Saturday, November 7, 2026

Dasara Wishes

Altercation DasraWishes_JK DasraWishes JK
Happy Dasara
Home Front Page ಸಚಿವ ಕೃಷ್ಣ ಭೈರೇಗೌಡರ ಮುಂದೆಯೇ ಮಾಜಿ MLC ಮತ್ತು ಶಾಸಕರ ನಡುವೆ ಗಲಾಟೆ, ಹೈಡ್ರಾಮಾ.

ಸಚಿವ ಕೃಷ್ಣ ಭೈರೇಗೌಡರ ಮುಂದೆಯೇ ಮಾಜಿ MLC ಮತ್ತು ಶಾಸಕರ ನಡುವೆ ಗಲಾಟೆ, ಹೈಡ್ರಾಮಾ.

ಸಚಿವ ಕೃಷ್ಣ ಭೈರೇಗೌಡರ ಮುಂದೆಯೇ ಮಾಜಿ MLC ಮತ್ತು ಶಾಸಕರ ನಡುವೆ ಗಲಾಟೆ, ಹೈಡ್ರಾಮಾ.

ಬೆಂಗಳೂರು, ನವೆಂಬರ್,7,2026 (www.justkannada.in):  ಬೆಂಗಳೂರಿನಲ್ಲಿ ಬೆಂಗಳೂರು ನಗರಾಭಿವೃದ್ದಿ ಸಚಿವ ಕೃಷ್ಣಭೈರೇಗೌಡರ  ಮುಂದೆಯೇ ಬಿಜೆಪಿ ಶಾಸಕ ಬೈರತಿ ಬಸವರಾಜ್ ಮತ್ತು ಕಾಂಗ್ರೆಸ್ ಮಾಜಿ ಎಂಎಲ್ ಸಿ ನಾರಾಯಣಸ್ವಾಮಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ನಡೆದಿದೆ.

ವೈಟ್‌ಫೀಲ್ಡ್‌ ಸಮೀಪದ ಟಿನ್ ಫ್ಯಾಕ್ಟರಿ ಬಳಿ ನಡೆದ ವಾರ್ಡ್ ಒನ್ ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡರ ಮುಂದೆಯೇ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ತೀವ್ರ  ವಾದ ವಾಗ್ವಾದ ಗಲಾಟೆ ನಡೆದಿದೆ. ವಾರ್ಡ್ ಗಳ ಅಭಿವೃದ್ಧಿ ಮತ್ತು ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜಿಬಿಎ ವ್ಯಾಪ್ತಿಯಲ್ಲಿ ಒನ್ ವಾರ್ಡ್ ಅಭಿಯಾನ ನಡೆಯುತ್ತಾ ಇದೆ. ಮೊದಲ ಹಂತದ ಅಭಿಯಾನದಲ್ಲಿ 43 ವಾರ್ಡ್ ಗಳನ್ನ ಅಭಿವೃದ್ಧಿ ಮಾಡಿದ್ದಾರೆ. ಇಂದು 2ನೇ ಹಂತದ ವಾರ್ಡ್ ಒನ್ ಅಭಿಯಾನಕ್ಕೆ ಸಚಿವ ಕೃಷ್ಣಬೈರೇಗೌಡ ಕೆ.ಆರ್ ಪುರಂ ಕ್ಷೇತ್ರದ ಟಿನ್ ಫ್ಯಾಕ್ಟರಿ ಬಳಿ ಚಾಲನೆ ನೀಡಿದರು. ವಾರ್ಡ್ ಒನ್ ಅಭಿಯಾನಕ್ಕೆ ಚಾಲನೆ ನೀಡುವ ವೇಳೆ ಕೆ.ಆರ್ ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಮತ್ತು ಎಂಎಲ್ ಸಿ ನಾರಾಯಣಸ್ವಾಮಿ ನಡುವೆ ಗಲಾಟೆ ಆಗಿದೆ.ಸಚಿವ ಕೃಷ್ಣ ಭೈರೇಗೌಡರ ಮುಂದೆಯೇ ಮಾಜಿ MLC ಮತ್ತು ಶಾಸಕರ ನಡುವೆ ಗಲಾಟೆ, ಹೈಡ್ರಾಮಾ

ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಆರೋಪ ಪ್ರಮುಖ ಆಕ್ರೋಶಕ್ಕೆ ಕಾರಣವಾಗಿತ್ತು. ಬಿಜೆಪಿ ಶಾಸಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದು  ಗಲಾಟೆ ಶುರುವಾಯಿತು.Altercation jk02_new jk02 new

ರಸ್ತೆಗುಂಡಿ ಮುಚ್ಚಿಲ್ಲ ಎಂದು ಮೂಲಭೂತ ಸಮಸ್ಯೆಗಳ ಬಗ್ಗೆ ಸಚಿವರಿಗೆ ಸ್ಥಳೀಯರು ದೂರು ನೀಡಲು ಮುಂದಾದರು. ಈ ವೇಳೆ ನಾರಾಯಣ ಸ್ವಾಮಿ ಸ್ಥಳೀಯರಿಗೆ ಶಾಸಕರು ಏನು ಕೆಲಸ‌ ಮಾಡಿಲ್ಲ ಎಂದು ಹೇಳಿದ್ದು  ಈ ವೇಳೆ  ಮಧ್ಯೆ ಪ್ರವೇಶಿಸಿದ ಶಾಸಕ ಬೈರತಿ ಬಸವರಾಜ್ ನಡುವೆ ಗಲಾಟೆ ಆಗಿದೆ. ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ಆಗಿ ಪೊಲೀಸರು ಮಧ್ಯೆ ಪ್ರವೇಶಿಸಿ ಗಲಾಟೆ  ನಿಲ್ಲಿಸಿದರು.

 

English Summary
Title

High Drama: Minister Krishna Byre Gowda Intervenes as Bengaluru BJP, Congress Leaders Clash

Short Description
High drama unfolded in Bengaluru during a development inspection led by Minister Krishna Byre Gowda. A heated altercation erupted near the Tin Factory when Congress MLC Narayanaswamy and BJP MLA Byrathi Basavaraj clashed over local constituency development. The verbal spat quickly escalated into a chaotic showdown as rival party workers shoved each other, nearly turning physical. Minister Krishna Byre Gowda ultimately intervened to diffuse the tension, reprimanding both sides and urging them to prioritize public welfare over political rivalry.
Keywords
Altercation, high drama, between, former MLC, MLA, presence, Minister, Krishna Byre Gowda.