ಬಾಗಲಕೋಟೆ,ಅಕ್ಟೋಬರ್,25,2026 (www.justkannada.in): ಡಿಕೆಶಿ ಸಿಎಂ ಆಗಿದ್ದು ಹೆಚ್ ಡಿಕೆಗೆ ಸಹಿಸಲು ಆಗುತ್ತಿಲ್ಲ, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹತಾಶರಾಗಿದ್ದಾರೆ ಎಂದು ಸಚಿವ ವಿಜಯಾನಂದ ಕಾಶಪ್ಪನವರ್ ಕುಟುಕಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ವಿಜಯಾನಂದ ಕಾಶಪ್ಪನವರ್, ಸುಮ್ಮನೆ ಯಾವುದೇ ಪ್ರೂಫ್ ಇಲ್ಲದೇ ಮಾತನಾಡಬಾರದು ಹೆಚ್ ಡಿಕೆ ಹಿರಿಯ ನಾಯಕರು ಎರಡು ಬಾರಿ ಸಿಎಂ ಆದವರು. ಈಗ ಕೇಂದ್ರ ಸಚಿವರಾಗಿದ್ದಾರೆ. ಈ ರೀತಿ ಮಾತನಾಡಬಾರದು. ದಿನಬೆಳಗಾದರೇ ಸ್ಟಿಂಗ್ ಆಪರೇಷನ್ ಬಗ್ಗೆ ಮಾತಾಡೋದು. ಕುಮಾರಸ್ವಾಮಿ ಮಾತು ಕೇಳಿ ರಾಜ್ಯದ ಜನ ರೋಸಿ ಹೋಗಿದ್ದಾರೆ. ಹೆಚ್ ಡಿಕೆ ಹಿಂದೆ ಬಿಜೆಪಿಯವರು ಯಾರಾದರೂ ನಿಂತಿದ್ದಾರಾ? ಎಂದು ಅನುಮಾನ ವ್ಯಕ್ತಪಡಿಸಿದರು.
ಬಿಡದಿ ಟೌನ್ ಶಿಪ್ ಗೆ ಅವರೇ ಅಧಿಸೂಚನೆ ಮಾಡಿದರು. ಈಗ ಅವರ ಭೂಮಿ ಹೋಗುತ್ತವೆ ಎಂಬ ಹೊಟ್ಟೆ ಕಿಚ್ಚಿಗೆ ಅಪ್ಪ ಮಗ ಹೆಂಡತಿ ಎಲ್ಲರೂ ರಸ್ತೆಗೆ ನಿಂತಿದ್ದಾರೆ ಎಂದು ಸಚಿವ ವಿಜಯಾನಂದ ಕಾಶಪ್ಪನವರ್ ಕಿಡಿಕಾರಿದರು.






