ಪಾಸಿಟಿವಿಟಿ ದರ ಕಡಿಮೆ ಬಂದ್ರೆ ಹಂತ ಹಂತವಾಗಿ ಲಾಕ್ ಡೌನ್ ತೆರವಿಗೆ ಸಲಹೆ- ಸಚಿವ ಡಾ.ಕೆ.ಸುಧಾಕರ್.

ಬೆಂಗಳೂರು,ಜೂ,1,2021(www.justkannada.in):  ಲಾಕ್ ಡೌನ್ ಕುರಿತು ತಜ್ಞರು ವರದಿ ನೀಡಿದ್ದಾರೆ. ಪಾಸಿಟಿವಿಟಿ ರೇಟ್ ಕಡಿಮೆ ಬಂದರೇ ಹಂತ ಹಂತವಾಗಿ ಲಾಕ್ ಡೌನ್ ತೆರವಿಗೆ ಸಲಹೆ ನೀಡಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.jk

ಇಂದು ಮಾಧ್ಯಮಗಳ ಜತೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ತಜ್ಞರು ನೀಡಿರುವ ವರದಿಯನ್ನು ಸಿಎಂಗೆ ನೀಡಿದ್ಧೇನೆ. ಪ್ರತಿದಿನ ಸೋಂಕಿತರ ಸಂಖ್ಯೆ 5 ಸಾವಿರಕ್ಕಿಂತ ಕಡಿಮೆ ಕಂಡು ಬಂದಾಗ ಹಂತ ಹಂತವಾಗಿ ಲಾಕ್ ಡೌನ್ ತೆರವಿಗೆ ಸಲಹೆ ನೀಡಿದ್ದಾರೆ. ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ನಮ್ಮ ನಾಯಕರು ಲಾಕ್ ಡೌನ್ ಬಗ್ಗೆ ನಿರ್ಣಯ ಕೈಗೊಳ್ಳುತ್ತಾರೆ. ನಮ್ಮ ಅಭಿಪ್ರಾಯ ಮತ್ತು ಜನಹಿತ ಅಭಿಪ್ರಾಯವನ್ನ ತಿಳಿಸುತ್ತೇವೆ ಎಂದರು.

ಇನ್ನು ಬ್ಲಾಕ್ ಫಂಗಸ್ ಕಣ್ಣಿಗೆ ತಗುಲಿದರೇ ಕಣ್ಣು ತೆಗೆಯಬೇಕಾಗುತ್ತದೆ. ಬ್ಲಾಕ್ ಫಂಗಸ್ ಸೋಂಕನ್ನ ಮೆದುಳಿಗೆ ಹರಡದಂತೆ ನೋಡಿಕೊಳ್ಳಬೇಕು.  ಬ್ಲಾಕ್ ಫಂಗಸ್ ಔಷಧ 1300 ವಯಲ್ಸ್ ಬಂದಿದೆ. ಆದರೆ ಚಿಕಿತ್ಸೆಗೆ ಇದು ಸಾಕಾಗುವುದಿಲ್ಲ. ನಾನು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರ ಜತೆ  ಪ್ರತಿದಿನ ಮಾತನಾಡುತ್ತಿದ್ದೇನೆ. ಬ್ಲಾಕ್ ಫಂಗಸ್ ಗೆ ಚಿಕಿತ್ಸೆಗೆ ಔಷಧದ ಬಗ್ಗೆ ಚರ್ಚಿಸುತ್ತಿದ್ದೇನೆ.  ಜೂನ್,4 ಅಥವಾ 5 ರಂದು ಔಷಧಿ ಕಳಿಸುವುದಾಗಿ ಹೇಳಿದ್ದಾರೆ ಎಂದು ಸಚಿವ ಸುಧಾಕರ್ ತಿಳಿಸಿದರು.

Key words: Positivity- Rate- Low – Lockdown –Clearance-Minister- Dr. K. Sudhakar.