ಕೆಜಿಎಫ್-2 ಚಿತ್ರೀಕರಣ ಮುಂದೂಡಿದ ಚಿತ್ರತಂಡ ?!

ಬೆಂಗಳೂರು, ಮೇ 10, 2019 (www.justkannada.in): ಕೆಜಿಎಫ್ ಚಾಪ್ಟರ್ ೨ ಚಿತ್ರೀಕರಣ ಸದ್ಯ ಮುಂದೂಡಿಕೆಯಾಗಿದೆ.

ಕೆಜಿಎಫ್ ಚಾಪ್ಟರ್ ೧ ಈಗಾಗಲೇ ಸಖತ್ ಸದ್ದು ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬಾರೀ ಹೆಸರು ಮಾಡಿದ ಸಿನಿಮಾ. ಇನ್ನು ಕೆಜಿಎಫ್ ಚಾಪ್ಟರ್ ೨ ಸಿನಿಮಾ ರೆಡಿಯಾಗುತ್ತಿದೆ. ಈಗಾಗಲೇ ಸಿನಿಮಾ ಶೂಟಿಂಗ್ ಪ್ರಾರಂಭವಾಗಿತ್ತು.

ಆದರೆ ಈ ಶೂಟಿಂಗ್ ಮುಂದೂಡಿಕೆಯಾಗಿದೆ ಎನ್ನಲಾಗುತ್ತಿದೆ. ಕೆಜಿಎಫ್ ಸಿನಿಮಾ ಕರಾವಳಿ ಕಡೆಗಳಲ್ಲಿ ಚಿತ್ರೀಕರಣ ಮಾಡಲು ತೀರ್ಮಾನ ಮಾಡಲಾಗಿದೆ.

ಮಂಗಳೂರು, ಮಲ್ಪೆ, ಉಡುಪಿ ಕಡೆಗಳಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದೆಯಂತೆ. ಹಾಗಾಗಿ ಶೂಟಿಂಗ್ ಸ್ಥಳಗಳ ಹುಡುಕಾಟ ನಡೆಸಲಾಗಿದೆಯಂತೆ. ಹೀಗಾಗಿ ಶೂಟಿಂಗ್ ನಿಂತಿದೆ ಎಂದು ಮೂಲಗಳು ತಿಳಿಸಿವೆ.