Saturday, November 7, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ಶಾಕಿಂಗ್ ನ್ಯೂಸ್: ಹೃದಯಾಘಾತದಿಂದ ಮೃತರಾಪಟ್ಟವರಲ್ಲಿ ಮೈಸೂರಿಗರೇ ಹೆಚ್ಚು..!

ಶಾಕಿಂಗ್ ನ್ಯೂಸ್: ಹೃದಯಾಘಾತದಿಂದ ಮೃತರಾಪಟ್ಟವರಲ್ಲಿ ಮೈಸೂರಿಗರೇ ಹೆಚ್ಚು..!

ಮೈಸೂರು,ಜುಲೈ,1,2025 (www.justkannada.in) : ಅರಮನೆ ನಗರಿ, ಪಾರಂಪರಿಕ ನಗರಿ, ನಿವೃತ್ತರ ಸ್ವರ್ಗ ಎಂದು ಪ್ರಸಿದ್ದಿಯಾಗಿರುವ ಮೈಸೂರಿಗೆ  ಈಗ ಹೃದಯಾಘಾತ ನರಕ ಎಂಬ ಅಪಕೀರ್ತಿ ಬಂದಿದೆ. ರಾಜ್ಯದಲ್ಲಿಯೇ ಹೃದಯಾಘಾತದಿಂದ ಮೃತರಾದವಲ್ಲಿ ಮೈಸೂರಿಗರೇ ಹೆಚ್ಚು ಎಂಬ ಮಾಹಿತಿ ಜಯದೇವ ಆಸ್ಪತ್ರೆ ವರದಿಯಿಂದ ಲಭ್ಯವಾಗಿದೆ.

ಈ ಕುರಿತು ಕಳವಳ ವ್ಯಕ್ತಪಡಿಸಿದ ಜಯದೇವ ಹೃದ್ರೋಗ ಆಸ್ಪತ್ರೆ ಮುಖ್ಯಸ್ಥ ಡಾ.ಸದಾನಂದ್, ಪ್ರತಿ‌ದಿನ ಹೃದಯಾಘಾತದಿಂದ 3 ರಿಂದ ನಾಲ್ಕು ಮಂದಿ ಮೃತಪಡುತ್ತಿದ್ದಾರೆ. ಪ್ರತಿಶತ ಪ್ರತಿ ತಿಂಗಳು 100 ರಿಂದ 120 ಮಂದಿ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ.  ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ನೂರು ಮಂದಿ ಸಾವನ್ನಪ್ಪುತ್ತಿರುವುದಾಗಿ ತಿಳಿಸಿದ್ದಾರೆ.ಶಾಕಿಂಗ್ ನ್ಯೂಸ್: ಹೃದಯಾಘಾತದಿಂದ ಮೃತರಾಪಟ್ಟವರಲ್ಲಿ ಮೈಸೂರಿಗರೇ ಹೆಚ್ಚು..! ja...

ಏಪ್ರಿಲ್ ತಿಂಗಳಲ್ಲಿ ಹೃದಯಾಘಾತದಿಂದ 109 ಮಂದಿ ಸಾವನ್ನಪ್ಪಿದರೆ ಮೇ ತಿಂಗಳಲ್ಲಿ 106 ಮಂದಿ ಮೃತಪಟ್ಟಿದ್ದಾರೆ. ತೀವ್ರ ಹೃದಯಾಘತಾದಿಂದಲೇ  ಪ್ರತಿತಿಂಗಳು 70 ರಿಂದ 80 ಮಂದಿ ಸಾವನ್ನಪ್ಪುತ್ತಿದ್ದು, ಈ ಪೈಕಿ ಬಹುತೇಕ ಯುವಕ ಸಮೂಹದವರೇ ಹೆಚ್ಚು ಎಂದು ಡಾ.ಸದಾನಂದ್ ಅವರು ತಿಳಿಸಿದ್ದಾರೆ.

vtu

Key words: Most, deaths, heart attacks, Mysore