ಕರೋನಾ ವೈರಸ್ ಆತಂಕ ವಿಚಾರ: ಚೀನಾ ಪ್ರವಾಸಿಗರ ಮೇಲೆ ತೀವ್ರ ನಿಗಾ- ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್…

ಮೈಸೂರು,ಜ,31,2020(www.justkannada.in): ಎಲ್ಲೆಡೆ ಕರೋನಾ ವೈರಸ್ ಆತಂಕ ಹರಡಿರುವ ಹಿನ್ನೆಲೆ ಮೈಸೂರಿಗೆ ಬರುವ ಚೀನಾ ಪ್ರವಾಸಿಗರ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ತಿಳಿಸಿದರು.

ಕರೋನಾ ವೈರಸ್ ಆತಂಕದ ವಿಚಾರ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಕರೋನಾ ವೈರಸ್ ಪತ್ತೆಗೆ ಕೆ.ಆರ್.ಆಸ್ಪತ್ರೆಯಲ್ಲಿ ವಿಶೇಷ ಲ್ಯಾಬ್ ಸ್ಥಾಪನೆ ಮಾಡಲಾಗಿದೆ. ಹೋಟೆಲ್‌ ಉದ್ಯಮಾ, ಟ್ರಾವೆಲ್ ಏಜೆನ್ಸಿ ಮೂಲಕ ಕರೋನಾ ವೈರಸ್ ಬಾಧಿತರ ಪತ್ತೆಗೆ ವ್ಯವಸ್ಥೆ ಮಾಡಲಾಗಿದ್ದು  ಕಳೆದ ಒಂದೂವರೆ ತಿಂಗಳಿಂದ ಚೀನಾ ಹಾಗೂ ಮೈಸೂರು ನಡುವೆ ಪ್ರವಾಸಿಗರ ಮೇಲೆ ಹೆಚ್ವಿನ ನಿಗಾ ಇಡಲಾಗಿದೆ. ಸದ್ಯ ಮೈಸೂರಿನಲ್ಲಿ ಯಾವುದೇ ಆತಂಕ ಇಲ್ಲ ಎಂದು  ಹೇಳಿದರು.

ಕೇರಳ ರಾಜ್ಯದಿಂದ ಕರೋನಾ ವೈರಸ್ ಬಾಧಿತರು ಬಂದಿಲ್ಲ. ಇದರ ಬಗ್ಗೆ ಆತಂಕ ಬೇಡ, ಆದರು ಮುಂಜಾಗ್ರತ ಇರಲಿ. ಸಾಮಾನ್ಯ ವೈರಲ್ ಜ್ವರಕ್ಕು ಮೊದಲು ಚಿಕಿತ್ಸೆ ಪಡೆಯಿರಿ. ಇದಕ್ಕಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ವಿಶೇಷ ಲ್ಯಾಬ್ ತೆರೆಯಲಾಗಿದೆ ಎಂದು ಮೈಸೂರು ಡಿಸಿ ಅಭೀರಾಂ ಜೀ ಶಂಕರ್ ಮಾಹಿತಿ ನೀಡಿದರು.

Key words: Corona -virus –  Intensive- watch – Chinese tourists-mysore dc- Abhiram Ji Shankar