Sunday, October 25, 2026

Dasara Wishes

Happy Dasara
Home Front Page KPSC ಹಗರಣ: ಸತ್ಯ ಹೊರಬರಲೆಂದು ಐಎಎಸ್ ಅಧಿಕಾರಿ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ- ಸಿಎಂ ಡಿಕೆಶಿ

KPSC ಹಗರಣ: ಸತ್ಯ ಹೊರಬರಲೆಂದು ಐಎಎಸ್ ಅಧಿಕಾರಿ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ- ಸಿಎಂ ಡಿಕೆಶಿ

ಮೈಸೂರು ದಸರಾದಲ್ಲಿ ಹೊಸ ಕಾರ್ಯಕ್ರಮ: ಮೂರು ಸೇನೆ ಯೋಧರಿಂದ ಪಥಸಂಚಲನ- ಸಿಎಂ ಡಿಕೆ ಶಿವಕುಮಾರ್‌

ಬೆಂಗಳೂರು,ಅಕ್ಟೋಬರ್,25,2026 (www.justkannada.in): ಕೆಪಿಎಸ್‌ಸಿ  ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದ್ದು ಈ ಕುರಿತು ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಿಎಂ ಡಿಕೆ ಶಿವಕುಮಾರ್, ಆನೇಕ ಸತ್ಯ ವಿಚಾರಗಳೆಲ್ಲಾ ಹೊರ ಬಂದಿದೆ. ಸಿಐಡಿ ಮತ್ತು ಪೊಲೀಸರು ತನಿಖೆ ಮಾಡಿದ್ದಾರೆ.  ಸತ್ಯ ಹೊರ ಬರಬೇಕೆಂಬುದು ಮುಖ್ಯ ವಿಚಾರ .ಹೀಗಾಗಿ  ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದೇನೆ ಎಂದರು.ಮೈಸೂರು ದಸರಾದಲ್ಲಿ ಹೊಸ ಕಾರ್ಯಕ್ರಮ: ಮೂರು ಸೇನೆ ಯೋಧರಿಂದ ಪಥಸಂಚಲನ- ಸಿಎಂ ಡಿಕೆ ಶಿವಕುಮಾರ್‌

ಇಡೀ ಕೆಪಿಎಸ್ ಸಿಗೆ ಹೊಸ ರೂಪ ಕೊಡಬೇಕು.  ಮಕ್ಕಳು ಬಹಳ ಕಷ್ಟಪಟ್ಟು ಓದಿರುತ್ತಾರೆ ಶ್ರಮ ಪಟ್ಟಿರುತ್ತಾರೆ. ಪ್ರಭಾವ ಹಣದ ವ್ಯವಹಾರ ಮಾಡಿಕೊಂಡು ಮಾಡಿದರೆ ಸರಿ ಇರಲ್ಲ. ಹಿಂದೆ  ಕೆಪಿಎಸ್ ಸಿ ಅಧ್ಯಕ್ಷರು ಸದಸ್ಯರ ಬೇಕಾದಷ್ಟು ಅವಾಂತರ ನೋಡಿದ್ದೇವೆ.  ಒಂದು ಸಮಿತಿ ಕೂಡ ರಚನೆ ಮಾಡಿದ್ದೇನೆ ಯು. ಟಿ ಖಾದರ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. ನ್ಯಾಷನಲ್ ಲೆವೆಲ್ ನಲ್ಲೂ ಕೂಡ ಅನೇಕ ಚಿಂತನೆ ಮಾಡಿದ್ದಾರೆ ಎಂದರು.KPSC Scam jk02_new jk02 new

 

English Summary
Title

KPSC Scam: Karnataka CM Approves Prosecution of Suspended IAS Officer

Short Description
Karnataka Chief Minister D.K. Shivakumar has officially cleared the prosecution of suspended IAS officer Gyanendra Kumar Gangwar in connection with the KPSC recruitment scam. The crucial decision was finalized on 24 October 2026 under the BNSS, 2023 guidelines. Gangwar, a 2016-batch officer and former KPSC Controller of Examinations, faces severe corruption charges for allegedly leaking Veterinary Officers' exam question papers. Investigating agencies like the CID and ED have tracked a ₹1 crore money trail linked to the scandal. Reaffirming the state government's zero-tolerance stance against corruption, CM Shivakumar emphasized safeguarding the career prospects of honest youth.
Keywords
KPSC Scam, Permission, prosecution, against, IAS officer, truth, CM, DK Shivakumar