Sunday, October 25, 2026

Dasara Wishes

Happy Dasara
Home Front Page ಕೆಪಿಎಸ್ ಸಿಗೆ ಹೊಸ ರೂಪ: ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸಮಿತಿ ರಚನೆ- ಸಿಎಂ ಡಿಕೆ ಶಿವಕುಮಾರ್

ಕೆಪಿಎಸ್ ಸಿಗೆ ಹೊಸ ರೂಪ: ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸಮಿತಿ ರಚನೆ- ಸಿಎಂ ಡಿಕೆ ಶಿವಕುಮಾರ್

ಕೆಪಿಎಸ್ ಸಿಗೆ ಹೊಸ ರೂಪ: ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸಮಿತಿ ರಚನೆ- ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು, ಅಕ್ಟೋಬರ್,25,2026 (www.justkannada.in): “ಕೆಪಿಎಸ್ ಸಿಗೆ ಹೊಸ ರೂಪ ನೀಡಲಾಗುವುದು. ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸಮಿತಿ ರಚನೆ ಮಾಡಲಾಗಿದೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ  ಉತ್ತರಿಸಿದ ಸಿಎಂ ಡಿಕೆ ಶಿವಕುಮಾರ್, ಕೆಪಿಎಸ್ ಸಿ ಅಕ್ರಮದ ಆರೋಪಿ ಜ್ಞಾನೇಂದ್ರ ಅವರ ವಿಚಾರಣೆಗೆ ಅನುಮತಿ ನೀಡಿರುವ ಬಗ್ಗೆ ಕೇಳಿದಾಗ, “ಕೆಲವು ವಿಚಾರಗಳು ಗಮನಕ್ಕೆ ಬಂದಿದ್ದು, ಇಡಿ ಹಾಗೂ ನಮ್ಮ ಅಧಿಕಾರಿಗಳು ತನಿಖೆ ಮಾಡಿದ್ದು, ಸತ್ಯಾಂಶ ಹೊರತರಲು ಕೂಡಲೇ ವಿಚಾರಣೆಗೆ ಅನುಮತಿ ನೀಡಲಾಗಿದೆ. ನಮ್ಮ ಮಕ್ಕಳು ಕಷ್ಟಪಟ್ಟು ಓದಿರುತ್ತಾರೆ. ಈ ರೀತಿ ದುಡ್ಡು, ಶಿಫಾರಸ್ಸಿಗೆ ಅವಕಾಶ ನೀಡುವುದು ಸರಿಯಲ್ಲ. ಈ ಹಿಂದೆಯೂ ಕೆಪಿಎಸ್ಸಿಯಲ್ಲಿ ಅನೇಕ ಅವಾಂತರಗಳನ್ನು ನೋಡಿದ್ದೇವೆ. ಇದರ ನಿವಾರಣೆಗೆ ಸಮಿತಿ ರಚಿಸಿದ್ದು, ಅದರ ಅಭಿಪ್ರಾಯ ಪಡೆಯಲಾಗುವುದು. ಕೆಪಿಎಸ್ಸಿಗೆ ಹೊಸ ರೂಪ ನೀಡಬೇಕಿದೆ. ನಮ್ಮ ರಾಷ್ಟ್ರೀಯ ನಾಯಕರು ಶಿಕ್ಷಣ ವ್ಯವಸ್ಥೆ ಸುಧಾರಣೆ ಬಗ್ಗೆ ನಮಗೆ ಎಚ್ಚರಿಕೆ ನೀಡಿದ್ದಾರೆ. ಸಚಿವ ಯು ಟಿ ಖಾದರ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ನಾನು ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರು ಪರಿಶುದ್ಧ ಪರೀಕ್ಷಾ ವ್ಯವಸ್ಥೆಗೆ ಆಲೋಚನೆ ಮಾಡಿದ್ದು, ಇದಕ್ಕೆ ಸೂಕ್ತ ಮಾರ್ಗದರ್ಶನ ನೀಡಿದ್ದೇವೆ” ಎಂದರು.ಕೆಪಿಎಸ್ ಸಿಗೆ ಹೊಸ ರೂಪ: ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸಮಿತಿ ರಚನೆ- ಸಿಎಂ ಡಿಕೆ ಶಿವಕುಮಾರ್

ಕಬ್ಬು ಬೆಳೆಗಾರರ ಜೊತೆ ಚರ್ಚೆ

ನಾಳೆ ಬೆಳಗಾವಿಯಲ್ಲಿ ಏರ್ಪಡಿಸಿರುವ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಜತೆ ಸಭೆ ಬಗ್ಗೆ ಕೇಳಿದಾಗ, “ಮೊದಲು ರೈತರ ಜೊತೆ ಚರ್ಚೆ ಮಾಡಿ ನಂತರ ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಚರ್ಚೆ ಮಾಡುವೆ. ಕೇಂದ್ರ ಸಚಿವರು ಬೇರೆ ಕೆಲಸದ ನಿಮಿತ್ತ ಭಾಗವಹಿಸುತ್ತಿಲ್ಲ. ಎಲ್ಲಾ ರಾಜ್ಯಗಳಲ್ಲಿ ಈ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ರೈತರು  ಆದಷ್ಟು ಬೇಗ ಕಬ್ಬು ಅರೆಯಬೇಕು ಎಂದು ಒತ್ತಡ ಹಾಕುತ್ತಿದ್ದಾರೆ. ನಾನು ಸಂಸದರು, ಸಚಿವರು ಹಾಗೂ ಶಾಸಕರಿಗೆ ಸಭೆಯಲ್ಲಿ ಭಾಗವಹಿಸಲು ತಿಳಿಸಿದ್ದೇನೆ. ನಾವೆಲ್ಲರೂ ಕೂತು ಚರ್ಚೆ ಮಾಡುತ್ತೇವೆ” ಎಂದರು.New Look jk02_new jk02 new

New Look,  KPSC , Committee, Formed, Improve , Education System, CM DK Shivakumar

English Summary
Title

Karnataka Education Reform: CM DK Shivakumar Forms KPSC & Student Issues Panel

Short Description
Karnataka Chief Minister D.K. Shivakumar has constituted a five-member Cabinet Sub-Committee led by Minister U.T. Khader to spearhead comprehensive education system reforms and resolve the ongoing KPSC recruitment exam row. Addressing student issues, the high-level committee targets massive structural overhauls, focusing on ensuring examination integrity, strictly regulating fee structures, and building an employment-oriented curriculum. The new initiative aims to root out exam malpractice, enhance mental health support systems, and future-proof Karnataka's academic framework. Stakeholder consultations are underway to unveil a transparent, modernized future for state students
Keywords
New Look, KPSC, Committee, Formed, Improve, Education System, CM DK Shivakumar