Sunday, October 25, 2026

Dasara Wishes

State DasraWishes_JK DasraWishes JK
Happy Dasara
Home Front Page ಚಾಮರಾಜನಗರಕ್ಕೆ ಬಂದ್ರೆ ಅಧಿಕಾರ ಕಳೆದುಕೊಳ್ಳುತ್ತಾರೆಂಬ ಅಪನಂಬಿಕೆ ಬೇಡ: ಸಿಎಂ ಡಿ.ಕೆ ಶಿವಕುಮಾರ್

ಚಾಮರಾಜನಗರಕ್ಕೆ ಬಂದ್ರೆ ಅಧಿಕಾರ ಕಳೆದುಕೊಳ್ಳುತ್ತಾರೆಂಬ ಅಪನಂಬಿಕೆ ಬೇಡ: ಸಿಎಂ ಡಿ.ಕೆ ಶಿವಕುಮಾರ್

ಚಾಮರಾಜನಗರಕ್ಕೆ ಬಂದ್ರೆ ಅಧಿಕಾರ ಕಳೆದುಕೊಳ್ಳುತ್ತಾರೆಂಬ ಅಪನಂಬಿಕೆ ಬೇಡ: ಸಿಎಂ ಡಿ.ಕೆ ಶಿವಕುಮಾರ್

ಚಾಮರಾಜನಗರ, ಅಕ್ಟೋಬರ್,25,2026 (www.justkannada.in): ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಅಪನಂಬಿಕೆ ಬೇಡ. ನಾವು ಪರಿಶುದ್ಧವಾಗಿ ಪ್ರಾರ್ಥನೆ, ನಂಬಿಕೆಯಿಂದ ನಡೆಯುವುದು ಮುಖ್ಯ. ನಾವು ಯಾವುದೇ ತಪ್ಪು ಮಾಡದೇ ದೇವರ ಬಳಿ ಒಳ್ಳೆಯದನ್ನೇ ಪ್ರಾರ್ಥಿಸುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದರು.

ಚಾಮರಾಜನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ಸಿದ್ದರಾಮಯ್ಯ ಅವರು ಎಂಟು ವರ್ಷಗಳ ಕಾಲ ಅಧಿಕಾರದಲ್ಲಿ ಇದ್ದಾಗ ಚಾಮರಾಜನಗರಕ್ಕೆ ಭೇಟಿ ನೀಡುತ್ತಿದ್ದರು. ಅವರು ಉತ್ತಮ ಆಡಳಿತವನ್ನೂ ನಡೆಸಿದ್ದಾರೆ. ಹೀಗಿರುವಾಗ ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮಾತಿಗೆ ಅರ್ಥವಿಲ್ಲ” ಎಂದು ತಿಳಿಸಿದರು.ಚಾಮರಾಜನಗರಕ್ಕೆ ಬಂದ್ರೆ ಅಧಿಕಾರ ಕಳೆದುಕೊಳ್ಳುತ್ತಾರೆಂಬ ಅಪನಂಬಿಕೆ ಬೇಡ: ಸಿಎಂ ಡಿ.ಕೆ ಶಿವಕುಮಾರ್

“ನಾವು ಇಲ್ಲಿ ಅಭಿವೃದ್ಧಿ ಮತ್ತು ಪ್ರಗತಿಗಾಗಿ ಪ್ರಾರ್ಥಿಸಲು ಬಂದಿದ್ದೇವೆ. ಬುದ್ಧನ ಆಚಾರ-ವಿಚಾರಗಳನ್ನು ಸ್ಮರಿಸಿ, ಅವರ ಸಂದೇಶವನ್ನು ಅರಿತುಕೊಳ್ಳುವುದು ನಮ್ಮ ಉದ್ದೇಶ. ಬುದ್ಧರು ಜಗತ್ತಿಗೆ ಮಾನವೀಯತೆ, ತ್ಯಾಗ, ಶಾಂತಿ ಮತ್ತು ಅಭಿವೃದ್ಧಿಯ ಮಹತ್ವದ ಸಂದೇಶ ನೀಡಿದ್ದಾರೆ. ಈ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲವನ್ನೂ ಅನುಮಾನದಿಂದ ನೋಡುವ ಮನೋಭಾವ ಬೇಡ” ಎಂದು ಹೇಳಿದರು.no need jk02_new jk02 new

 

English Summary
Title

D.K. Shivakumar Defies Superstition With Chamarajanagar District Visit

Short Description
Karnataka CM D.K. Shivakumar shattered a decades-old political superstition by visiting Chamarajanagar district, boldly declaring the historic myth a groundless taboo. For years, successive Chief Ministers avoided the region out of a deep-seated fear that setting foot there would cause them to lose their political power mid-term. By touring the area to review local governance and launch crucial welfare initiatives, Shivakumar followed in the footsteps of Siddaramaiah to debunk the unscientific jinx. This landmark visit marks a progressive shift toward development, ending the district's long-standing neglect driven by political fear.
Keywords
no need, superstition, visiting Chamarajanagar, leads, loss of power, CM, D.K. Shivakumar