ಅಪರೇಷನ್ ಕಮಲ ಪುಸ್ತಕ ಬರೆಯುವೆ: ಎಲ್ಲಾ ವಿಚಾರ ಹೊರತರುತ್ತೇನೆ ಎಂದ ಮಾಜಿ ಸಚಿವ ಹೆಚ್.ವಿಶ್ವನಾಥ್ …

ಮೈಸೂರು,ಜ,31,2020(www.justkannada.in):   ಅಪರೇಷನ್ ಕಮಲ ಪುಸ್ತಕ ಬರೆಯುವೆ.  ಅಪರೇಷನ್ ಕಮಲದ ಹಿಂದೆ ಯಾರ್ಯಾರಿದ್ದರು ಎಂಬುದನ್ನ ಪುಸ್ತಕದಲ್ಲಿ ತಿಳಿಸುತ್ತೇನೆ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಹೆಚ್,ವಿಶ್ವನಾಥ್, ಅಪರೇಷನ್ ಕಮಲ ಕುರಿತು ಪುಸ್ತಕ ಬರೆಯುತ್ತೇನೆ. ಈಗಾಗಲೇ ಪುಸ್ತಕದಲ್ಲಿ ಎಲ್ಲವನ್ನೂ ದಾಖಲಿಸಿದ್ದೇನೆ. ಅದಕ್ಕೆ ರೂಪಕೊಡುವುದು ಒಂದು ಬಾಕಿ ಇದೆ. ಪುಸ್ತಕದಲ್ಲಿ ಸಮ್ಮಿಶ್ರ ಸರ್ಕಾರದ ಪತನದ ಬೆಳವಣಿಗೆ ದಾಖಲಿಸುವೆ. ಅಪರೇಷನ್ ಕಮಲ ವಿಚಾರದಲ್ಲಿ   ಬಿಜೆಪಿಯವರು ಮಾತ್ರ ಅಲ್ಲ ಕಾಂಗ್ರೆಸ್ ನವರು ಇದ್ದಾರೆ.  ಎಲ್ಲಾ ವಿಚಾರವನ್ನ  ಪುಸ್ತಕದ ಮೂಲಕ ಹೊರತರುತ್ತೇನೆ.  ಮುಂಬೈಗೆ ಹೋಗಿದ್ದು ಕೊಲ್ಕತ್ತಾಗೆ ಹೋಗಿದ್ದು ಎಲ್ಲವನ್ನು ಉಲ್ಲೇಖಿಸುತ್ತೇನೆ ಎಂದು ತಿಳಿಸಿದರು.

ನನಗೆ ಈಗಲೂ ನಂಬಿಕೆ ವಿಶ್ವಾಸವಿದೆ. ಆದ ಚರ್ಚೆ ಮಾತು ಉಳಿಸಿಕೊಳ್ಳಬೇಕು. ನನಗೆ ಯಾವುದೇ  ಪಕ್ಷ.  ಗೊತ್ತಿಲ್ಲ. ಹೈಕಮಾಂಡ್ ಗೊತ್ತಿಲ್ಲ. ನಮಗೆ ಗೊತ್ತಿರೋದು ಸಿಎಂ ಬಿಎಸ್ ಯಡಿಯೂರಪ್ಪ. ಸಿಎಂ ಬಿಎಸ್ ಯಡಿಯೂರಪ್ಪ.  ಕಾಲದ ಧ್ವನಿಯಾಗಬೇಕು ವರಿಷ್ಟರ ಪಕ್ಷದ ಧ್ವನಿಯಾಗಬಾರದು.  ಸಿಎಂ ಬಿಎಸ್ ವೈ ಕೊಟ್ಟ ಮಾತಿ ನಂತೆ ನಡೆದುಕೊಳ್ಳುತ್ತಾರೆ. ಬಿಎಸ್ ವೈ ಮಾತು ಸದಾಕಾಲ ಉಳಿಯುತ್ತದೆ. ರಾಜಕೀಯದಲ್ಲಿ ಕಾಣೋ ಕೈಗಳಿಗಿಂತ ಕಾಣದ ಕೈಗಳು ಜಾಸ್ತಿ ಎಂದು ಹೆಚ್.ವಿಶ್ವನಾಥ್ ನುಡಿದರು.

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲೇ ಬೇಕು. ಇಲ್ಲದಿದ್ದರೇ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತದೆ. ಮಂತ್ರಯಾಗದಿದ್ದರೇ ನಾವು ಉಳಿಯುವುದಿಲ್ಲವಾ..? ಎಂದು ಹೆಚ್.ವಿಶ್ವನಾಥ್ ಪ್ರಶ್ನಿಸಿದರು.

Key words: Operation kamala- book- writing-Former Minister- H.Vishwanath.