾಗೆಯೇ ಸುತ್ತಮುತ್ತಲಿನ ಜಿಲ್ಲೆಗಳ ನಿರುದ್ಯೋಗಿಗಳಿಗೆ ಅವಕಾಶ ಮಾಡಿಕೊಡಲಾಗುವುದು. 6000 ಜನರಿಗೆ ಉದ್ಯೋಗ ನೀಡುವ ಭರವಸೆ ಇದೆ ಎಂದರು.

ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಜಗನಾಥ್, ವಿವಿ ಪ್ಲೇಟ್‌ಮೆಂಟ್ ಆಫೀಸರ್ ಹೆಚ್‌.ಆರ್‌. ಪವಿತ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Key words: Job Fair – April 7 -KSOU