ಬೆಂಗಳೂರು,ನವೆಂಬರ್,7,2026 (www.justkannada.in): ಸರ್ಕಾರಿ ಬಸ್ ಟಿಕೆಟ್ ದರ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಗೆ ಕಾರಣ ಏನು ಎಂಬುದನ್ನು ಜನರ ಮುಂದಿಡಿ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದರು.
ಇಂದು ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಕಮಿಷನ್ ಜಾಸ್ತಿ ಪಡೆಯೋಕೆ ದರಗಳ ಏರಿಕೆ ಮಾಡಿದ್ದಾರೆ. ಬಸ್ ಟಿಕೆಟ್ ದರ ಕಡಿಮೆ ಮಾಡಿದರೆ ಸರ್ಕಾರ ನಡೆಸಲು ಆಗಲ್ಲ. ಶೇ 35 ರಿಂದ 40 ರಷ್ಟು ಬಸ್ ಟಿಕೆದ ದರ ಏರಿಕೆ ಮಾಡಿದ್ದಾರೆ. ಇಷ್ಟು ದರ ಏರಿಕೆಗೆ ಕಾರಣ ಏನು ಇದನ್ನ ಜನರ ಮುಂದೆ ಇಡಿ ಎಂದರು.
ಶಕ್ತಿ ಯೋಜನೆಯಡಿ ಮಹಿಳೆಯರ ಪ್ರಯಾಣಕ್ಕೆ ವಿರೋಧವಿಲ್ಲ. ಈ ಯೋಜನೆ ಕೊಡುವ ಮೊದಲು ಆರ್ಥಿಕ ಸ್ಥಿತಿ ಪರಿಶೀಲಿಸಬೇಕಿತ್ತು ಯಾವ ರೀತಿ ಹಣ ಹೊಂದಿಸಬೇಕು ಅಂತಾ ತೀರ್ಮಾನ ಮಾಡಬೇಕಿತ್ತು. ಮಾತೆತ್ತಿದರೇ ಕೇಂದ್ರ ಪೆಟ್ರೋಲ್ ಡೀಸೆಲ್ ದರ ಏರಿಸಿದೆ ಅಂತೀರಿ. ನಿಮ್ಮ ಇಲಾಖೆಯಲ್ಲಿ ಅಕ್ರಮವಾಗಿ ಸೋರಿಕೆ ಆಗುತ್ತಿರುವುದನ್ನ ನಿಲ್ಲಿಸಿ. ಯಾಕೆ ದರ ಏರಿಕೆ ಮಾಡಿದ್ದೇವೆ ಅಂತಾ ಜನರ ಮುಂದೆ ಇಡಲಿ ಎಂದು ಹೆಚ್ ಡಿಕೆ ಒತ್ತಾಯಿಸಿದರು.










