ಬೆಂಗಳೂರು, ಅಕ್ಟೋಬರ್, 25,2026 (www.justkannada.in): ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಕುಟುಂಬವನ್ನು ಮುಗಿಸಲು 600 ಕೋಟಿ ರೂ ಡೀಲ್ ಆಗಿದೆ. ಡೀಲ್ ಆಗಿರುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಹೆಚ್.ಡಿ.ದೇವೇಗೌಡರ ಕುಟುಂಬ ಮುಗಿಸಿ ಅಂತಾ ಹೇಳಿರುವುದರಲ್ಲಿ ಏನು ಸಂಶಯವಿಲ್ಲ, ಇದೆಲ್ಲಾ ದೊಡ್ಡಮಟ್ಟದಲ್ಲಿ ತನಿಖೆ ಆಗಬೇಕು’ ಎಂದು ಹೇಳಿದರು
ಸ್ಟಿಂಗ್ ಆಪರೇಷನ್ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಹೆಚ್ ಡಿ ಕುಮಾರಸ್ವಾಮಿ, ‘ನಮ್ಮ ಕಾರ್ಯಕರ್ತರನ್ನ ಗುರಿಯಾಗಿಸಿಕೊಂಡು ತನಿಖೆ ಮಾಡುತ್ತಿದ್ದಾರೆ. ಐದು ದಿನ ಸಮಯ ಕೊಡುತ್ತೇನೆ. ನಾನೇ ಹೇಳ್ತೇನೆ, ಯಾರೂ ಅಂಜಬೇಕಿಲ್ಲ, ಹೆದರಬೇಕಿಲ್ಲ. ಎಲ್ಲರೂ ಹೋಗಿ ವಿಚಾರಣೆಗೆ ಹಾಜರಾಗಿ ಎಂದು ಹೇಳಿದ್ದೇನೆ. ಸಾಮಾಜಿಕ ಜಾಲತಾಣದ ಚಂದನ್ ವಿಚಾರಣೆಗೆ ಹೋಗುತ್ತಾನೆ’ ಎಂದರು.







