ನಾಳೆಯಿಂದ ಮೂರು ದಿನಗಳ ಕಾಲ ಏರ್ ಶೋ: ಏರ್ ಪೋರ್ಟ್ ಗೆ ತೆರಳುವ ಮಾರ್ಗ ಬದಲಾವಣೆ…

ಬೆಂಗಳೂರು,ಫೆಬ್ರವರಿ,2,2021(www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ  ನಾಳೆಯಿಂದ ಮೂರು ದಿನಗಳ ಕಾಲ ‘ಏರ್ ಶೋ’ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಏರ್ ಪೋರ್ಟ್ ಗೆ ತೆರಳುವ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.jk

ನಗರದ ಯಲಹಂಕ ವಾಯುನೆಲೆಯಲ್ಲಿ ನಾಳೆಯಿಂದ  ಫೆಬ್ರವರಿ 5 ರವರೆಗೆ ಏರ್ ಶೋ ನಡೆಯಲಿದೆ. ಹೀಗಾಗಿ ಮೂರು ದಿನಗಳ ಕಾಲ ಬೆಳಿಗ್ಗೆ 5ರಿಂದ ರಾತ್ರಿ 10ರವರೆಗೆ ಏರ್ ಪೋರ್ಟ್ ಗೆ ತೆರಳುವ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.

ಬೆಂಗಳೂರು ಪಶ್ಚಿಮ, ಉತ್ತರದಿಂದ ಬರುವ ವಾಹನಗಳು ಗೊರಗುಂಟೆಪಾಳ್ಯ, ಬಿಇಎಲ್ ಸರ್ಕಲ್,ಎಂಎಸ್ ಪಾಳ್ಯ, ಯಲಹಂಕ ಮದರ್ ಡೈರಿ,ರಾಜಾನುಕುಂಟೆ, ಎಂವಿಐಟಿ ಜಂಕ್ಷನ್, ಚಿಕ್ಕಜಾಲ ಮೂಲಕ ಏರ್ ಪೋರ್ಟ್ ಟೋಲ್ ಗೇಟ್ ತಲುಪಬೇಕು.

ಹಾಗೆಯೇ ಬೆಂಗಳೂರು ದಕ್ಷಿಣ, ಕೇಂದ್ರದಿಂದ ಬರುವ ವಾಹನಗಳು ಬಸವೇಶ್ವರ ಸರ್ಕಲ್, ಸದಾಶಿವನಗರ ಪೊಲೀಸ್ ಠಾಣೆ, ಹೆಬ್ಬಾಳ ಸರ್ಕಲ್, ನಾಗವಾರ ಜಂಕ್ಷನ್,ಥಣಿಸಂದ್ರ ಮುಖ್ಯರಸ್ತೆ, ರೇವಾ ಕಾಲೇಜು ಜಂಕ್ಷನ್, ಬಾಗಲೂರು,ಮೈಲನಹಳ್ಳಿ ಮೂಲಕ ಏರ್  ಪೋರ್ಟ್ ಟೋಲ್ ಗೇಟ್ ತಲುಪುವಂತೆ ಸೂಚನೆ ನೀಡಲಾಗಿದೆ.

Air show - three days – tomorrow-route –change-airport.
ಕೃಪೆ-internet

ಜತೆಗೆ ಬೆಂಗಳೂರು ಪೂರ್ವದಿಂದ ಏರ್ ಪೋರ್ಟ್ ತಲುಪಲು ಟಿನ್ ಫ್ಯಾಕ್ಟರಿ, ರಾಮಮೂರ್ತಿ ನಗರ, ಹೆಣ್ಣೂರತು ಕ್ರಾಸ್, ಭರತಿ ಕ್ರಾಸ್,ಹೊಸೂರು ಬಂಡೆ, ಜಾಗಲಹಟ್ಟಿ, ಗುಂಡಪ್ಪ ಸರ್ಕಲ್, ಬಾಗಲೂರು, ಬಿ.ಕೆ ಹಳ್ಳಿ ಮೂಲಕ  ಬೇಗೂರು ಬ್ಯಾಕ್ ಗೇಟ್ ನಿಂದ ಏರ್ ಪೋರ್ಟ್ ತಲುಪಬೇಕು. ಇನ್ನು ಹೆಬ್ಬಾಳದಿಂದ ಏರ್ ಪೋರ್ಟ್ ಸಮಚಾರಕ್ಕೆ ಬ್ರೇಕ್ ಹಾಕಲಾಗಿದ್ದು ಹೈದರಾಬಾದ್ ನತ್ತ ತೆರಳುವ ವಾಹನಗಳಿಗೂ ಇದು ಅನ್ವಯವಾಗಲಿದೆ.

ENGLISH SUMMARY…

Three days air show in Bengaluru starting from tomorrow: Traffic on airport route diverted
Bengaluru, Feb. 2, 2021 (www.justkannada.in): Traffic on airport road in Bengaluru has been diverted following a three-day airshow.
The air show will be held at the airforce base located in Yelahanka, Bengaluru from tomorrow till February 5. Hence, changes have been made in traffic towards the airport from 5.00 am to 10.00 pm.
Accordingly, vehicles going towards the airport toll gate, coming from West and North directions shall pass through the BEL Circle, MS Palya, Yelahanka Mother Dairy, Rajanukunte, MVIT junction, Chikkajala.
Vehicles coming from Bengaluru South and Central shall pass through Basaveshwara Circle, Sadashivanagara Police Station, Hebbal Circle, Nagawara Junction, Thanisandra Main Road, REVA College junction, Bagaluru, and Mylanahalli.

Air show - three days – tomorrow-route –change-airport.
ಕೃಪೆ-internet

Vehicles shall take the route through the Tin factory, Ramamurthynagara, Hennur Cross, Bharati Cross, Hosuru Bande, Jagalhatti, Gundappa Circle, Bagaluru, B.K. Halli and reach the airport through the Beguru back gate. The traffic towards the airport via Hebbal has been prohibited, which will apply to vehicles that are going towards Hyderabad, according to a press release issued by the Bengaluru Traffic Police.
Keywords: Bengaluru Traffic change/ traffic diversion/ air show/ Yelahanka airbase

Key words: Air show – three days – tomorrow-route –change-airport.